“ಪಂಚೇಂದ್ರಿಯಗಳಲ್ಲಿ ಕಿವಿ ಅವಗಣನೆಗೆ ಒಳಗಾದ ಅಂಗ’
ವಿಶ್ವ ಶ್ರವಣ ದಿನಾಚರಣೆ
Team Udayavani, Mar 30, 2019, 6:30 AM IST
ಉಡುಪಿ: ಪಂಚೇಂದ್ರಿಯ ಗಳಲ್ಲಿ ಪ್ರಮುಖ ಅಂಗ ಕಿವಿಯಾಗಿದ್ದು ಅದು ಜನರ ಅವಗಣನೆಗೆ ಒಳಗಾದ ಅಂಗವಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಶ್ರೀರಾಮ ರಾವ್ ಹೇಳಿದರು.
ಉಡುಪಿ ಜಿಲ್ಲಾಸ್ಪತ್ರೆ, ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು ಇವುಗಳ ಸಹಭಾಗಿತ್ವದಲ್ಲಿ ವಿಶ್ವ ಶ್ರವಣ ದಿನಾಚರಣೆ ಮತ್ತು ಶ್ರವಣ ತಪಾಸಣೆ ಶಿಬಿರ ಉದ್ಘಾಟಿಸಿದರು.
ಉಡುಪಿ ಜಿಲ್ಲಾಸ್ಪತ್ರೆ ವಾಕ್ ಮತ್ತು ಶ್ರವಣ ತಜ್ಞ ಅಕ್ಷತಾ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ|ರಾಮರಾಯ ಆಚಾರ್ಯ ಸ್ವಾಗತಿಸಿದರು. ಐಕ್ಯೂಎಸಿ ಸಂಚಾಲಕ ಪ್ರೊ|ಸೋಜನ್ ಕೆ.ಜಿ. ಶ್ರವಣದೋಷ ನಿವಾರಣೆ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿದರು. ವಿದ್ಯಾರ್ಥಿನಿ ಶ್ರುತಿ ನಿರೂಪಿಸಿದರು. ಶ್ರವಣದೋಷ ಮಕ್ಕಳ ಬೋಧಕರಾದ ಕಮಲಾ ಬಾಯಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.