ವೀಸಾ ನೀಡದೆ ಸಂಸ್ಥೆ ವಂಚನೆ: ದೂರು
Team Udayavani, Jan 31, 2018, 12:42 PM IST
ಉಡುಪಿ: ಹಣ, ಪಾಸ್‌ಪೋರ್ಟ್ ಪಡೆದು ವೀಸಾ ನೀಡದೆ ಉಡುಪಿಯ ಸಂಸ್ಥೆಯೊಂದು ವಂಚಿಸಿದೆ ಎಂದು ಶಿರ್ವದ ನೀಮಾ ರಾವ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಉದ್ಯೋಗ ಆಕಾಂಕ್ಷಿ ಯಾಗಿದ್ದು, ಉಡುಪಿ ರಾಜ್ ಟವರ್‌ನಲ್ಲಿರುವ ಆಪ್ಟಿಮಾ ಉಡುಪಿ ಸಂಸ್ಥೆಗೆ ಡಿಪಿ10 ವೀಸಾ ಪಡೆಯಲು 2 ಲ.ರೂ. ಹಾಗೂ ಸಂಸ್ಥೆಯವರು ಕೇಳಿ ಕೊಂಡಂತೆ ಮೂಲ ಪಾಸ್‌ಪೋರ್ಟ್ ಕೂಡ ನೀಡಿದ್ದೆ. ದಿನಗಳು ಕಳೆದರೂ ವೀಸಾ ಬಾರದ ಬಗ್ಗೆ ಆಪ್ಟಿಮಾ ಸಂಸ್ಥೆಯವರಲ್ಲಿ ವಿಚಾರಿಸಲಾಗಿತ್ತು. ಆದರೆ ಅವರಿಂದ ಸಮರ್ಪಕ ಉತ್ತರ ಬಂದಿರಲಿಲ್ಲ. ಅನಂತರ ಇಂಡಿಯನ್ ಎಂಬೆಸಿಯಲ್ಲಿ ವಿಚಾರಿಸಿದಾಗ, ತನ್ನ ಹೆಸರಿನಲ್ಲಿ ವೀಸಾ ಕೋರಿ ಯಾವುದೇ ಅರ್ಜಿ ಬಂದಿರುವುದಿಲ್ಲ, ಆ ಸಂಸ್ಥೆ ನೊಂದಣಿಯೇ ಆಗಿಲ್ಲ ಎಂದು ಗೊತ್ತಾಗಿತ್ತು.
ವಿದೇಶಿ ಉದ್ಯೋಗ ಸಿಗುವುದಿಲ್ಲ ಎಂದು ತಿಳಿದು ವೀಸಾ ಕಾರ್ಯ ರದ್ದು ಮಾಡಲಾಗಿತ್ತು. ಬಳಿಕ ವೀಸಾ ಕೊಡಿಸಲು ಪಡೆದಿರುವ ಹಣ ಹಾಗೂ ಮೂಲ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸುವಂತೆ ಆಪ್ಟಿಮಾ ಸಂಸ್ಥೆಯವರಲ್ಲಿ ಕೇಳಿಕೊಂಡರೂ ಹಿಂತಿರುಗಿಸಿರಲಿಲ್ಲ. ಆ ಸಂಸ್ಥೆಯು ಯಾವುದೇ ಮಾನ್ಯತೆ ಅಥವಾ ಸರಕಾರಿ ಪರವಾನಿಗೆ ಹೊಂದದೇ ವೀಸಾ ಕೊಡಿಸುವುದಾಗಿ ಹೇಳಿ ವಂಚಿಸಿದೆ ಎಂದು ನೀಮಾ ರಾವ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್