ಆಗುಂಬೆ ಘಾಟಿ 7ನೇ ತಿರುವಿನಲ್ಲಿ ಭೂಕುಸಿತ
Team Udayavani, Jun 29, 2018, 11:04 AM IST
ಹೆಬ್ರಿ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ-ಶಿವಮೊಗ್ಗ ಸಂಪರ್ಕಿಸುವ ಪ್ರಮುಖ ಘಾಟಿ ರಸ್ತೆ ಆಗುಂಬೆಯಲ್ಲಿ ಭೂಕುಸಿತ ಉಂಟಾಗಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಉಡುಪಿ- ತೀರ್ಥಹಳ್ಳಿ ವಿಭಾಗದ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶವಾದ 7ನೇ ತಿರುವಿನ ರಸ್ತೆಯ ಅಂಚು 40 ಮೀ. ಉದ್ದಕ್ಕೆ ಕುಸಿದಿದೆ. ಭೂಕುಸಿತದಿಂದ ರಸ್ತೆ ಅಂಚು ಜರಿದಿದ್ದು, ರಸ್ತೆಗೆ ಹಾನಿಯಾಗಿದೆ. ಆದರೆ ಸದ್ಯ ಸಂಚಾರಕ್ಕೆ ಅಡಚಣೆ ಆಗಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ವಾಹನ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
5 ನಿಮಿಷಕ್ಕೊಮ್ಮೆ ಸಂಚಾರ
ಭೂಕುಸಿತ ಪರಿಣಾಮ ವಾಹನ ದಟ್ಟಣೆ ನಿಭಾಯಿಸಲು ಆಗುಂಬೆ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ಪ್ರತಿ 5 ನಿಮಿಷಕ್ಕೊಮ್ಮೆ ಬಿಡಲಾಗುತ್ತಿದೆ. ಜತೆಗೆ ವಿಶೇಷ ಬಂದೋಬಬಸ್ತ್ ಗೆ ಮಾಡಲಾಗಿದೆ.
ಕುಸಿದ ತಡೆಗೋಡೆಗಳು
ಈ ಮೊದಲು ಘಾಟಿ ತಿರುವಿನಲ್ಲಿ ಕಟ್ಟಿದ ತಡೆಗೋಡೆಗಳಿಗೆ ವಾಹನಗಳು ಡಿಕ್ಕಿ ಹೊಡೆದು ಬಿರುಕು ಬಿಟ್ಟಿದ್ದು, ಮಳೆಗೆ ಅವುಗಳು ಕುಸಿದಿವೆ. ಶಿವಮೊಗ್ಗ ವ್ಯಾಪ್ತಿಯ 5ನೇ ಸುತ್ತು ಹಾಗೂ ಉಡುಪಿ ವ್ಯಾಪ್ತಿಯ 6ನೇ ತಿರುವಿನಲ್ಲಿ ತಡೆಗೋಡೆ ಕುಸಿದಿದ್ದು ವಾಹನಗಳು ನಿಯಂತ್ರಣ ತಪ್ಪಿದರೆ ಅಪಾಯ ತಪ್ಪಿದ್ದಲ್ಲ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ
ಭೂಕುಸಿತ ಉಂಟಾದ ಸ್ಥಳಕ್ಕೆ ರಾ.ಹೆ. ಸಹಾಯಕ ಎಂಜಿನಿಯರ್ ರವಿ, ಕಾರ್ಕಳ ತಹಶೀಲ್ದಾರ್ ಮಹಮ್ಮದ್ ಇಸಾಕ್ ಕಾರ್ಕಳ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ರಾತ್ರಿ ಬಸ್ಸು ಸಂಚಾರ ಬಂದ್
ಭದ್ರತಾ ದೃಷ್ಠಿಯಿಂದ ಕುಸಿತದ ಪ್ರದೇಶ ದುರಸ್ಥಿಯಾಗುವ ತನಕ ರಾತ್ರಿ ವೇಳೆ ಬಸ್ಸು ಸಂಚಾರವನ್ನು ನಿರ್ಬಂಧಿಸಲಾಗಿದೆ.
ರಸ್ತೆಯಲ್ಲೇ ಹರಿವ ನೀರು
ಆಗುಂಬೆ ಘಾಟಿಯ 7ನೇ ಸುತ್ತು ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಿಲ್ಲ. ಇನ್ನು 7ನೇ ಸುತ್ತಿನ ಕೆಳಭಾಗ ಉಡುಪಿ ಜಿಲ್ಲೆಗೆ ಬರುತ್ತಿದ್ದು, ಇಲ್ಲಿ ಚರಂಡಿಯೇ ಇಲ್ಲ. ಆದ್ದರಿಂದ ಈ ಭಾಗದಲ್ಲಿ ನೀರು ರಸ್ತೆಯಲ್ಲೇ ಹರಿದು ಭೂಕುಸಿತಕ್ಕೆ ಕಾರಣವಾಗಿದೆ. ಮರಗಳೂ ಅಪಾಯಕಾರಿಯಾಗಿ ರಸ್ತೆಗೆ ವಾಲಿಕೊಂಡಿದೆ.
ಘನ ವಾಹನಗಳಿಗೆ ಪ್ರವೇಶವಿಲ್ಲ
ಭೂಕುಸಿತ ಉಂಟಾದ ರಸ್ತೆಯು ಕಡಿದಾದ ತಿರುವು ಆದ ಕಾರಣ ಅಧಿಕ ಸಾಮರ್ಥ್ಯದ ಲಾರಿ, ಟಿಪ್ಪರ್ ಗಳನ್ನು ರಸ್ತೆ ದುರಸ್ತಿ ಆಗುವಲ್ಲಿವರೆಗೆ ಮತ್ತು ರಾತ್ರಿ ಬಸ್ ಸಂಚಾರ ನಿಷೇಧಿಸಿ ಆದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಭಯ ಬೇಡ
ಈ ಹಿಂದೆ ಟಿಪ್ಪರ್ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಬಿರುಕುಗೊಂಡಿತ್ತು. ಈಗ ತಡೆಗೋಡೆ ಕುಸಿತವಾದ ಪ್ರದೇಶಗಳಲ್ಲಿ ಸ್ಯಾಂಡ್‌ಬ್ಯಾಗ್ ಗಳನ್ನು ಅಳವಡಿಸಲಾಗುತ್ತಿದ್ದು ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ.
– ಮಂಜುನಾಥ ನಾಯಕ್, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್
ಇಲಾಖೆ ಜಾಗೃತವಾಗಲಿ
ಈ ಹಿಂದೆ ಘಾಟಿ ದುರಸ್ತಿ ವೇಳೆ ಸಂಪರ್ಕ ಕಡಿತವಾಗಿತ್ತು. ಈಗ ರಸ್ತೆಯಲ್ಲೇ ನೀರು ಹರಿಯುವ ಸಮಸ್ಯೆಯಿಂದ ಘಾಟಿ ಕುಸಿಯುವ ಬೀತಿಯಲ್ಲಿದೆ. ಕೂಡಲೇ ಇಲಾಖೆ ಜಾಗೃತವಾಗಲಿ.
– ವೆಂಕಟೇಶ್ ಶೆಟ್ಟಿ, ಸೋಮೇಶ್ವರ
– ದಟ್ಟಣೆ ನಿಭಾವಣೆಗೆ 5 ನಿಮಿಷಕ್ಕೊಮ್ಮೆ ಸಂಚಾರ
– ಚರಂಡಿಯಿಲ್ಲದೇ ರಸ್ತೆಯಲ್ಲಿ ನೀರು ಹರಿದ ಪರಿಣಾಮ
– ರಾತ್ರಿ ಬಸ್ ಸಂಚಾರ, ಘನ ವಾಹನಗಳಿಗೆ ನಿಷೇಧ
– ಸ್ಥಳಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
R Ashwin: ಅಶ್ವಿನ್‌ಗೆ ಖೇಲ್ ರತ್ನ; ಕ್ರೀಡಾ ಸಚಿವರಿಗೆ ಸಂಸದರಿಂದ ಪತ್ರ
Virat Kohli: ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ವಿರಾಟ್ ನೂತನ ಕೇಶ ವಿನ್ಯಾಸ
Hala Modi; ಮಿನಿ ಹಿಂದೂಸ್ಥಾನಕ್ಕೆ ಸಾಕ್ಷಿಯಾಗುತ್ತಿದ್ದೇನೆ: ಕುವೈಟ್ ನಲ್ಲಿ ಮೋದಿ
Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.