2024ರ ಕ್ರೀಡಾ ಪ್ರತಿಭೆಗಳಿಗೆ ಒಲಿಂಪಿಕ್ಸ್‌ಗೆ ಸ್ಪರ್ಧಿಸುವ ಗುರಿ

ಹಿಂದುಳಿದ ಜನಾಂಗದ ಪ್ರತಿಭಾನ್ವಿತ ಯುವಕ್ರೀಡಾಳುಗಳ ಪೋಷಣೆಗೆ ಮಾಹೆ ಸಾಥ್‌

Team Udayavani, May 28, 2019, 6:03 AM IST

olympics

ಉಡುಪಿ: 2024ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಲುವಾಗಿ ಹಿಂದುಳಿತ ಜನಾಂಗದ ಕ್ರೀಡಾಪ್ರತಿಭೆಯನ್ನು ಗುರುತಿಸಿ ಶಿಕ್ಷಣ ನೀಡುವ ಎನ್‌ಜಿಒ ಸಂಸ್ಥೆ ಬ್ರಿಡ್ಜಸ್‌ ಆಫ್ ನ್ಪೋರ್ಟ್ಸ್ ಎನ್‌ಜಿಒ ಸಂಸ್ಥೆಗೆ ಈ ಬಾರಿ ಮಣಿಪಾಲ ವಿಶ್ವವಿದ್ಯಾನಿಲಯ ಸಾಥ್‌ ನೀಡಿದೆ. ಉತ್ತರ ಕರ್ನಾಟಕ ಮೂಲದ ಶೇ.80ರಷ್ಟು ಸಿದ್ದಿ ಜನಾಂಗ ಹಾಗೂ ಶೇ.20ರಷ್ಟು ಗೌಳಿ, ಲಂಬಾನಿ ಜನಾಂಗದವರು ಮಣಿಪಾಲ ವಿ.ವಿ. ಕ್ಯಾಂಪಸ್‌ನಲ್ಲಿ ಕಠಿನ ತರಬೇತಿ ಪಡೆಯುತ್ತಿದ್ದಾರೆ.

ಈ ಎನ್‌ಜಿಒ ಸಂಸ್ಥೆಯು 2017ರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ನಡೆಸುತ್ತಿತ್ತು. ಇದಕ್ಕೆ ಈ ಬಾರಿ ಮಾಹೆಯು ಕೈಜೋಡಿಸಿರುವುದರಿಂದ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

ಆಯ್ಕೆ ಹೇಗೆ
ಉತ್ತರ ಕರ್ನಾಟಕ ಜಿಲ್ಲೆಯ ಮುಂಡಗೋಡು ತಾಲೂಕಿನಲ್ಲಿ ಆ್ಯತ್ಲೆಟಿಕ್‌ ಸ್ಪರ್ಧೆ ಆಯೋಜಿಸಿ ಪ್ರತಿಭಾನ್ವಿತರನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಆಯ್ಕೆಯಾದವರಿಗೆ ಈ ಎನ್‌ಜಿಒ ಸಂಸ್ಥೆಯು ಊಟ, ವಸತಿ ಸಹಿತ ಎಲ್ಲ ರೀತಿಯ ನೆರವನ್ನು ಉಚಿತವಾಗಿ ನೀಡುತ್ತದೆ. ಮುಂಡಗೋಡ್‌ನ‌ ಲೊಯೋಲಾ ಶಿಕ್ಷಣ ಸಂಸ್ಥೆಯಲ್ಲಿ ಅವರಿಗೆ ಉಚಿತ ವಿದ್ಯಾಭ್ಯಾಸವೂ ಸಿಗುತ್ತದೆ. 2018ರಲ್ಲಿ ಈ ಎನ್‌ಜಿಒ ಸಂಸ್ಥೆಯ ನಾಲ್ಕು ಮಂದಿ ವಿದ್ಯಾರ್ಥಿಗಳು ಮೈಸೂರಿನಲ್ಲಿ ಜರಗಿದ ರಾಜ್ಯಮಟ್ಟದ ಆ್ಯತ್ಲೆಟಿಕ್ಸ್‌ನಲ್ಲಿ ಭಾಗವಹಿಸಿ 4ನೇ ಸ್ಥಾನ ಗಳಿಸಿದ್ದರು.

ಮಾಹೆ ನೆರವು
ಮಣಿಪಾಲದಲ್ಲಿ 15 ದಿನಗಳ ಕಾಲ ಕಠಿನ ತರಬೇತಿ ನಡೆಯಲಿದ್ದು, ಕ್ರೀಡಾ ವಿಜ್ಞಾನ, ಆರೋಗ್ಯ ಮತ್ತು ಸಂಶೋಧನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ತರಬೇತಿ ನಡೆಯುತ್ತದೆ. ಬೆಳಗ್ಗೆ 6ರಿಂದ 8 ತಾಂತ್ರಿಕ ತರಬೇತಿ, 11ರಿಂದ 1 ಬಲ ಮತ್ತು ಆತ್ಮವಿಶ್ವಾಸ, ಸಂಜೆ 4.30ರಿಂದ 7 ಮರಳಿನಲ್ಲಿ ತರಬೇತಿ, ರಾತ್ರಿ 8ರಿಂದ 9 ಗಂಟೆಯವರೆಗೆ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಚೇತರಿಕೆ ತರಬೇತಿ ನೀಡಲಾಗುತ್ತದೆ.

ಒಲಂಪಿಕ್ಸ್‌ ತರಬೇತಿ
100 ಮೀ.ನಿಂದ 5000 ಮೀ. ಓಟದ ಸ್ಪರ್ಧೆಯ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. 8 ವರ್ಷದಿಂದ 17ವರ್ಷದ ಮಕ್ಕಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಾಹೆ ಬೆಂಬಲದಿಂದಾಗಿ ಕ್ರೀಡಾಳುಗಳಿಗೆ ಇಲ್ಲಿನ ನ್ಪೋಟ್ಸ್‌ ಸೈನ್ಸ್‌ ಲ್ಯಾಬ್‌ನಲ್ಲಿ ವೈಜ್ಞಾನಿಕ ಜ್ಞಾನವೂ ಸಿಗುತ್ತದೆ. ಒಬ್ಬ ರಾಷ್ಟಮಟ್ಟದ ಆ್ಯತ್ಲೆಟಿಕ್ಸ್‌ಗಿರುವ ಗುಣಲಕ್ಷಣಗಳನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ.

ಬೀಚ್‌ನಲ್ಲಿ ಪ್ಯಾರಚೂಟ್‌ ಹಾಕಿ ಓಟ, ಹಾಗೂ ಸಮುದ್ರದ ಅಲೆಗಳಿಗೆ ವಿರುದ್ಧವಾಗಿ ಓಡುವ ತರಬೇತಿ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಸ್ನಾಯುಬಲ ವೃದ್ಧಿಯಾಗುತ್ತದೆ ಎನ್ನುತ್ತಾರೆ ತರಬೇತುದಾರ ರಿಜ್ವಾನ್‌.

ಯಾರಿಗೂ ಕಡಿಮೆಯಲ್ಲ
ಇಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ 14 ವರ್ಷದ ಶಾಲಿನಿ ಸಿದ್ದಿ ಅವರು 13.6 ಸೆಕೆಂಡುಗಳಲ್ಲಿ 100 ಮೀ. ಓಟವನ್ನು ಪೂರೈಸಿದ್ದಾರೆ. ನಮಗೆ ಬೇಕಿರುವಂತಹ ಎಲ್ಲ ರೀತಿಯ ತರಬೇತಿಗಳೂ ಇಲ್ಲಿ ಸಿಗುತ್ತಿವೆ. ಮನೆಯವರಿಗೆ ನಾನು ಕುಸ್ತಿಪಟುವಾಗಬೇಕೆಂಬ ಆಸೆ ಇತ್ತು. ಆದರೆ ನನಗೆ ಒಲಂಪಿಕ್ಸ್‌ನಲ್ಲಿ ಆಸಕ್ತಿ. ಈ ಕಾರಣಕ್ಕಾಗಿ ನಾನು ಇಲ್ಲಿ ತರಬೇತಿ ಪಡೆಯುತ್ತಿದ್ದೇನೆ ಎನ್ನುತ್ತಾರೆ ಅವರು.

ಪರಿಣತರಿಂದ ತರಬೇತಿ
ಇಲ್ಲಿನ ಕ್ರೀಡಾಪಟುಗಳಿಗೆ ಪರಿಣತರಿಂದ ತರಬೇತಿ ನೀಡಲಾಗುತ್ತಿದೆ. ಪ್ರಧಾನ ಕೋಚ್‌ ಆಗಿ ರಾಷ್ಟ್ರೀಯ ಕ್ರೀಡಾಪಟುವಾಗಿದ್ದ ರಿಜ್ವಾನ್‌, ಮಹಿಳಾ ತರಬೇತುದಾರರಾಗಿ ಶ್ವೇತಾ, ಹಾಗೂ ದೈಹಿಕ ಶಿಕ್ಷಣವನ್ನು ತೆನಿ`ನ್‌ ಅವರು ನೀಡುತ್ತಿದ್ದಾರೆ.

ಸಿದ್ದಿ ಜನಾಂಗ
ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಸಿದ್ದಿ ಜನಾಂಗದವರು ಹೆಚ್ಚಾಗಿ ಕಾಣಸಿಗುತ್ತಾರೆ. ಪೋರ್ಚುಗೀಸರ ಅವಧಿಯಲ್ಲಿ ಪೂರ್ವ ಮತ್ತು ದಕ್ಷಿಣ ಆಫ್ರಿಕಾದಿಂದ ವಲಸೆ ಬಂದ ಇವರಿಗೆ ಅರಣ್ಯವೇ ಸರ್ವಸ್ವ. ಕ್ರಮೇಣ ಆಧುನಿಕ ಜಗತ್ತು ಇವರನ್ನೂ ಬದಲಾಯಿಸಿದೆ. ನಮ್ಮ ಕರ್ನಾಟಕದ ಸಿದ್ದಿಗಳು ಸಿದ್ದಿ ಎಂಬ ಬುಡಕಟ್ಟಿಗೆ ಸೇರಿದವರು. ಇವರು ಆಗ್ನೇಯ ಆಫ್ರಿಕಾ ಖಂಡದ ಬಂಟು ಜನಾಂಗಕ್ಕೆ ಸೇರಿದವರು ಎಂಬ ವಿಷಯವನ್ನು ಮಾನವಶಾಸ್ತ್ರಜ್ಞರು ಈಗಾಗಲೇ ಧೃಢೀಕರಿಸಿ¨ªಾರೆ. ಭಾರತ ದೇಶಕ್ಕೆ ಬಂದಿದ್ದ ಪೋರ್ಚುಗೀಸರು, ತಮ್ಮ ಕಾರ್ಯಾನುಕೂಲಕ್ಕಾಗಿ ಈ ಜನಾಂಗದವರನ್ನು ಆಫ್ರಿಕಾ ಖಂಡದಿಂದ ಇಲ್ಲಿಗೆ ಗುಲಾಮರಾಗಿ ಸಾಗಿಸಿದ್ದರು. ಆ ಕಾರಣದಿಂದಾಗಿ ಭಾರತದಲ್ಲಿ ಇಂದು ಸುಮಾರು ಐವತ್ತು ಸಾವಿರದಷ್ಟು ಸಿದ್ದಿ ಜನರನ್ನು ನಾವು ಕಾಣಬಹುದು.

ಉತ್ತರ ಕನ್ನಡ ಜಿÇÉೆಯ ಯÇÉಾಪುರ, ಹಲಿಯಾಳ, ಅಂಕೋಲ, ಮುಂಡಗೋಡು ಮತ್ತು ಸಿರಸಿ ತಾಲೂಕುಗಳಲ್ಲಿ, ಬೆಳಗಾವಿ ಜಿÇÉೆಯ ಖಾನಪುರದಲ್ಲಿ ಮತ್ತು ಧಾರವಾಡ ಜಿÇÉೆಯ ಕಲಘಟಕಿಯಲ್ಲಿ ಸಿದ್ದಿ ಬುಡಕಟ್ಟು ಜನಾಂಗದವರನ್ನು ಕಾಣಬಹುದು.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಇಚ್ಚೆ
ಎನ್‌ಜಿಒ ಸಂಸ್ಥೆ ನಮಗೆ ಉತ್ತಮ ತರಬೇತಿ ನೀಡುತ್ತಿದೆ. ಒಬ್ಬ ಆ್ಯತ್ಲೆಟಿಕ್ಸ್‌ಗಿರುವ ಎಲ್ಲ ಕೌಶಲಗಳನ್ನು ನಮಗೆ ಕಲಿಸಿಕೊಡಲಾಗುತ್ತಿದೆ. ಈಗ ಮಾಹೆಯು ಕೈಜೋಡಿಸಿರುವುದರಿಂದ ನಮಗೆ ಕ್ರೀಡೆಯ ಬಗ್ಗೆ ಇನ್ನಷ್ಟು ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಾಗಿದೆ. 2024ರ ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಇಚ್ಛೆ ಇದೆ. ಅದಕ್ಕಾಗಿ ಕಠಿನ ಪರಿಶ್ರಮ ಪಡುತ್ತಿದ್ದೇನೆ.
– ರವಿಕಿರಣ್‌ ಸಿದ್ದಿ, ಕ್ರೀಡಾಪಟು

2024ರ ಒಲಿಂಪಿಕ್ಸ್‌ ಗುರಿ
2024ರ ಒಲಿಂಪಿಕ್ಸ್‌ಗೆ ನಮ್ಮ ಸಂಸ್ಥೆಯ ಕನಿಷ್ಟ 4 ಮಂದಿ ಕ್ರೀಡಾಳುಗಳನ್ನು ಕಳುಹಿಸುವ ಇಚ್ಚೆ ಇದೆ. ಈ ನಿಟ್ಟಿನಲ್ಲಿ ನಾವು ಅವರಿಗೆ ತರಬೇತಿ ನೀಡುತ್ತಿದ್ದೇವೆ. ಮಣಿಪಾಲದ ವಾತಾವರಣಕ್ಕೆ ವಿದ್ಯಾರ್ಥಿಗಳು ಹೊಂದಿಕೊಂಡಿದ್ದಾರೆ. ತರಬೇತಿ ಉಪಯುಕ್ತವಾಗಿ ನಡೆಯುತ್ತಿದೆ.

-ರಿಜ್ವಾನ್‌, ತರಬೇತುದಾರರು

ಆ್ಯತ್ಲೆಟಿಕ್ಸ್‌ ಹಬ್‌ ಮಾಡುವ ಯೋಚನೆ
ಮಧ್ಯಪ್ರದೇಶ, ಒರಿಸ್ಸಾದಲ್ಲಿ ಕ್ರೀಡೆಗೆ ಸಂಬಂಧಪಟ್ಟಂತೆ ಕೆಲಸ ಮಾಡಿದ್ದೇವೆ. ಈಗ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ಹಲವಾರು ಮಂದಿ ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದಾರೆ. ಕ್ರಿಕೆಟ್‌ಗೆ ಮುಂಬೈ, ಕುಸ್ತಿಗೆ ಹರ್ಯಾಣ ಇರುವಂತೆ ಕರ್ನಾಟಕವನ್ನು ಆ್ಯತ್ಲೆಟಿಕ್ಸ್‌ ಹಬ್‌ ಮಾಡುವಂತಹ ಯೋಚನೆಯೂ ಇದೆ.
– ನಿತೀಶ್‌ ಎಂ. ಚೀನಿವಾರ್‌, ಎನ್‌ಜಿಒ ಸಂಸ್ಥಾಪಕರು

ಪ್ರತಿಭೆಗಳನ್ನು ಬೆಳಕಿಗೆ ತರುವ ಯತ್ನ
ಮಾಹೆಯು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ನೀಡುತ್ತಿದೆ. ಉತ್ತರ ಕರ್ನಾಟಕದ ಪರಿಶಿಷ್ಟ ಜನಾಂಗಕ್ಕೆ ಇಲ್ಲಿ ತರಬೇತಿ ನೀಡುವ ಮೂಲಕ ಅವರ ಪ್ರತಿಭೆಯನ್ನು ಬೆಳಕಿಗೆ ತರುವ ಯತ್ನ ನಾವು ಮಾಡುತ್ತಿದ್ದೇವೆ. ಉತ್ತಮ ಕ್ರೀಡಾ ಸಲಕರಣೆ ಸಹಿತ ಅವರಿಗೆ ಉತ್ತಮ ಸವಲತ್ತು ನೀಡುತ್ತಿದ್ದೇವೆ.
– ಡಾ| ಎಚ್‌.ಎಸ್‌.ಬಲ್ಲಾಳ್‌, ಸಹ ಕುಲಾಧಿಪತಿ ಮಾಹೆ

ಟಾಪ್ ನ್ಯೂಸ್

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

5

Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು

4

Malpe: ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1(1

Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ  ಇನ್ನೂ ಮೀನ ಮೇಷ ಎಣಿಕೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಮೆಲ್ಬೋರ್ನ್‌ ಗೆಲ್ಲಲು ಭಾರತಕ್ಕೆ ರನ್‌ ಗುರಿ

INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್:‌ ಕೊನೆಯಲ್ಲಿ ಕಾಡಿದ ಲಿಯಾನ್‌- ಬೊಲ್ಯಾಂಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.