
ಅಜೆಕಾರು: ಬರಿದಾದ ದೆಪ್ಪುತ್ತೆ ಕಿಂಡಿ ಅಣೆಕಟ್ಟು , ಸಮಸ್ಯೆ ಉಲ್ಬಣ
Team Udayavani, May 17, 2019, 6:28 AM IST

ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಹಿಂದೆಂದಿಗಿಂತಲೂ ನೀರಿನ ಸಮಸ್ಯೆ ತೀವ್ರ ಉಲ್ಬಣಿಸಿದ್ದು ಹೊಳೆ ಹಳ್ಳಗಳ ನೀರು ಬರಿದಾಗಿದೆ.
ದೆಪ್ಪುತ್ತೆ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಹಲವು ವರ್ಷಗಳಿಂದ ಪರಿಸರದ ನಾಗರಿಕರಿಗೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬೇಗನೆ ಕಿಂಡಿ ಅಣೆಕಟ್ಟಿನ ನೀರು ಬತ್ತಿ ಹೋಗಿದ್ದು ಸ್ಥಳೀಯರಿಗೆ ನೀರು ಪೂರೈಸುವುದು ಪಂಚಾಯತ್ ಆಡಳಿತಕ್ಕೆ ಸಮಸ್ಯೆಯಾಗಿದೆ.
ದೆಪ್ಪುತ್ತೆ ಕಿಂಡಿ ಅಣೆಕಟ್ಟಿನ ಮೇಲ್ಭಾಗದ ಹೊಳೆಯಲ್ಲಿರುವ ಕೆಲ ಗುಂಡಿಗಳಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಶೇಖರಣೆಗೊಂಡಿದ್ದು ಈ ನೀರನ್ನು ತೋಡುಗಳ ನಿರ್ಮಿಸುವ ಮಾಡುವ ಮೂಲಕ ಕಿಂಡಿಅಣೆಕಟ್ಟಿಗೆ ನೀರು ಸರಬರಾಜು ಮಾಡಿ ನೀರು ಪೂರೈಕೆಗೆ ಮರ್ಣೆ ಪಂಚಾಯತ್ ಆಡಳಿತ ಕ್ರಮ ಕೈಗೊಂಡಿದೆ.
ಜೆಸಿಬಿ ಮೂಲಕ ಹೊಳೆಯಲ್ಲಿ ತೋಡುಗಳನ್ನು ನಿರ್ಮಿಸಿ ನೀರನ್ನು ಹರಿಸಲಾಗುತ್ತಿದ್ದು ಇದು ಸಹ ಕೆಲ ದಿನಗಳಿಗಷ್ಟೇ ಸಾಕಾಗಬಹುದು. ಅನಂತರದ ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ನೀರಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.
ಹಳ್ಳಗಳಿಂದ ನೀರು ಹರಿಸಲು ತೋಡು ನಿರ್ಮಾಣ ಮಾಡುವ ಸಂದರ್ಭ ಪಂಚಾಯತ್ ಅದ್ಯಕ್ಷ ದಿನೇಶ್ ಕುಮಾರ್, ಪಿಡಿಒ ತಿಲಕ್‌ರಾಜ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.