AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
ನನಗೂ ವಿಷ ಪ್ರಾಶನ ಮಾಡಿದ್ದಾರೆ..: ಪ್ರತಿಮಾ ಸಹೋದರನ ಅನುಮಾನ
Team Udayavani, Nov 4, 2024, 5:13 PM IST
ಉಡುಪಿ: ಇತ್ತೀಚೆಗೆ ಕೊಲೆಯಾದ ಅಜೆಕಾರಿನ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ಸಾವಿನ ಪ್ರಕರಣದಲ್ಲಿ ಆರೋಪಿಯ ತಂದೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿದ ಮೃತರ ಸಹೋದರ ಪ್ರಕಾಶ್ ಪೂಜಾರಿ, ಆರೋಪಿಯ ತಂದೆ ಪ್ರಭಾವಿಗಳಾಗಿದ್ದಾರೆ. ಹಣದ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಿ ತನ್ನ ಮಗ ಆರೋಪಿ ದಿಲೀಪ್ ಹೆಗ್ಡೆಯ ರಕ್ಷಣೆಗೆ ನಿಂತಿದ್ದಾರೆ. ಮಗನನ್ನು ಜೈಲಿನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ ಎಂದರು. ವೀಡಿಯೋದಲ್ಲಿ ಅವರು ನನ್ನ ಮಗ ತಪ್ಪೇ ಮಾಡಿಲ್ಲ ಎನ್ನುವ ರೀತಿ ಹೇಳಿಕೆ ನೀಡಿದ್ದಾರೆ. ಆರೋಪಿ ದಿಲೀಪ್ ಹೆಗ್ಡೆ ತಂದೆ ದೇವಸ್ಥಾನದಲ್ಲಿ ಮಗನ ಹೆಸರಿನಲ್ಲಿ ಪೂಜೆ ಮಾಡಿ ಕೊಲೆ ಆರೋಪಿ ಮಗನ ರಕ್ಷಿಸುತ್ತಿದ್ದಾರೆ ಎಂದರು. ಕೊಲೆ ಪ್ರಕರಣದಲ್ಲಿ ಒಂದನೇ ಆರೋಪಿ ಪ್ರತಿಮಾ, ಎರಡನೇ ಆರೋಪಿ ದಿಲೀಪ್ ಹೆಗ್ಡೆಯಾಗಿದ್ದಾರೆ. ಅದೇ ರೀತಿ ಚಿಕಿತ್ಸೆ ಪಡೆದ ಆಸ್ಪತ್ರೆ, ಚಿಕಿತ್ಸೆ ನೀಡಿದ ವೈದ್ಯರನ್ನು ತನಿಖೆ ನಡೆಸಬೇಕು ಎಂದರು.
ರಾಜ್ಯದಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು
ಆಹಾರಕ್ಕೆ ವಿಷ ಬೆರೆಸಿ ಕೊಲೆಗೈದ ರಾಜ್ಯದ ಮೊದಲ ಅಮಾನವೀಯ ಪ್ರಕರಣ ಇದಾಗಿದೆ. ಇದೊಂದು ಅತ್ಯಂತ ಹೇಯ ಕೃತ್ಯ. ಪೊಲೀಸರು ಅಧಿಕಾರ ಸ್ವೀಕರಿಸುವಾಗ ದೇವರ ಕೆಲಸವೆಂದು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅದರಂತೆ ಪೊಲೀಸರು ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆ ನಡೆಸಬೇಕು. ತನಿಖೆ ಈಗ ನಿಧಾನಗತಿಯಲ್ಲಿ ನಡೆಯುತ್ತಿದೆ. ಯಾವುದೇ ಒತ್ತಡಕ್ಕೆ ಪ್ರಭಾವಿಗಳ ಪ್ರಭಾವಕ್ಕೆ ಒಳಗಾಗದೆ ಈ ಪ್ರಕರಣದ ಆರೋಪಿಗಳಿಬ್ಬರಿಗೂ ಜೀವವಾಧಿ ಶಿಕ್ಷೆ ದೊರಕುವಂತಾಗಬೇಕು. ಮತ್ತೆ ಇಂತಹ ಪ್ರಕರಣ ಎಲ್ಲಿಯೂ ನಡೆಯದ ರೀತಿ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಆಸ್ಪತ್ರೆಗಳ ಮೇಲೆ ಸಂಶಯವಿದೆ
ಮೃತರ ಸಹೋದರಿ ಶಶಿರೇಖಾ (ಚಿಕ್ಕಮ್ಮನ ಮಗಳು) ಮಾತನಾಡಿ, ಅಣ್ಣನ ಆರೋಗ್ಯ ಹದಗೆಟ್ಟಾಾಗ ಅತ್ತಿಗೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಅಸೌಖ್ಯಕ್ಕೆ ಒಳಗಾಗಿದ್ದ ಅಣ್ಣನಿಗೆ ಸ್ಥಳಿಯವಾಗಿ ಅಲ್ಲದೆ ಬೆಂಗಳೂರಿನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾಗುತ್ತ ಬಂದಿದ್ದರು. ಆಸ್ಪತ್ರೆ, ವೈದ್ಯರು ಕೆಲ ಸಂಗತಿ ಮುಚ್ಚಿಟ್ಟಿರುವ ಸಾಧ್ಯತೆಯಿದೆ ಎಂದರು.
ಹಣದ ಅಮಿಷ ಆಫರ್ ಬಂದಿದ್ದವು: ಪ್ರತಿಮಾ ಸಹೋದರ
ಭಾವ ಮೃತಪಟ್ಟಾಗ ನನಗೆ ಸಂಶಯ ಬಂದಿತ್ತು. ಮುಖದಲ್ಲಿ ಗಾಯ ಕಂಡುಬಂದಿತ್ತು. ಸಹೋದರಿ ಪ್ರತಿಮಾಳನ್ನು ಬಾಯಿ ಬಿಡಿಸಲು ಪ್ರಯತ್ನಿಸಿದ್ದೆ. ಮರಣೋತ್ಸರ ಪರೀಕ್ಷೆ ವರದಿ ಬರಲಿ ಎಂದು ಕಾದಿದ್ದೆ. ಅನಂತರದಲ್ಲಿ ಅವಳು ಸ್ವತ: ಪ್ರಿಯಕರನ ಜತೆ ಸೇರಿ ಭಾವನನ್ನು ಪ್ರಿಯಕರನ ಜತೆ ಸೇರಿ ಕೊಲೆಗೈದ ಬಗ್ಗೆ ಆಕೆ ಒಪ್ಪಿದ್ದಳು. ಆಗ ನಾನೇ ಠಾಣೆಗೆ ದೂರು ನೀಡಲು ಮುಂದಾಗಿದ್ದೆ. ಅದಾದ ನಂತರದಲ್ಲಿ ನನಗೆ ಹಲವಾರು ಅನಾಮಧೇಯ ಕರೆಗಳು ಬಂದಿವೆ. ಬೆದರಿಕೆ ಕರೆಗಳು ಬಂದಿಲ್ಲ. ಹಣದ ಅಮಿಷದ ಕರೆಗಳು ಬಂದಿವೆ. 10ರಿಂದ 20 ಲಕ್ಷ ರೂ. ವರೆಗೆ ಅಮಿಷ ಒಡ್ಡಲಾಗಿತ್ತು. ಮಕ್ಕಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎನ್ನುವ ಆಫರ್ ಕೂಡ ಅದರಲ್ಲಿ ಸೇರಿತ್ತು. ನಾವು ಹಣಕ್ಕೆ ಬಗ್ಗುವವರಲ್ಲ. ಯಾವ ಬೆದರಿಕೆಗೆ ಬಗ್ಗುವುದಿಲ್ಲ. ನನ್ನ ರಕ್ತ ಸಂಬಂಧಿಯೇ ಆಗಲಿ, ಯಾರೇ ಆಗಲಿ ತಪ್ಪು ಮಾಡಿದರೇ ಅದು ತಪ್ಪೆ. ಆರಂಭದಲ್ಲಿ ನನ್ನ ಮನೆಯಲ್ಲಿ ಬೆಂಬಲ ಅಷ್ಟಾಗಿ ಸಿಕ್ಕಿರಲಿಲ್ಲ. ಈಗ ಅವರೆಲ್ಲ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎನ್ನುತ್ತಿದ್ದಾರೆ. ಇಬ್ಬರಿಗೆ ಜೀವವಾಧಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಸಹೋದರನಿಗೂ ವಿಷಪ್ರಾಶನ ಸಂಶಯ
ನನಗೂ ಆರೋಗ್ಯದಲ್ಲಿ ಏರುಪೇರಾಗಿದೆ. ನರಗಳು ಹಿಡಿದು ಕೊಂಡಂತಾಗುತ್ತಿದೆ. ನಾನು ಪ್ರತಿಮಾಳ ಮನೆಯಲ್ಲಿ ಒಂದೆರಡು ಬಾರಿ ಊಟ ಮಾಡಿದ್ದಿದೆ. ಆಕೆ ನನಗೂ ಆಹಾರದಲ್ಲಿ ವಿಷ ಬೆರೆಸಿರುವ ಬಗ್ಗೆ ನನಗೂ ಸಂಶಯವಿದೆ ಎಂದು ಶಾಕಿಂಗ್ ವಿಚಾರವನ್ನು ಸಹೋದರ ಸಂದೀಪ್ ಪೂಜಾರಿ ಬಹಿರಂಗಪಡಿಸಿದರು. ಡಿವೈಎಸ್ಪಿ ಅವರು ಕಚೇರಿಗೆ ನನ್ನನ್ನು ಕರೆಸಿಕೊಂಡಿದ್ದರು. ಈ ವೇಳೆ ತನಿಖೆ ಪಾರದರ್ಶಕವಾಗಿ ನಡೆಸಿ ಆರೋಪಿಗಳಿಗೆ ಖಂಡಿತ ಜೀವಾಧಿ ಶಿಕ್ಷೆ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದರು.
ಭಾವುಕರಾದ ಸಂಜೀವ ಪೂಜಾರಿ
ಮೃತ ಬಾಲಕೃಷ್ಣರ ತಂದೆ ಸಂಜೀವ ಪೂಜಾರಿ ಮಾತನಾಡಿ, ಪುತ್ರ ಯಾವುದನ್ನು ನಮ್ಮ ಬಳಿ ಹೇಳಿಕೊಳ್ಳುತ್ತಿರಲಿಲ್ಲ. ಗಂಡ ಹೆಂಡತಿ ಅವರಿಬ್ಬರು ಖುಷಿಯಾಗಿ ಇದ್ದಂತೆ ಕಾಣಬರುತಿದ್ದರು. ರಜಾ ದಿನಗಳಲ್ಲಿ ಮಕ್ಕಳೊಂದಿಗೆ ಅವರೆಲ್ಲರೂ ಹೊರಗೆ ತಿರುಗಾಡಲು ಹೋಗುತ್ತಿದ್ದರು. ಆಗೆಲ್ಲ ಅವರು ಚೆನ್ನಾಗಿಯೇ ಇದ್ದಾರೆ ಅಂತ ಭಾವಿಸಿಕೊಂಡಿದ್ದೆವು. ಅವಳು ಹೊರಗೆ ತಿರುಗಾಡುವುದೆಲ್ಲ ಮಾಡುತ್ತಿದ್ದಳು. ಆದರೆ ಆ ಹೆಣ್ಣಿನೊಳಗೆ ಕ್ರೂರತೆ ಇರುವುದು ನಮ್ಮ ಅರಿವಿಗೆ ಬರಲೇ ಇಲ್ಲ. ಈ ಬಗ್ಗೆ ಸ್ವಲ್ಪ ಸಂಶಯ ಮೊದಲೇ ಬರುತ್ತಿದ್ದರೇ ನಾವು ಮಗನನ್ನು ಕಳೆದುಕೊಳ್ಳುತ್ತಿರಲಿಲ್ಲ. ಆರೋಪಿ ದಿಲೀಪ್ ಪ್ರತಿಮಾಳನ್ನು ಸ್ವೇಚಾಚ್ಚಾರಕ್ಕೆ ಬಳಸಲು ಯೋಚಿಸಿದ್ದ. ಅವರಿಬ್ಬರು ದೂರದೂರಿಗೆ ತೆರಳುವ ಬಗ್ಗೆ ನಿರ್ಧರಿಸಿದ್ದರು. ಅಲ್ಲಿ ಆಕೆಯನ್ನು ಬೇರೆಯದ್ದೆ ವಿಚಾರಕ್ಕೆ ಬಳಸುವುದು ದಿಲೀಪ್ ಉದ್ದೇಶವಾಗಿತ್ತು. ಪ್ರತಿಮಾಳಿಗೆ ಇದೆಲ್ಲ ಅರ್ಥವಾಗುತ್ತಿರಲಿಲ್ಲ. ಆಕೆ ತಪ್ಪುು ದಾರಿ ಹಿಡಿದಳು. ಅವರಿಬ್ಬರ ಮಕ್ಕಳಿಬ್ಬರನ್ನು ನಾವೆಲ್ಲ ಸೇರಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ. ಅವರ ಭವಿಷ್ಯದ ಬಗ್ಗೆ ನಮಗೆ ಚಿಂತೆಯಿದೆ ಎಂದ ಅವರು ಕೊಲೆಗಾರರಿಬ್ಬರಿಗೆ ಜೀವವಾಧಿ ಶಿಕ್ಷೆ ಆಗಲೇ ಬೇಕೆನ್ನುತ್ತ ಕಣ್ಣಿರು ಹಾಕಿದರು. ತಾರನಾಥ ಕೋಟ್ಯಾನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.