“ಅಜ್‌ಫನ್ ಡೇಟ್ಸ್ ಆ್ಯಂಡ್ ನಟ್ಸ್’ ಮಳಿಗೆ ಉದ್ಘಾಟನೆ
ಡ್ರೈಪ್ರೂಟ್ಸ್ ಮೂರು ಕಡೆಗಳಲ್ಲಿ ಪರೀಕ್ಷೆಗೊಳಪಟ್ಟ ಅನಂತರವೇ ಮಾರಾಟಕ್ಕೆ ಇಡಲಾಗುವುದು
Team Udayavani, Nov 25, 2023, 3:51 PM IST
ಉಡುಪಿ: ಅಭಿವೃದ್ದಿಹೊಂದುತ್ತಿರುವ ಉಡುಪಿ ನಗರಕ್ಕೆ ಡ್ರೈಪ್ರೂಟ್ಸ್ ಮಳಿಗೆ ಅಗತ್ಯವಿದೆ. ಒಂದೇ ಸೂರಿನಡಿಯಲ್ಲಿ ಹಲವು ರೀತಿಯ ಒಣಹಣ್ಣುಗಳು ಸಿಗುವುದರಿಂದ ಜನರಿಗೆ ಸಮಯದ ಉಳಿತಾಯದೊಂದಿಗೆ ಅತೀ ಕಡಿಮೆ ದರದಲ್ಲಿ ಸಿಗಲಿದೆ ಎಂದು ನಗರಸಭೆ ಸದಸ್ಯ ಡಿ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಅಂಬಾಗಿಲು ಪುತ್ತೂರಿನ ಅಮೃತ್ ಗಾರ್ಡನ್ ಮುಂಭಾಗದ ರಾ.ಹೆ. 66ರ ಸಮೀಪದ ಅಂಬಿಕಾ ಕಟ್ಟಡದಲ್ಲಿ ನೂತನವಾಗಿ ತೆರೆಯಲಾದ “ಅಜ್‌ಫನ್ ಡೇಟ್ಸ್ ಆ್ಯಂಡ್ ನಟ್ಸ್’ ಡ್ರೈಪ್ರೂಟ್ಸ್‌ನ 172ನೇ ಶಾಖೆಯನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಪಾಲುದಾರ ಡಾ| ಎನ್. ಮಹಮ್ಮದ್ ಕುಟ್ಟಿಯವರು, ನಮ್ಮಲ್ಲಿ ದೊರೆಯುವ ಎಲ್ಲ ಡ್ರೈಪ್ರೂಟ್ಸ್ ಮೂರು ಕಡೆಗಳಲ್ಲಿ ಪರೀಕ್ಷೆಗೊಳಪಟ್ಟ ಅನಂತರವೇ ಮಾರಾಟಕ್ಕೆ ಇಡಲಾಗುವುದು. ನಮ್ಮಲ್ಲಿ ವಿಶೇಷವಾಗಿ 45 ಬಗೆಯ ಖರ್ಜೂರಗಳು ದೊರೆಯಲಿವೆ ಎಂದರು.
ಎಂಜಿನಿಯರ್ ಎಂ. ಶ್ರೀನಾಗೇಶ್ ಹೆಗ್ಡೆ, ಉದ್ಯಮಿ ಪಿ.ಬಿ. ಇಬ್ರಾಹಿಂ, ಕಟ್ಟಡ ಮಾಲಕ ಜಗದೀಶ್, ರಾಜ್ಯ ಮಾರಾಟ ವಿಭಾಗದ ಮುಖ್ಯಸ್ಥ ಸಲ್ಮಾನ್ ಉಪಸ್ಥಿತರಿದ್ದರು. ರಾಜ್ಯ ಮಾರಾಟ ವಿಭಾಗದ ಮುಖ್ಯಸ್ಥ ಮಂಜುನಾಥ ಸ್ವಾಗತಿಸಿ, ವಂದಿಸಿದರು.
ಗುಣಮಟ್ಟಕ್ಕೆ ಆದ್ಯತೆ
ಇಲ್ಲಿ ನೈಸರ್ಗಿಕವಾದ ಉತ್ತಮ ಗುಣಮಟ್ಟದ ವಿವಿಧ ಡ್ರೈಪ್ರೂಟ್ಸ್‌ಗಳು, ಸೌದಿಅರೇಬಿಯಾದಲ್ಲಿ ತಮ್ಮ ಸ್ವಂತ ತೋಟದಲ್ಲಿ ಬೆಳೆಸಿದ ವಿವಿಧ ಬಗೆಯ ವಿಶೇಷ ಖರ್ಜೂರಗಳು, ವಿದೇಶಿ ಚಾಕಲೇಟ್‌ಗಳು, ತಂಪು ಪಾನೀಯಗಳು, ಪ್ರಕೃತಿ ಮಡಿಲಿನ ಜೇನುತುಪ್ಪ, ವಿವಿಧ ಬಗೆಯ ಸಾಂಬಾರ ಪದಾರ್ಥಗಳು ದೊರೆಯುತ್ತದೆ. ಉತ್ತಮ ಗುಣಮಟ್ಟಕ್ಕೆ ಪ್ರಥಮ ಆದ್ಯತೆ ನೀಡುವುದರೊಂದಿಗೆ ಗ್ರಾಹಕರಿಗೆ ನಗುಮೊಗದ ಸೇವೆ ನೀಡುವ ಧ್ಯೇಯೋದ್ದೇಶವನ್ನು ಸಂಸ್ಥೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.