ಉಡುಪಿ ಶ್ರೀಕೃಷ್ಣನಿಗೆ 2ವರ್ಷ ಅಖಂಡ ಭಜನಾ ಸೇವೆ


Team Udayavani, Dec 21, 2017, 10:34 AM IST

21-21.jpg

ಉಡುಪಿ: ಪಲಿಮಾರು ಮಠದ ವಿದ್ಯಾಧೀಶತೀರ್ಥ ಶ್ರೀಪಾದರ ಪರ್ಯಾಯ ಜ.18 ರಂದು ಆರಂಭವಾಗಲಿದ್ದು, ಪರ್ಯಾಯ ಪೀಠಾರೋಹಣ ಮಾಡುವ ದಿನದಿಂದಲೇ ಶ್ರೀಕೃಷ್ಣನ ಎದುರು ಅಖಂಡ ನಾದೋಪಾಸನೆ ಆರಂಭವಾಗಲಿದೆ. ಜ.18ರಿಂದ ಎರಡು ವರ್ಷ ಪೂರ್ಣ ಹಗಲು ರಾತ್ರಿ ತಾಳದ ಸದ್ದು ತಪ್ಪುವುದಿಲ್ಲ.

ಜ.18ರಂದು ಮುಂಜಾವು ಪರ್ಯಾಯ ಮೆರವಣಿಗೆ ಬಂದು ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡಿದ ಬಳಿಕ ಅಲ್ಲೇ ಎಲ್ಲ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮೂಲಕ ಅಖಂಡ ಭಜನಾ ಸೇವೆಯನ್ನು ಉದ್ಘಾಟಿಸಿ ಮುಂದಿನ ಕಲಾಪಗಳಿಗೆ ತೆರಳುತ್ತಾರೆ. ಆಗಲೇ ಅಖಂಡ ಭಜನಾ ಸೇವೆ ಆರಂಭಗೊಳ್ಳುತ್ತದೆ. ಕನಕಗೋಪುರದ ಬಳಿ ಒಂದು ವೇದಿಕೆಯನ್ನು ನಿರ್ಮಿಸಲಾಗುತ್ತಿದ್ದು ಅಲ್ಲಿ ಅಖಂಡ ಭಜನೆ ನಡೆಯಲಿದೆ. ಪ್ರತಿ ಮೂರು ದಿನಗಳಲ್ಲಿ ಆರು ಭಜನಾ ತಂಡಗಳು ಕಾರ್ಯ ನಿರ್ವಹಿಸಲಿವೆ.

ಇವುಗಳಲ್ಲಿ ಒಂದು ತಂಡ ಎರಡು ಗಂಟೆ ಭಜನೆ ಮಾಡಿದ ಬಳಿಕ ಇನ್ನೊಂದು ತಂಡ, ಬಳಿಕ ಮತ್ತೂಂದು ತಂಡ ಭಜನೆ ಮಾಡಲಿವೆ. ಒಂದು ತಂಡಕ್ಕೆ ನಾಲ್ಕು ಗಂಟೆಗಳ ವಿಶ್ರಾಂತಿ ದೊರಕುತ್ತದೆ. ಆರು ತಂಡಗಳು ಮೂರು ದಿನ ಇಲ್ಲಿರಬೇಕು. ಎಲ್ಲ ಭಜನೆಗಳನ್ನೂ ಕುಳಿತುಕೊಂಡೇ ಮಾಡಲಾಗುವುದು. ಎರಡು ವರ್ಷಗಳಲ್ಲಿ ಒಂದು ಸಾರಿ ಬಂದ ತಂಡ ಇನ್ನೊಮ್ಮೆ ಬರುವುದಿಲ್ಲ. ಈ ಲೆಕ್ಕಾಚಾರದಲ್ಲಿ ಎರಡು ವರ್ಷಕ್ಕೆ 1,440 ಭಜನಾ ತಂಡಗಳ ಅಗತ್ಯವಿದೆ. ಆದರೂ ತಂಡಗಳು ಕೊನೆ ಕ್ಷಣದಲ್ಲಿ ಬರಲು ಅನಾನುಕೂಲವಾದರೆ ಇನ್ನೊಂದು ತಂಡ ಇರಬೇಕಾಗುತ್ತದೆ. ಹೀಗಾಗಿ ಸುಮಾರು 1,800 ಭಜನಾ ತಂಡಗಳು ಬೇಕೆಂದು ಅಂದಾಜಿಸಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಮಂತ್ರಾಲಯ ಮಠದ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ನಲ್ಲಿ ನೋಂದಾಯಿಸಿದ ಭಜನಾ ಮಂಡಳಿಗಳು ಈ ಸೇವೆಯನ್ನು ನಡೆಸಲಿವೆ. ಎರಡೂ ಕಡೆಯ ನೋಂದಾಯಿತ ಮಂಡಳಿಗಳು ಭಜನೆಯಲ್ಲಿ  ತರಬೇತಿ ಪಡೆದಿರುತ್ತವೆ. ಎರಡೂ ಸಂಸ್ಥೆಗಳ ಸಹಕಾರದಲ್ಲಿ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಅಖಂಡ ಭಜನಾ ಸೇವೆ ನಡೆಯಲಿದೆ. ತಿರುಪತಿಯಲ್ಲಿ ಸುಮಾರು 2,500 ಮತ್ತು ಮಂತ್ರಾಲಯದಲ್ಲಿ 800 ತಂಡಗಳಿವೆ. ಇವುಗಳಲ್ಲಿ ಅನುಕೂಲವಾದ 1,800 ತಂಡಗಳು ಉಡುಪಿಗೆ ಬಂದು ಈ ನಾದೋಪಾಸನೆ ಸೇವೆಯನ್ನು ನಡೆಸಲಿವೆ.

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.