“ಡಿಜಿಟಲ್ ಮಾಧ್ಯಮದಿಂದ ಸರ್ವ ಮಾಹಿತಿ’
ಅಂತಾರಾಷ್ಟ್ರೀಯ ಸಾಹಿತ್ಯ - ಕಲೆಗಳ ವೇದಿಕೆ "ಮಿಲಾಪ್-2019'
Team Udayavani, Nov 10, 2019, 5:19 AM IST
ಉಡುಪಿ: ಸುಮಾರು 50 ಸಾವಿರಕ್ಕೂ ಅಧಿಕ ಸಾಹಿತ್ಯ ಪುಸ್ತಕಗಳು ಇಂದು ಏಕಕಾಲ ದಲ್ಲಿ ಲಭ್ಯವಾಗುವುದಕ್ಕೆ ಡಿಜಿಟಲ್ ಮಾಧ್ಯಮ ಕಾರಣ. ತಂತ್ರಜ್ಞಾನ ಬದಲಾದಂತೆ ನಾವು ಅದಕ್ಕೆ ಹೊಂದಿ ಕೊಳ್ಳಬೇಕು. ಕಾಲೇಜುಗಳಲ್ಲೂ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗಬೇಕು ಎಂದು ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಹೇಳಿದರು.
ಮಣಿಪಾಲ ಮಾಹೆ ವಿ.ವಿ. ವತಿಯಿಂದ ಟಿಎಂಎ ಪೈ ಸಭಾಂಗಣ ದಲ್ಲಿ ಶನಿವಾರ ನಡೆದ ಮಣಿಪಾಲ ಅಂತಾರಾಷ್ಟ್ರೀಯ ಸಾಹಿತ್ಯ ಮತ್ತು ಕಲೆಗಳ ವೇದಿಕೆ
“ಮಿಲಾಪ್-2019′ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಓದುಗರಲ್ಲಿದ್ದ ಕಾಗದ, ಪೆನ್ನು, ಪುಸ್ತಕಗಳು ಇಂದು ಮಾಯವಾಗಿ ಆ ಜಾಗವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು ಆವರಿಸಿವೆ. ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹವ್ಯಾಸ ಈ ಹಿಂದೆ ಇತ್ತು. ಆದರೆ ಈಗ ವೆಬ್‌ಲಿಂಕ್‌ಗಳ ಮೂಲಕ ಎಲ್ಲೆಂದರಲ್ಲಿ ಸುಲಭವಾಗಿ ನೋಡಲು ಸಾಧ್ಯ ವಾಗುತ್ತದೆ. ಇದೆಲ್ಲವೂ ತಂತ್ರಜ್ಞಾನ ಆವಿಷ್ಕಾರಗಳಿಂದ ಸಾಧ್ಯವಾಗಿದೆ ಎಂದರು.
ಖ್ಯಾತ ನಾಟಕ ನಿರ್ದೇಶಕ ಮಹೇಶ್ ದತ್ತಾನಿ ಉದ್ಘಾಟಿಸಿದರು. ರವಿವರ್ಮ, ಪಿಕಾಸೋ, ಅವರ ಕಲಾಕೃತಿಗಳು ತಂತ್ರಜ್ಞಾನಕ್ಕಿಂತಲೂ ಮಿಗಿಲಾಗಿ ಕಥೆಗಳನ್ನು ತಿಳಿಸುತ್ತವೆ. ಇಂತಹ ಸೃಜನಶೀಲ ಕಲೆಯನ್ನು ಅವರು ಆ ಕಾಲದಲ್ಲಿ ಅರಗಿಸಿಕೊಂಡಿದ್ದರು. ಆದರೆ ಇಂದು ಅಂತಹ ಇತಿಹಾಸ, ಯಂತ್ರಗಳನ್ನು ಸೃಷ್ಟಿಸಲು ಕಲಾವಿದರ ಬದಲು ತಂತ್ರಜ್ಞಾನದ ಮೊರೆಹೋಗಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದ ಮಹೇಶ್ ಮಲ್ಪೆ ಅವರು ಪಿಕ್ಸೆಲ್ ಆರ್ಟ್ ಮೂಲಕ ಡಾ| ಗಿರೀಶ್ ಕಾರ್ನಾಡ್ ಅವರ ಚಿತ್ರ ರಚಿಸಿ ಗಮನಸೆಳೆದರು.
ಮಾಹೆ ಯುರೋಪಿಯನ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ| ನೀತಾ ಇನಾಂದಾರ್, ಕಮಲಾಕರ ಭಟ್ ಉಪಸ್ಥಿತರಿದ್ದರು.
ಸಂವಾದ
ಸಾಹಿತಿ ಅಮೃತ್ ಗಂಗಾಧರ್, ನಾಟಕ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಪ್ರಕಾಶ್ ಬೆಳವಾಡಿ, ಟಿ.ಪಿ. ಅಶೋಕ್ ಅವರು ಸಾಹಿತಿ ಗಿರೀಶ್ ಕಾರ್ನಾಡ್ ಅವರ ನೆನಪುಗಳು ಮತ್ತು ಆಧುನಿಕತೆ ಕುರಿತ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೇ ಕಟ್ಟಡದ ವಿವಿಧೆಡೆ ನಡೆದವು.
ಪುಸ್ತಕ ಬಿಡುಗಡೆ
ಮಣಿಪಾಲ ಯುನಿವರ್ಸಲ್ ಪ್ರಸ್ ಪ್ರಕಾಶನದ ಪ್ರೊ| ಎಚ್.ಎಸ್. ಶಿವಪ್ರಕಾಶ ಅವರ “ದ ವರ್ಲ್ಡ್ ಇನ್ ದ ವರ್ಲ್ಡ್’, ಡಾ| ಸಯನ್ ಡೇ ಅವರ “ಡಿಕೊಲೊನಿಯಲ್ ಎಕ್ಸಿಸ್ಟೆನ್ಸ್ ಆ್ಯಂಡ್ ಅರ್ಬನ್ ಸೆನ್ಸಿಬಿಲಿಟಿ- ಅ ಸ್ಟಡಿ ಆನ್ ಮಹೇಶ್ ಎಲಕುಂಚವಾರ್’ ಮತ್ತು ಪ್ರೊ| ಎನ್. ಮನು ಚಕ್ರವರ್ತಿ ಅವರ “ಕಲ್ಚರ್ ಆ್ಯಂಡ್ ಕ್ರಿಯೇಟಿವಿಟಿ’ ಎಂಬ ಮೂರು ಪುಸಕ್ತಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.