ಮರಳು ಸಾಗಾಟ ತಪಾಸಣೆ ಹೊಣೆ ಎಲ್ಲ ಇಲಾಖೆಗೆ: ಪ್ರಮೋದ್
Team Udayavani, Aug 17, 2017, 8:50 AM IST
ಉಡುಪಿ: ಈ ತಿಂಗಳ ಅಂತ್ಯದೊಳಗೆ ಸಿಆರ್‌ಝಡ್‌ನಲ್ಲಿರುವ ಮರಳು ದಿಬ್ಬಗಳಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯುವ ಕಾರ್ಯ ಆರಂಭಿಸಲು ಕ್ರಮ ಕೈಗೊಳ್ಳಲಾಗಿದ್ದು, ಅನಂತರ ಮರಳಿನ ಸಮಸ್ಯೆ ನೀಗಲಿದೆ. ಮರಳು ಅಕ್ರಮವಾಗಿ ಹೊರಜಿಲ್ಲೆಗಳಿಗೆ ಸಾಗದಂತೆ ನೋಡಿಕೊಳ್ಳುವ ಸಲುವಾಗಿ ತಪಾಸಣೆಯ ಹೊಣೆಯನ್ನು ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಕಂದಾಯ, ಪಿಡಬ್ಲೂéಡಿ ಸಹಿತ ಎಲ್ಲ ಇಲಾಖೆಗಳಿಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ಮಣಿಪಾಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಉಡುಪಿ- 26, ಬ್ರಹ್ಮಾವರ – 84, ಕುಂದಾಪುರ – 18 ಹಾಗೂ ಬೈಂದೂರು-5 ಹೀಗೆ ಒಟ್ಟು 133 ಪರ್ಮಿಟ್ ಕೊಡಲಾಗುವುದು. ಇನ್ನೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 407 ಟೆಂಪೋ, ಟಿಪ್ಪರ್‌ಗಳಲ್ಲಿ ಮರಳು ಸಾಗಾಟಕ್ಕೆ ಅವಕಾಶವಿದೆ. ಹೊರಜಿಲ್ಲೆಗಳಿಗೆ ದೊಡ್ಡ ಲಾರಿಯಲ್ಲಿ ಮರಳು ಸಾಗಾಟವಾಗುವ ಕಾರಣ ಅಂತಹ ಲಾರಿಗಳಲ್ಲಿ ಮರಳು ಸಾಗಿಸುವುದನ್ನು ನಿರ್ಬಂಧಿಸಲಾಗುವುದು. ನಾನ್‌ಸಿಆರ್‌ಝಡ್ ಮರಳುಗಾರಿಕೆ ಕುರಿತು ಸದನ ಉಪಸಮಿತಿ ಶೀಘ್ರವೇ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ ಸಚಿವರು, ಯಾವುದೇ ಖಾಸಗಿ ಲಾಬಿಗೆ ಮಣಿಯದೆ ಜನಪರವಾಗಿ ನರ್ಮ್ ಬಸ್ ಸೇವೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.
ಮರಳು ತೆಗೆಯಲು ಅರ್ಜಿ ಆಹ್ವಾನ
ಕರಾವಳಿ ನಿಯಂತ್ರಣ ವಲಯದಲ್ಲಿ (ಸಿಆರ್‌ಝಡ್) ಮೀನುಗಾರಿಕಾ ದೋಣಿಗಳ ಸಂಚಾರಕ್ಕೆ ಅಡ್ಡಿಯಾಗಿರುವ ಒಟ್ಟು 28 ಮರಳು ದಿಬ್ಬಗಳನ್ನು ಗುರುತಿಸಿದ್ದು, ಈ ದಿಬ್ಬಗಳಲ್ಲಿನ ಮರಳನ್ನು ಮಾನವ ಶ್ರಮದಿಂದ ತೆಗೆಯಲು ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರ ಅನುಮೋದನೆ ನೀಡಿದೆ. ಪಾರಂಪರಿಕ ಮರಳನ್ನು ತೆಗೆಯುವ ಕಸುಬಿನಲ್ಲಿ ತೊಡಗಿರುವವರು ಅರ್ಜಿ ಸಲ್ಲಿಸಬಹುದು.
ಆ. 27ರೊಳಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಯವರ ಕಚೇರಿಯಿಂದ ನಮೂನೆ ಗಳನ್ನು ಪಡೆದು ಸಲ್ಲಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.