ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಪ್ರಕರಣ ದಾಖಲು
Team Udayavani, Aug 27, 2022, 9:15 PM IST
ಮಲ್ಪೆ: ಕಿನ್ನಿಮುಲ್ಕಿಯಲ್ಲಿ ಸರಕಾರಿ ಜಾಗದಲ್ಲಿ ಅನಧಿಕೃತ ಶೆಡ್ ತೆರವು ವೇಳೆ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಯಶವಂತ್ ಎನ್. ಪ್ರಭು ದೂರು ನೀಡಿದ್ದು, ಅವರು ಕಳೆದ 8 ತಿಂಗಳಿನಿಂದ ಉಡುಪಿ ನಗರಸಭೆಯಲ್ಲಿ ಕಾರ್ಯಪಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಪೌರಾಯುಕ್ತರ ಸೂಚನೆಯಂತೆ ಕಿನ್ನಿಮೂಲ್ಕಿ ಸ್ವಾಗತಗೋಪುರದ ಬಳಿ ಸರಕಾರಿ ಜಾಗದಲ್ಲಿ ನಿರ್ಮಿಸಿದ್ದ ಶೆಡ್ ತೆರವುಗೊಳಿಸಲು ಇತರ ಸಿಬಂದಿಗಳೊಂದಿಗೆ ಜೆಸಿಬಿ ಸಹಿತ ತೆರಳಿದ್ದ ವೇಳೆ ರಿಕ್ಷಾ ಚಾಲಕರು ಹಾಗೂ ಇತರರು ಶೆಡ್ ತೆರವುಗೊಳಿಸುವ ಸಂದರ್ಭದಲ್ಲಿ ಅಡ್ಡಿ ಪಡಿಸಿದ್ದು, ಪೊಲೀಸರ ಸಹಾಯದಿಂದ ತೆರವು ಕಾರ್ಯಚರಣೆ ಮುಗಿಸಿ ಸರಕಾರಿ ವಾಹನದಲ್ಲಿ ವಾಪಾಸಗಲು ತೆರಳುತ್ತಿದ್ದ ವೇಳೆ ಸುಮಾರು 15-20 ಜನ ಸೇರಿಕೊಂಡು ವಾಹನವನ್ನು ಸುತ್ತುವರಿದು ನಮ್ಮನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯಶವಂತ್ ಎನ್. ಪ್ರಭು ನೀಡಿದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.