ಪ್ರಾಕೃತಿಕ ವಿಕೋಪ ಎದುರಿಸಲು ಸದಾ ಸನ್ನದ್ಧ : ಉಡುಪಿ ಡಿ.ಸಿ.
Team Udayavani, May 31, 2018, 12:20 PM IST
ಉಡುಪಿ: ಕರಾವಳಿ ಯಾದ್ಯಂತ ಮಂಗಳವಾರ ಭಾರೀ ಮಳೆಯಾಗಿದ್ದು ಉಡುಪಿ ಜಿಲ್ಲೆಯೂ ಸಾಕಷ್ಟು ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು “ಉದಯವಾಣಿ’ ಜತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತುಕತೆ ನಡೆಸಿದರು.
– ಚಂಡಮಾರುತದ ಪರಿಣಾಮ ಎಷ್ಟು ದಿನ ಇರುತ್ತದೆ ಎಂದು ವರದಿ ಬಂದಿದೆ? ನೀವು ಕೈಗೊಂಡ ಕ್ರಮಗಳೇನು?
ಮಂಗಳವಾರ ಬೆಳಗ್ಗೆ 9.30ಕ್ಕೆ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ವರದಿ ಬಂತು. ವಿಷಯ ಗೊತ್ತಾದಾಗಲೇ ನಾವು ನೋಡಲ್ ಅಧಿಕಾರಿಗಳನ್ನು ನೇಮಿಸಿ ಕ್ರಮ ಜರಗಿಸಿದ್ದೇವೆ, ಶಾಲೆಗಳಿಗೆ ರಜೆ ಸಾರಿ ದೆವು; ನಗರಸಭೆ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಗಳಿಗೂ ಜಾಗೃತರಾಗಿ ಇರುವಂತೆ ಸೂಚಿ ಸಿ ದೆವು. ನಾವು ಹೆಚ್ಚಿನ ಗಮನ ವನ್ನು ಉದ್ಯಾವರ ಮತ್ತು ಕಡೆಕಾರಿಗೆ ಕೊಡ ಬೇಕಾಯಿತು. ನಗರ ಸಭೆ ಪ್ರದೇಶ ದಲ್ಲಿಯೂ ನೆರೆ ಬಂದ ಪ್ರದೇಶ ಗಳ ಬಗೆಗೆ ಗಮನ ಹರಿಸಿ ದೆವು. ಇದುವರೆಗೆ ಬಂದ ಮಳೆ ಚಂಡ ಮಾರುತದ ಪರಿಣಾಮದ್ದು; ಇನ್ನು ಮುಂದೆ ಸಾಮಾನ್ಯ ಮುಂಗಾರು ಬರಲಿದೆ.
– ಒಮ್ಮೆಲೆ ಮಳೆ ಬಂದಾಗ ದ.ಕ. ಜಿಲ್ಲಾಡಳಿತ ಅದನ್ನು ನಿರ್ವಹಿಸಲು ವಿಫಲ ವಾಯಿತು. ಇಲ್ಲಿಯೂ ಅಂತಹ ಮಳೆ ಬಂದರೆ ಹೇಗೆ ನಿರ್ವಹಿಸುತ್ತೀರಿ?
ಜಿಲ್ಲಾಡಳಿತ ವಿಫಲ ಎಂದು ಹೇಳಲು ಆಗದು. ಒಂದೇ ಸಮನೆ 250 ಮಿ.ಮೀ. ಮಳೆ ಬಂದರೆ ಯಾವ ಜಿಲ್ಲಾಡಳಿತಕ್ಕೂ ಏನೂ ಮಾಡಲಾಗದು. ಚರಂಡಿ ವ್ಯವಸ್ಥೆಯ ಸಾಮರ್ಥ್ಯ ಮೀರಿದಾಗ ಏನು ಮಾಡಬಹುದು? ಏಕಾಏಕಿ ಇಂತಹ ಘಟನೆ ನಡೆದಾಗ ಕಷ್ಟವಾಗುತ್ತದೆ. ಆದರೂ ಮಂಗಳವಾರ ಅಪರಾಹ್ನ ಮಂಗಳೂರಿನಲ್ಲಿ ನಿಯಂತ್ರಣಕ್ಕೆ ಬಂತು. ಮಳೆ ಬರುತ್ತಲೇ ಇರುವಾಗ ಅದನ್ನು ನಿರ್ವಹಿಸುವುದು ಕಷ್ಟ. ಇಲ್ಲಿ ನಾವು ನಿಯಂತ್ರಣ ಕೊಠಡಿಯನ್ನು ತೆರೆದು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ 24 ಗಂಟೆಯೂ ಜಾಗೃತ ಸ್ಥಿತಿ ಯಲ್ಲಿರಲು ಸೂಚಿಸಿದ್ದೇವೆ.
- ಸಾಮಾನ್ಯವಾಗಿ ನಗರಗಳಲ್ಲಿ ಕಾನೂನನ್ನು ಗಾಳಿಗೆ ತೂರಿ ಬೃಹತ್ ಕಟ್ಟಡ ನಿರ್ಮಿಸಿ ಕೃತಕ ಅಪಾಯಗಳನ್ನು ಸೃಷ್ಟಿಸು ತ್ತಿದ್ದಾರೆ. ಇದಕ್ಕೆ ಏನನ್ನುತ್ತೀರಿ?
ನೀರು ಹರಿದು ಹೋಗುವ ಜಾಗ ಗಳನ್ನು ಪರಿಗಣಿಸದೆ ಕಟ್ಟಡಗಳನ್ನು ನಿರ್ಮಿಸುತ್ತಿರುವುದರಿಂದ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಭೂಪರಿವರ್ತನೆ ಮಾಡುವಾಗ ಇವುಗಳನ್ನು ಗಮನಿಸಬೇಕು. ಭೂ ಪರಿವರ್ತನೆ ಮಾಡುವಾಗ ನಾವು ನಗರಾಭಿವೃದ್ಧಿ ಪ್ರಾಧಿಕಾರದ ನಿರಾಕ್ಷೇಪಣೆ ಪತ್ರ (ಎನ್‌ಒಸಿ) ಕೇಳುತ್ತೇವೆ. ಅವರು ನೀರು ಹರಿದುಹೋಗುವ ದಾರಿ ಬಿಟ್ಟು ಎಲ್ಲಿ ಕಟ್ಟಡ ಕಟ್ಟಬಹುದು ಎಂದು ನೋಡಿ ಶಿಫಾರಸು ಮಾಡಬೇಕು. ಆದರೆ ಇದು ಎಷ್ಟರ ಮಟ್ಟಿಗೆ ಆಗುತ್ತಿದೆ ಎನ್ನುವುದೇ ಪ್ರಶ್ನೆ. ಹಳ್ಳಿಗಳಲ್ಲಿ ಕೃಷಿ ವಲಯದಲ್ಲಿ ಮನೆ ನಿರ್ಮಿಸುವಾಗಲೂ ನೀರು ಹರಿದು ಹೋಗಲು ಅವಕಾಶ ಕೊಟ್ಟಿರಬೇಕು.
- ತುರ್ತು ಸಂದರ್ಭದಲ್ಲಿ ಮೆಸ್ಕಾಂ, ಕಂದಾಯದಂತಹ ಪ್ರಮುಖ ಇಲಾಖೆ ಅಧಿಕಾರಿಗಳು ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂಬ ದೂರು ಇದೆ.
ದೂರವಾಣಿ ಕರೆ ಸ್ವೀಕರಿಸಲೇ ಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ.
ಶಿಸ್ತುಕ್ರಮಕ್ಕಿಂತ ಜನಜಾಗೃತಿ ಮುಖ್ಯ
ನಿರ್ಮಾಣ ಕಾಮಗಾರಿಗಳಿಗೆ ಕಾನೂನು ಮೀರಿ ಅವಕಾಶ ಕೊಟ್ಟಾಗ ಅದರ ವಿರುದ್ಧ ಕ್ರಮ ಕೈಗೊಳ್ಳು ವಂತಿರಬೇಕು. ಆದರೆ ಇದಕ್ಕೂ ಮಿಗಿಲಾಗಿ ನಿರ್ಮಾಣಕಾರರು ಮತ್ತು ಜನರೇ ಜಾಗೃತರಾಗುವುದು ಮುಖ್ಯ. ತಾವೇ ನಿರ್ಮಿಸುವ ಕಟ್ಟಡಗಳಿಂದ ತಮಗೇ ಅಪಾಯವಾಗುವ ಸ್ಥಿತಿಯ ಕುರಿತು ಜನರಲ್ಲಿ ಸ್ವಯಂ ಜಾಗೃತಿ ಮೂಡ ಬೇಕು; ಅದನ್ನು ಮೂಡಿಸುವ ಕೆಲಸ ಆಗಬೇಕು. ನಗರಾಭಿವೃದ್ಧಿ ಪ್ರಾಧಿಕಾರಗಳೂ ಕಾನೂನು ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಅವರು ಕಾನೂನು ಚೌಕಟ್ಟು ಮೀರಿ ನಡೆದರೆ ಅದಕ್ಕೆ ಸೂಕ್ತ ಪುರಾವೆ ಸಿಕ್ಕಿ ದರೆ ಕ್ರಮ ಕೈಗೊಳ್ಳಬಹುದು. ಸರಿಯಾದ ಪುರಾವೆ, ದೂರುಗಳು ಬೇಕು. ಹೀಗೆ ಮಾಡದಂತೆ ಸೂಚನೆ ಕೊಡುತ್ತೇವೆ. ಚರಂಡಿ ನೀರು ಹರಿದು ಹೋಗದೆ ಇರಲು ಕೆಲವೆಡೆ ಅತಿಕ್ರಮಣ ಮಾಡಿಕೊಂಡ ಸಾರ್ವಜನಿಕರು ಕಾರಣ. ಕಾಪುವಿನಲ್ಲಿ ಹೀಗೆ ಆಗಿರುವುದು ಬುಧವಾರ ಕಂಡು ಬಂದಿದೆ. ಅತಿಕ್ರಮಣ ಮಾಡಿಕೊಂಡು ಅದರ ಮೇಲೆ ಸ್ಲಾಬ್ ಹಾಕಿದರೆ ತ್ಯಾಜ್ಯ ತುಂಬಿ ನೀರು ಹರಿದುಹೋಗುವುದಿಲ್ಲ. ಜನರೂ ಅರ್ಥ ಮಾಡಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.