ಅಮೃತ್‌ ಸರೋವರ್‌ ಯೋಜನೆ: ಅಭಿವೃದ್ಧಿಗೊಳ್ಳಲಿರುವ ಕೆರೆಗಳ ಪಟ್ಟಿ ಸಿದ್ಧ

ತಿಂಗಳಲ್ಲಿ 15 ಕೆರೆಗಳ ಅಭಿವೃದ್ಧಿ ಪೂರ್ಣ; ಕೆರೆಗಳ ತಟದಲ್ಲೇ ಸ್ವಾತಂತ್ರ್ಯೋತ್ಸವ

Team Udayavani, Jul 20, 2022, 5:30 AM IST

ಅಮೃತ್‌ ಸರೋವರ್‌ ಯೋಜನೆ: ಅಭಿವೃದ್ಧಿಗೊಳ್ಳಲಿರುವ ಕೆರೆಗಳ ಪಟ್ಟಿ ಸಿದ್ಧ

ಉಡುಪಿ/ ಮಂಗಳೂರು: ಕೇಂದ್ರ ಸರಕಾರದ ಅಮೃತ್‌ ಸರೋವರ್‌ ಯೋಜನೆಯಡಿ ಅಭಿವೃದ್ಧಿಪಡಿ ಸಲು ಜಿಲ್ಲೆಯ 75 ಬೃಹತ್‌ ಕೆರೆಗಳನ್ನು ಗ್ರಾ.ಪಂ.ವಾರು ಗುರುತಿಸಲಾಗಿದೆ. ಕೆಲವು ಗ್ರಾ.ಪಂ.ಗಳಲ್ಲಿ ಎರಡು ಅಥವಾ ಮೂರು ಕೆರೆಗಳನ್ನು ಗುರುತಿಸಲಾಗಿದೆ.

ಪ್ರಧಾನ ಮಂತ್ರಿ ಮಿಷನ್‌ ಅಮೃತ್‌ ಸರೋವರ್‌ ಕಾರ್ಯಕ್ರಮದಡಿ ಕೆರೆಗಳ ಆಯ್ಕೆಗೆ ಜಿ.ಪಂ. ಸಿಇಒ ಅಧ್ಯಕ್ಷತೆ ಯಲ್ಲಿ ಅಪರ ಜಿಲ್ಲಾಧಿಕಾರಿ ಮತ್ತು ವಿವಿಧ ಇಲಾಖೆಯ ನಾಲ್ವರು ಅಧಿಕಾರಿಗಳು, ಪಂಚಾಯತ್‌ ಪಿಡಿಒ ಸದಸ್ಯರಾಗಿರುವ ಹಾಗೂ ಪಂಚಾಯತ್‌ರಾಜ್‌ ಎಂಜಿನಿ ಯರಿಂಗ್‌ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸದಸ್ಯ ಕಾರ್ಯದರ್ಶಿಯಾಗಿರುವಂತೆ ಸಮಿತಿ ರಚನೆ ಮಾಡಲಾಗಿದೆ. ನೋಡಲ್‌ ಅಧಿಕಾರಿ ಯನ್ನು ನೇಮಿಸಲಾಗಿದೆ.

ಕೆರೆಯ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ, ನರೇಗಾದಡಿ ಯಲ್ಲಿ ಹೂಳೆತ್ತುವ ಪ್ರಕ್ರಿಯೆ, ನರೇಗಾ ಹಾಗೂ ವಿವಿಧ ಅನುದಾನದಡಿ ಅಭಿವೃದ್ಧಿ ಪಡಿಸಲಾಗುತ್ತದೆ. ಸಿಎಸ್‌ಆರ್‌ ನಿಧಿಯನ್ನೂ ಬಳಸಿಕೊಳ್ಳ ಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದ.ಕ. ಜಿಲ್ಲೆಯ ಕೆರೆಗಳು
ಬಂಟ್ವಾಳ ತಾಲೂಕಿನ ಮೇರೆಮಜಲು, ಕಡೇಶ್ವಾಲ್ಯ, ಬೆಳ್ತಂಗಡಿಯ ಕುವೆಟ್ಟು, ಅಳದಂಗಡಿ, ಅಂಡಿಂಜೆ, ಕಡಬದ ಕುಟ್ರಾಪ್ಪಾಡಿ, ಸುಬ್ರಹ್ಮಣ್ಯ, ಮಂಗಳೂರಿನ ಗಂಜಿಮಠ, ತಲಪಾಡಿ, ಮೂಡುಬಿದಿರೆಯ ವಾಲ್ಪಾಡಿ, ಪುತ್ತಿಗೆ, ಪುತ್ತೂರಿನ ಆರ್ಯಾಪು, ಉಪ್ಪಿನಂಗಡಿ, ಸುಳ್ಯದ ಬಾಳಿಲ, ಮುರುಳ್ಯ ಗ್ರಾ.ಪಂ. ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ನಡೆಯುತ್ತಿದೆ. ಬಂಟ್ವಾಳ ತಾಲೂಕಿನ ಇರ್ವತ್ತೂರು, ಸಜಿಪಪಡು, ಕುರ್ನಾಡು, ಕಾವಳಮುಡೂರು, ಕರಿಯಂಗಳ, ಪುದು, ಬಾಳೆಪುಣಿ, ಕೊಳ್ನಾಡು, ಬಡಗಬೆಳ್ಳೂರು, ನರಿಕೊಂಬು, ಬಾಳ್ತಿಲ, ಕಳ್ಳಿಗೆ, ಬೆಳ್ತಂಗಡಿಯ ವೇಣೂರು, ನಾರಾವಿ, ನೆರಿಯ, ಚಾರ್ಮಾಡಿ, ಕೊಕ್ಕಡ, ಪಡಂಗಡಿ, ಉಜಿರೆ, ನಾವೂರು, ಸುಲ್ಕೇರಿ, ಮಡಂತ್ಯಾರು, ಹೊಸಂಗಡಿ, ಕಡಬ ತಾಲೂಕಿನ ಬಾರ್ಯ, ನೆಲ್ಯಾಡಿ, ರಾಮಕುಂಜ, ಪೆರಾಬೆ, ಐತೂರು, ಸವಣೂರು, ಸುಬ್ರಹ್ಮಣ್ಯ ಮಂಗಳೂರು ತಾಲೂಕಿನ ಗುರುಪುರ, ಬಳ್ಕುಂಜೆ, ಕಂದಾವರ, ಪಡುಪಣಂಬೂರು, ಮುನ್ನೂರು, ಕೊಣಾಜೆ, ಅತಿಕಾರಿಬೆಟ್ಟು, ಮೂಡುಬಿದಿರೆ ತಾಲೂಕಿನ ತೆಂಕಮಿಜಾರು, ದರೆಗುಡ್ಡೆ, ಪುತ್ತೂರಿನ ಅರಿಯಡ್ಕ, ಬಡಗನ್ನೂರು, ಬೆಟ್ಟಂಪಾಡಿ, ಕೆದಂಬಾಡಿ, ಬನ್ನೂರು, ಹಿರೇಬಂಡಾಡಿ, ಉಪ್ಪಿನಂಗಡಿ, ಬೆಟ್ಟಂಪಾಡಿ, ಸುಳ್ಯದ ಹರಿಹರಪಳ್ಳತ್ತಡ್ಕ, ಬೆಳ್ಳಾರೆ, ದೇವಚಳ್ಳ, ಉಬರಡ್ಕ ಮಿತ್ತೂರು, ಕೊಲ್ಲಮೊಗ್ರು ಗ್ರಾ.ಪಂ. ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ನಡೆಯಲಿದೆ.

ಉಡುಪಿ ಜಿಲ್ಲೆಯ ಕೆರೆಗಳು
ಬ್ರಹ್ಮಾವರ ತಾಲೂಕಿನ ಹೊಸೂರು, ಹನೆಹಳ್ಳಿ, ಕಾವಡಿ, ನಾಲ್ಕೂರಿನಲ್ಲಿ 2, ಕೆಂಜೂರು, ಪೆಜಮಂಗೂರಿನಲ್ಲಿ 3, ಯಡ್ತಾಡಿ, ಹೇರಾಡಿ, ಗಿಳಿಯಾರಿನಲ್ಲಿ 2, ಕೋಟತಟ್ಟು, ಬನ್ನಾಡಿ, ನಂಚಾರು, ಕುದಿ-82, ಕಡೂರು, ಹಿಲಿಯಾಣ, ನಡೂರು, ಬೈಂದೂರು ತಾಲೂಕಿನ ಮರವಂತೆ, ಕೆರ್ಗಾಲು, ಕಿರಿಮಂಜೇಶ್ವರದಲ್ಲಿ 2, ಕಂಬದಕೋಣೆ, ಕಾಲ್ತೊಡು, ಶಿರೂರಿನಲ್ಲಿ 2, ಎಳಜಿತ್‌ನಲ್ಲಿ 2, ಗೋಳಿಹೊಳೆ, ಹೆಬ್ರಿಯ ಮುದ್ರಾಡಿ, ಕೆರೆಬೆಟ್ಟು, ಚಾರ, ಬೆಳಂಜೆ, ಶಿವಪುರ, ಕಾಪುವಿನ ಶಿರ್ವ, ಪಾದೆಬೆಟ್ಟು ಮಜೂರು, ಸಾಂತೂರು, ಎಲ್ಲೂರು, ಏಣಗುಡ್ಡೆ, ಬೆಳ್ಳೆ, ಕೋಟೆ, ಕುತ್ಯಾರು, ಕಾರ್ಕಳದ ಮಿಯ್ನಾರಿನಲ್ಲಿ 2, ಇನ್ನಾ, ಕಣಜಾರು, ಎರ್ಲಪಾಡಿ, ದುರ್ಗಾ, ನಿಟ್ಟೆ, ಬೋಳ, ಕುಕ್ಕುಂದೂರು, ಕೌಡೂರು, ಸಾಣೂರು, ಮರ್ಣೆ, ಮುಲ್ಲಡಕ, ಕಾಂತೇಶ್ವರ. ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ 3, ಕೆರಾಡಿಯಲ್ಲಿ 2, ಕಟ್‌ಬೇಲೂರು, ತಲ್ಲೂರಿನಲ್ಲಿ 2, ಬೀಜಾಡಿಯಲ್ಲಿ 5, ಕಾವ್ರಾಡಿ, ಚಿತ್ತೂರು, ನೂಜಾಡಿ, ಹಟ್ಟಿಯಂಗಡಿ, ಬೇಳೂರು, ಹಕೂìರು, ಆಜ್ರಿಯಲ್ಲಿ 2, ಕೊಡ್ಲಾಡಿ, ಕೋಣಿ, ಬೆಳ್ಳಾಲ, ವಂಡ್ಸೆಯಲ್ಲಿ 2, ಮೊಳಹಳ್ಳಿ, ತೆಕ್ಕಟ್ಟೆ, ಕೆದೂರು, ಹೊಸಾಡು, ಸಿದ್ದಾಪುರ, ಇಡೂರು ಕುಂಜ್ಞಾಡಿ, ಉಡುಪಿಯ ಕುಕ್ಕೇಹಳ್ಳಿ, ಪೆರ್ಡೂರು ಬೊಮ್ಮರ ಬೆಟ್ಟು, ಬೈರಂಪಳ್ಳಿ, ಉದ್ಯಾವರ, ತೋನ್ಸೆ ಪೂರ್ವದ ಗ್ರಾಮದ ಕೆರೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಅಮೃತ್‌ ಸರೋವರ್‌ ಯೋಜನೆಯಡಿ ಅಭಿವೃದ್ಧಿಪಡಿಸಲು ಕೆರೆಗಳನ್ನು ಗುರುತಿಸಲಾಗಿದೆ. ಆಗಸ್ಟ್‌ 15ರೊಳಗೆ 15 ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಕೆರೆಗಳ ಪಕ್ಕದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುವುದರೊಂದಿಗೆ ಬಾಕಿ ಕೆರೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು.
– ಪ್ರಸನ್ನ ಎಚ್‌. / ಡಾ| ಕುಮಾರ್‌,
ಉಡುಪಿ ಮತ್ತು ದ.ಕ. ಜಿ.ಪಂ. ಸಿಇಒಗಳು

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.