ಸಾಂಪ್ರದಾಯಿಕ ಮೀನುಗಾರಿಕೆ ಇಲ್ಲದೆ ಕಳೆಯುತ್ತ ಬಂತು ಯಾಂತ್ರೀಕೃತ ಮೀನುಗಾರಿಕೆ ರಜೆ

Team Udayavani, Jul 27, 2019, 5:33 AM IST

2607MLE7

ಮಲ್ಪೆ: ಉಡುಪಿ ಜಿಲ್ಲೆಯ ಕರಾವಳಿಯ ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ಇಲ್ಲದೆ ಈ ವರ್ಷ ಮಳೆಗಾಲದ ಯಾಂತ್ರೀಕೃತ ಮೀನುಗಾರಿಕೆ ರಜಾ ಅವಧಿ ಮುಗಿಯುವ ಲಕ್ಷಣ ಕಂಡು ಬರುತ್ತಿದೆ. ಆ.1ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳಲಿರುವುದರಿಂದ ಮಳೆಗಾಲದ ನಾಡದೋಣಿ ಮೀನುಗಾರಿಕೆಗೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿದೆ. ಕರಾವಳಿಯಲ್ಲಿ ಮಳೆ ಬಿರುಸುಗೊಂಡ ಹಿನ್ನೆಲೆಯಲ್ಲಿ ಕಡಲ ಅಬ್ಬರ ಕೂಡ ಹೆಚ್ಚಾಗಿದೆ. ಪರಿಣಾಮ ಒಂದು ವಾರದಿಂದ ನಾಡದೋಣಿ ಮೀನುಗಾರಿಕೆಯೂ ಸ್ಥಗಿತಗೊಂಡಂತಾಗಿತ್ತು.

ತೂಫಾನ್‌ ಆದರೂ ಮೀನಿಲ್ಲ
ಸಾಮಾನ್ಯವಾಗಿ ಸಮುದ್ರದಲ್ಲಿ ತೂಫಾನ್‌ ಎದ್ದರೆ ಮಾತ್ರ ನಾಡದೋಣಿ ಮೀನುಗಾರರಿಗೆ ಮೀನು ಬೇಟೆಗೆ ಪೂರಕವಾಗಿರುತ್ತದೆ. ಆದರೆ ಈ ಬಾರಿ ತಡವಾಗಿ ತೂಫಾನ್‌ ಆಗಿದ್ದರೂ ಕಡಲಿಗಿಳಿದ ಮೀನುಗಾರರು ಸಮುದ್ರ ಜಾಲಾಡಿದರೂ ಮೀನು ಸಿಗುವ ಲಕ್ಷಣ ಕಂಡು ಬರುತ್ತಿಲ್ಲ.

ಇದೀಗ ಕಳೆದ ಮೂರ್‍ನಾಲ್ಕು ದಿನಗಳಿಂದ ಮೀನು ಗಾರಿಕೆ ತೆರದ ಮೀನುಗಾರರಿಗೆ ಮೀನು ಸಿಗದೇ ಬರಿಗೈಯಲ್ಲಿ ವಾಪಾಸಾಗುತ್ತಿದ್ದಾರೆ. ಒಂದಡೆ ಪ್ರತಿಕೂಲ ವಾತಾವರಣ ದಿಂದಾಗಿ ಕಡಲಿಗಿಳಿಯಲು ಸಾಧ್ಯವಾಗದ ನಾಡದೋಣಿ ಮೀನುಗಾರರಿಗೆ ಇನ್ನೊಂದಡೆ ಮತ್ಸéಕ್ಷಾಮ ಬಾಧಿಸಿದ್ದು ಆರ್ಥಿಕ ಹೊಡೆತವನ್ನು ನೀಡಿದೆ.ಇನ್ನು ಕೆಲವೇ ದಿನಗಳಲ್ಲಿ ಯಾಂತ್ರಿಕ ಮೀನುಗಾರಿಕೆ ಅವಧಿ ಆರಂಭಗೊಳ್ಳಲಿದೆ. ಈ ನಡುವೆ ಗಳಿಕೆಯ ಕನಸು ಕಂಡಿದ್ದ ನಾಡದೋಣಿ ಮೀನುಗಾರರು ನಿರಾಸೆ ಅನುಭವಿಸುತ್ತಿದ್ದಾರೆ.

ಕೋಟ್ಯಂತರ ರೂ. ನಷ್ಟ
ಈ ಬಾರಿ ಮಳೆಗಾಲದ ನಾಡದೋಣಿ ಮೀನುಗಾರಿಕೆ ಹಿನ್ನಡೆಯಾದ್ದರಿಂದ ಮೀನುಗಾರಿಕೆ ಉದ್ಯಮಕ್ಕೆ ಕೋಟ್ಯಂ ತರ ರೂಪಾಯಿ ನಷ್ಟವಾಗಿದೆ. ಕಳೆದ ಬಾರಿ ಇಷ್ಟೊತ್ತಿಗೆ ನಾಡದೋಣಿ ಮೀನುಗಾರರು ಲಕ್ಷಾಂತರ ರೂಪಾಯಿ ಆದಾಯವನ್ನು ಗಳಿಸಿದ್ದರು. ಮಳೆಗಾಲದಲ್ಲಿ ಸಿಗುವ ಸಿಗಡಿ ಮೀನಿಗೆ ಉತ್ತಮ ಬೆಲೆ ಇರುತ್ತದೆ. ಆದರೆ ಈ ಬಾರಿ ನಾಡದೋಣಿ ಮೀನುಗಾರರು ಇನ್ನೂ ಮೀನು ದೊರಕದಿರುವುದು ಪ್ರತಿಯೊಂದು ದೋಣಿಗಳಿಗೆ ಕನಿಷ್ಟ 1.5ರಿಂದ 2 ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸಬೇಕಾಗಿದೆ.

ತಾಜಾ ಮೀನಿನ ಕೊರತೆ
ನಾಡದೋಣಿಗಳು ಕಡಲಿಗೆ ಇಳಿಯದ ಕಾರಣ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನುಗಳ ಕೊರತೆ ಉಂಟಾಗಿದೆ. ಮಂಗಳೂರು ಉಡುಪಿ ಮಾರುಕಟ್ಟೆಗೆ ದೂರದ ತಮಿಳುನಾಡು, ಮಹಾರಾಷ್ಟ್ರದ ರತ್ನಾಗಿರಿ ಯಿಂದ ಮೀನು ಸಂಸ್ಕರಣಾ ಘಟಕಗಳಿಂದ ಮೀನುಗಳನ್ನು ಆಮದು ಮಾಡಿ ಮಾರಾಟ ಮಾಡಲಾಗುತ್ತದೆ.

ಮೀನಿನ
ಛಾಯೆಯೇ ಇಲ್ಲ
ಈ ಸಲ ಇದುವರೆಗೂ ಗಾಳಿ ನೀರು ಮೀನುಗಾರಿಕೆಗೆ ಪೂರಕವಾಗಿ ಇರಲಿಲ್ಲ. ವಾರದ ಹಿಂದೆ ಕಡಲಲ್ಲಿ ಮೀನಿನ ಲಕ್ಷಣ ಕಂಡು ಬಂದಿದ್ದರೂ, ಅದನ್ನು ಹಿಡಿಯುವ ವೇಳೆ ಒಮ್ಮೆಲೆ ತೂಫಾನ್‌ ಆಗಿರುವ ಕಾರಣ ಆ ಮೀನು ವಲಸೆ ಹೋಗಿದೆ. ಇದೀಗ ಎಲ್ಲಿಯೂ ಮೀನಿನ ಛಾಯೆಯೇ ಕಾಣುತ್ತಿಲ್ಲ
– ಕೃಷ್ಣ ಎಸ್‌. ಸುವರ್ಣ, ಪಡುತೋನ್ಸೆ

ಸಂಪಾದನೆ ಇಲ್ಲ
ಜು. 31ರಂದು ಯಾಂತ್ರಿಕೃತ ಮೀನುಗಾರಿಕೆಯ ರಜೆ ಮುಗಿಯಲಿದೆ. ಸಾಂಪ್ರಾಯಿಕ ಮೀನುಗಾರರು ವರ್ಷದ ಎರಡು ತಿಂಗಳು ಒಂದಷ್ಟು ಅಧಿಕ ಸಂಪಾದನೆ ಗಳಿಸಲು ಅವಕಾಶವಿರುವ ಈ ಅವಧಿಯಲ್ಲಿ ಕೆಲವರು ಕಡಲಿಗೆ ಇಳಿದಿದ್ದರೂ ಸಂಪಾದನೆ ಆಗಿಲ್ಲ. ಹೆಚ್ಚಿನವರು ಕಡಲಿಗೆ ಇಳಿದೇ ಇಲ್ಲ.
-ರಮೇಶ್‌ ಕಾಂಚನ್‌, ವಾಸು ಕುಂದರ್‌,
ನಾಡದೋಣಿ ಮೀನುಗಾರರು

-ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು

Naxal-encounter-Vikram-1

Naxal Package: “ಮೊದಲೇ ಪ್ಯಾಕೇಜ್‌ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ

Birth-Certi

Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.