Udupi: ಇಂಗ್ಲಿಷ್ ಕಲಿಕೆ ಗುಣಮಟ್ಟ ಅರಿಯಲು ಶಾಲೆಗೆ ತಜ್ಞರ ಭೇಟಿ
ಸುಧಾರಣೆಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.
Team Udayavani, Jul 29, 2024, 1:33 PM IST
ಉಡುಪಿ: ಸರಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ಕಲಿಕೆಗೆ ಪೂರಕವಾಗಿ ಆಂಗ್ಲ ಮಾಧ್ಯಮ ತೆರೆಯಲು ಅನುಮತಿಸಿರುವ
ಬೆನ್ನಲ್ಲೇ ಆಂಗ್ಲ ಮಾಧ್ಯಮ ಭೋಧನೆಯ ಪರಿಶೀಲನೆ, ಕಲಿಕೆಯ ಗುಣಮಟ್ಟ ಅರಿಯಲು ವಿಷಯ ತಜ್ಞರ ತಂಡ ಶಾಲೆಗಳಿಗೆ ಭೇಟಿ ನೀಡಲಿವೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು ಆಂಗ್ಲ ಭಾಷೆಗೆ ಸಂಬಂಧಿಸಿ ಅನುಪಾಲನೆ, ಮಾರ್ಗದರ್ಶನ ಹಾಗೂ ಸಹಕಾರದ (ಅಕಾಡೆಮಿಕ್ ಸಪೋರ್ಟ್) ಪರಿಕಲ್ಪನೆಯಡಿ ಜಿಲ್ಲಾಮಟ್ಟದ ವಿಷಯ ತಜ್ಞರನ್ನು ಒಳಗೊಂಡ ಸಂಪನ್ಮೂಲ ತಂಡ(ಡಿಆರ್‌ಟಿ)ರಚನೆ ಮಾಡಿದೆ.ಅದರ ಅಡಿಯಲ್ಲಿ ಬ್ಲಾಕ್ ಸಂಪನ್ಮೂಲ ತಂಡ ತಮ್ಮ ವ್ಯಾಪ್ತಿಯ ಶಾಲೆಗೆ ಭೇಟಿ ನೀಡಿ, ಅಲ್ಲಿನ
ಆಂಗ್ಲ ಭಾಷೆಯ ಬೋಧನೆ, ವಿದ್ಯಾರ್ಥಿಗಳ ಕಲಿಕೆ ಇತ್ಯಾದಿಗಳನ್ನು ಪರಿಶೀಲಿಸಿ ರಾಜ್ಯಕ್ಕೆ ವರದಿ ಸಲ್ಲಿಸಲಿದೆ.
ತಂಡ ರಚನೆ
ಡಿಆರ್‌ಟಿ ಮೇಲುಸ್ತುವಾರಿಯಲ್ಲಿ ಪ್ರತಿ ತಾಲೂಕಿನಲ್ಲೂ 5 ಸದಸ್ಯರನ್ನು ಒಳಗೊಂಡಿರುವ ಬ್ಲಾಕ್ ಸಂಪನ್ಮೂಲ ತಂಡ(ಬಿಆರ್‌ಟಿ) ರಚಿಸಲಾಗುತ್ತದೆ. ಬ್ಲಾಕ್ ಮಟ್ಟದ ಇಂಗ್ಲಿಷ್ ನೋಡಲ್ ಅಧಿಕಾರಿ, ಪ್ರೌಢಶಾಲಾ ಶಿಕ್ಷಕ, ಬಿಆರ್‌ಪಿ(ಬ್ಲಾಕ್ ರಿಸೋರ್ಸ್ ಪರ್ಸನ್), ಸಿಆರ್‌ಪಿ(ಕ್ಲಸ್ಟರ್ ರಿಸೋರ್ಸ್ ಪರ್ಸನ್) ಹಾಗೂ ಆಂಗ್ಲ ಮಾಧ್ಯಮ ವಿಷಯದಲ್ಲಿ ತರಬೇತಿ ಪಡೆದ ಶಿಕ್ಷಕ ಸಹಿತ 5 ಮಂದಿಯನ್ನು ಈ ತಂಡ ಒಳಗೊಂಡಿರುತ್ತದೆ. ತಂಡವು ಶಾಲೆಗೆ ಭೇಟಿ ನೀಡಲು ಡಯಟ್ ಪ್ರಾಂಶುಪಾಲರು ಹಾಗೂ ಜಿಲ್ಲಾ ಉಪನಿರ್ದೇಶಕರು ವೇಳಾಪಟ್ಟಿ ಸಿದ್ಧಪಡಿಸಲಿದ್ದಾರೆ.
ನಿರಂತರ ಭೇಟಿ
ಈ ತಂಡವು ಮೊದಲ ಹಂತದಲ್ಲಿ ತಮ್ಮ ವ್ಯಾಪ್ತಿಯ 5 ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಇಂಗ್ಲಿಷ್ ಕಲಿಕೆ ಮತ್ತು ಗುಣಮಟ್ಟವನ್ನು ಪರಿಶೀಲಿಸಲಿದೆ. ಅನಂತರ ಅದರಲ್ಲಿಯೇ 3 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಪುನಃ ಭೇಟಿ ನೀಡಿ ಶೈಕ್ಷಣಿಕ ಪ್ರಗತಿಯನ್ನು ದಾಖಲಿಸಲಿದೆ. ಇಂಗ್ಲಿಷ್ ಭಾಷೆ ಕಲಿಕೆಯಲ್ಲಿ ಹಿಂದುಳಿದ ಶಾಲೆಗಳನ್ನು ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಂಡು, ಸುಧಾರಣೆಗೆ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ.
ಭೇಟಿಯ ಸಂದರ್ಭದಲ್ಲಿ ಏನೇನು ಮಾಡಲಿದ್ದಾರೆ?
ವಿಷಯ ತಜ್ಞರು ತಮ್ಮ ಅಧ್ಯಯನಗಳ ಆವಿಷ್ಕಾರದ ಆಧಾರದಲ್ಲಿ ಶಾಲೆಗಳಲ್ಲಿ ಇಂಗ್ಲಿಷ್‌ಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಡಯಟ್ ಮೂಲಕ ಆಂಗ್ಲ ಭಾಷ ಬೋಧನೆಗೆ ತರಬೇತಿ ಪಡೆದವರೇ ಬೋಧಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಹಾಗೂ ಬರವಣಿಗೆ ಕೌಶಲ್ಯ ವೃದ್ಧಿಗೆ ಶಿಕ್ಷಕರ ಮೂಲಕ ವಿನೂನತ ಪ್ರಯೋಗ ಸಹಿತ ವಿವಿಧ ಸಲಹೆ ನೀಡಲಿದ್ದಾರೆ.
ತಂಡದ ಜವಾಬ್ದಾರಿಗಳೇನು?
ಶಾಲಾ ಹಂತದ ತರಗತಿ ಬೋಧನೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರು ಸಣ್ಣಸಣ್ಣ ಕ್ರಿಯಾ ಸಂಶೋಧನೆ(ಆ್ಯಕ್ಷನ್ ರಿಸರ್ಚ್)ಕೈಗೊಳ್ಳುವಂತೆ ಪ್ರೇರೇಪಿಸುವುದು, ಆಂಗ್ಲ ಭಾಷಾ ಬೋಧನೆ ಸುಧಾರಣೆಗೆ ವರ್ಷಕ್ಕೆ 40ರಿಂದ 50 ಶಿಕ್ಷಕರ ಸಣ್ಣ ಗುಂಪು ರಚಿಸಿ ಆನ್‌ಲೈನ್ ಮೂಲಕ ವೃತ್ತಿಪರ ಅಭಿವೃದ್ಧಿ ಚಟುವಟಿಕೆ ನಡೆಸುವುದು. ಶಾಲೆಯ ಇತರ ಶಿಕ್ಷಕರು ಹಾಗೂ ಮಕ್ಕಳ ಪೋಷಕರನ್ನು ಇದರಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನ ನಡೆಸುವುದಾಗಿದೆ.
ಆಂಗ್ಲ ಭಾಷಾ ತರಬೇತಿ ಪಡೆದ ಶಿಕ್ಷಕರು ವಿದ್ಯಾರ್ಥಿಗಳಿಗೆ ಎಷ್ಟು ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದಾರೆ ಮತ್ತು ವಿದ್ಯಾರ್ಥಿಗಳು ಯಾವ ರೀತಿಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದನ್ನು ತಿಳಿಯಲು ಹಾಗೂ ಇನ್ನಷ್ಟು ಕೌಶಲಾಧಾರಿತ ಚಟುವಟಿಕೆಗಳನ್ನು ಒದಗಿಸಲು ಈ ರೀತಿಯ ತಂಡ ರಚನೆ ಮಾಡಲಾಗಿದೆ. ಶಾಲೆಗಳಿಗೆ ನಿರಂತರ ಭೇಟಿ ನೀಡಿ ವರದಿ ಸಲ್ಲಿಸಲಿದ್ದಾರೆ.
*ವಿ.ಸುಮಂಗಳಾ,
ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ
*ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.