ಹೈನುಗಾರರು ಬದುಕು ಕಟ್ಟಿಕೊಳ್ಳಲು ನೆರವಾದ ಸಂಸ್ಥೆ

ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ

Team Udayavani, Feb 15, 2020, 6:45 AM IST

hainugarara-baduku

ಬಹಳ ವರ್ಷಗಳ ಹಿಂದೆಯೇ ಹೈನುಗಾರರನ್ನು ಒಟ್ಟಾಗಿಸಿ, ಅವರಿಗೊಂದು ದಾರಿದೀಪವಾದ ಕೀರ್ತಿ ಸಿದ್ದಾಪುರ ಹಾಲು ಉತ್ಪಾದಕರ ಸಂಘದ್ದು. ಅಂದು 70 ಲೀ. ಹಾಲು ಸಂಗ್ರಹಿಸುತ್ತಿದ್ದ ಸಂಘ ಇಂದು ಬೆಳೆದ ಪರಿ ನಿಜಕ್ಕೂ ಅದ್ಭುತ.

ಸಿದ್ದಾಪುರ: ಸ್ವಾವಲಂಬನೆ ಬದುಕಿನ ಉದ್ದೇಶದಿಂದ ಆರಂಭಗೊಂಡ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರಿ ಸಂಘ ಸಮಾಜಮುಖೀ ಧೋರಣೆಯನ್ನು ಹೊಂದಿದ್ದು, ಹೈನುಗಾರರ ಪಾಲಿಗೆ ಆಶಾಕಿರಣವಾಗಿದೆ.
ಈ ಸಂಘಕ್ಕೆ 45 ವರ್ಷಗಳ ಇತಿಹಾಸವಿದ್ದು, ಜಿಲ್ಲೆಯ ಪ್ರಮುಖ ಸಂಘವಾಗಿಯೂ ಗುರುತಿಸಿಕೊಂಡಿದೆ.

1975ರಲ್ಲಿ ಸಿದ್ದಾಪುರ ಗ್ರಾ.ಪಂ.ನ ಮೂರು ಗ್ರಾಮಗಳ ವ್ಯಾಪ್ತಿಯ 40 ಸದಸ್ಯರನ್ನು ಒಟ್ಟು ಸೇರಿಸಿ ಸಂಘ ಸ್ಥಾಪನೆಯಾಯಿತು. ಆರಂಭದ ದಿನಗಳಲ್ಲಿ ಪೇಟೆಯಲ್ಲಿರುವ ವ್ಯಾಸರಾವ್‌ ಅವರ ಕಟ್ಟಡದಲ್ಲಿ ಸಂಘ ಪ್ರಾರಂಭಗೊಂಡಿತು.

ಹೈನುಗಾರರಿಗೆ ವರದಾನ
ಸಿದ್ದಾಪುರ, ಜನ್ಸಾಲೆ, ಹೆನ್ನಾಬೈಲು ವ್ಯಾಪ್ತಿಯ ಗ್ರಾಮಸ್ಥರು ಮನೆಯಲ್ಲಿರುವ ಅಲ್ಪ ಪ್ರಮಾಣದ ಹಾಲನ್ನು ಹೊಟೇಲುಗಳಿಗೆ ಕೊಟ್ಟು ಆದಾಯಗಳಿಸುತ್ತಿದ್ದರು. ಇದನ್ನು ಊರ ಮುತ್ಸದ್ದಿಗಳು ಗಮನಿಸಿ ಹೈನುಗಾರರಿಗೆ ನಿಶ್ಚಿತ ಆದಾಯ, ಬದುಕಿನ ಭದ್ರತೆಗಾಗಿ ಸಂಘ ನಿರ್ಮಾಣಕ್ಕೆ ಯೋಜಿಸಿದರು.

ಅತ್ಯುತ್ತಮ ವ್ಯವಹಾರದ ಮೂಲಕ ಸಂಘ ಬೆಳವಣಿಗೆ ಹೊಂದುತ್ತಿದ್ದಂತೆಯೇ 1984ರಲ್ಲಿ ಗ್ರಾ. ಪಂ.ನಿಂದ 15 ಸೆಂಟ್ಸ್‌ ಜಾಗ ಕಾದಿರಿಸಿಕೊಂಡು ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಸದ್ಯ ಕಟ್ಟಡದಲ್ಲಿ ನಾಲ್ಕು ಅಂಗಡಿ ಕೋಣೆಗಳಿದ್ದು ಇದರಿಂದಲೇ ಸಂಘಕ್ಕೆ ಲಕ್ಷ ರೂ.ವರೆಗೆ ಆದಾಯ ಬರುತ್ತಿದೆ.

ಶೀತಲೀಕರಣ ಘಟಕ
ಸಂಘ ತನ್ನ ಬಳಿ ಶೀತಲೀಕರಣ ಘಟಕವನ್ನೂ ಹೊಂದಿದ್ದು ಇರಿಗೆ, ಕಲ್ಸಂಕ, ಹಳ್ಳಿಹೊಳೆ, ಕಮಲಶಿಲೆ, ಯಡಮೊಗೆ, ಕೆರೆಕಟ್ಟೆ, ಹಂಚಿಕಟ್ಟೆ ಹಾಗೂ ಸಿದ್ದಾಪುರ ಸೇರಿದಂತೆ 8 ಸಂಘಗಳಿಂದ ಹಾಲು ಬಂದು ಶೇಖರಣೆಗೊಳ್ಳುತ್ತದೆ. ಸಂಘದ ವ್ಯಾಪ್ತಿಯ 40 ಸಂಘಗಳಿಗೆ ಸಂಬಂಧಿಸಿದಂತೆ ಪಶು ವೈದ್ಯಕೀಯ ಶಿಬಿರ ಕಚೇರಿ ಹೊಂದಿದೆ. ಪ್ರತಿ ತಿಂಗಳಿಗೆ ಸರಾಸರಿ 250 ಕೃತಕ ಗರ್ಭಧಾರಣೆ ನಡೆಯುತ್ತಿದೆ.

1600 ಲೀ. ಹಾಲು ಸಂಗ್ರಹ
ಸಂಘ ಆರಂಭವಾದ ಕಾಲದಲ್ಲಿ ಕೆನರಾ ಮಿಲ್ಕ್ ಯೂನಿಯನ್‌ಗೆ ಹಾಲು ಸರಬರಾಜು ಮಾಡುತ್ತಿದ್ದು ಉತ್ತಮ ಬೆಳೆವಣಿಗೆ ಕಂಡಿತ್ತು. ಬಳಿಕ ಒಕ್ಕೂಟ ಸ್ಥಾಪನೆಯಾದ ಬಳಿಕ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದೆ. ಆರಂಭದ ದಿನಗಳಲ್ಲಿ ಸಂಘದಲ್ಲಿ ದಿನಕ್ಕೆ 70 ಲೀ. ಹಾಲು ಸಂಗ್ರಹವಾಗುತ್ತಿತ್ತು. ಈಗ 1600 ಲೀ. ಹಾಲು ಸಂಗ್ರಹವಾಗುತ್ತಿದೆ. ಪ್ರಸ್ತುತ 433 ಸದಸ್ಯರನ್ನು ಹೊಂದಿದ್ದು, 260 ಸದಸ್ಯರು ಸಂಘಕ್ಕೆ ಹಾಲು ನೀಡುತ್ತಿದ್ದಾರೆ. ಆಜ್ರಿ ಮೂರುಕೈಯಲ್ಲಿ ತನ್ನ ಶಾಖೆಯನ್ನೂ ಹೊಂದಿದೆ.

ಪ್ರಸ್ತುತ 5 ಸಾವಿರ ಲೀ. ಸಾಮಥ್ಯದ ಬಿ.ಎಂ.ಸಿ ಕೇಂದ್ರ ಆರಂಭಿಸಿದೆ. ಮುಂದೆ 8 ಸಾವಿರ ಸಾಮಥ್ಯದ ಬಿ.ಎಂ.ಸಿ ಕೇಂದ್ರ ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರ ಬಗ್ಗೆ ಈಗಾಗಲೇ ಒಕ್ಕೂಟಕ್ಕೆ ಪ್ರಾಸ್ತವನೆ ಕೂಡ ಸಲ್ಲಿಸಲಾಗಿದೆ.
– ಡಿ. ಗೋಪಾಲಕೃಷ್ಣ ಕಾಮತ್‌ ಅಧ್ಯಕ್ಷರು, ಸಿದ್ದಾಪುರ ಹಾ.ಉ.ಸ.ಸಂಘ

ಟಾಪ್ ನ್ಯೂಸ್

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.