Udupi ಹಣ ಬಳಕೆಯ ವಿಧಗಳ ತಿಳುವಳಿಕೆ ಅತ್ಯಗತ್ಯ
ಕ್ಷೇತ್ರ ಮಟ್ಟದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಆರ್‌ಬಿಐನ ರಘುನಾಥ
Team Udayavani, Aug 18, 2023, 11:04 PM IST
ಉಡುಪಿ: ಸಮಾಜದ ಪ್ರತಿಯೊಬ್ಬರೂ ಹಣಕಾಸಿನ ವ್ಯವಹಾರದ ಬಗ್ಗೆ ಅಥವಾ ಹಣ ಬಳಕೆಯ ವಿಧಗಳ ಬಗ್ಗೆ ತಿಳುವಳಿಕೆ ಹೊಂದುವುದು ಅತಿ ಅಗತ್ಯ ಎಂದು ಆರ್‌ಬಿಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯ ಮಹಾ ಪ್ರಬಂಧಕ ಪಿ.ಎನ್. ರಘನಾಥ ಹೇಳಿದರು.
ಆರ್‌ಬಿಐ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗ, ಲೀಡ್ ಡಿಸ್ಟ್ರಿಕ್ಟ್ ಆಫೀಸ್, ಉಡುಪಿಯ ಕೆನರಾ ಬ್ಯಾಂಕ್ ಜಂಟಿಯಾಗಿ ಆಯೋಜಿಸಿದ ಕ್ಷೇತ್ರ ಮಟ್ಟದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್‌ಬಿಐ ಪ್ರಾದೇಶಿಕ ಕಚೇರಿಯ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಮಹಾ ಪ್ರಬಂಧಕಿ ಸುನಂದಾ ಬಾತ್ರಾ ಉದ್ಘಾಟಿಸಿ, ಜನ ಸಾಮಾನ್ಯರು, ಸ್ವ ಸಹಾಯ ಸಂಘದ ಸದಸ್ಯರು ಹಣಕಾಸಿನ ವ್ಯವಹಾರದಲ್ಲಿ ಸಾಕ್ಷರತೆ ಪಡೆದುಕೊಳ್ಳಬೇಕು. ಕೆವೈಸಿ ನೀಡುವಲ್ಲಿ ಅಥವಾ ಸೇವೆಯಲ್ಲಿ ತೊಂದರೆಯಾದಾಗ ತತ್‌ಕ್ಷಣವೇ ಬ್ಯಾಂಕ್‌ನ ಗಮನಕ್ಕೆ ತಂದರೆ ಸಮಸ್ಯೆ ಬಗೆಹರಿಸಲು ಅನುಕೂಲವಾಗಲಿದೆ. ಎಲ್ಲರೂ ಆರ್ಥಿಕ ವ್ಯವಹಾರದ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಮಣಿಪಾಲ ಕೆನರಾ ಬ್ಯಾಂಕಿನ ಮಹಾ ಪ್ರಬಂಧಕ ಎಂ.ಜಿ. ಪಂಡಿತ್ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ವಿವರ ಪಡೆದು, ಇತರರಿಗೆ ತಿಳಿಸಬೇಕು. ಸಣ್ಣ ಉದ್ಯಮ ಆರಂಭಿಸಲು ಸಹ ಹಣ ವಿನಿಯೋಗ ಮಾಡಬಹುದು ಎಂದು ಹೇಳಿದರು.
ನರ್ಬಾಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಸಂಗೀತಾ ಖರ್ತಾ, ಜಿ.ಪಂ. ಎನ್‌ಆರ್‌ಎಲ್‌ಎಂ ಯೋಜನಾ ನಿರ್ದೇಶಕ ನವೀನ ಕುಮಾರ್‌ಎಚ್.ಡಿ., ಎಲ್‌ಆರ್‌ಎಲ್‌ಎಂ ಜಿಲ್ಲಾ ಸಂಯೋಜಕಿ ನವ್ಯಾ, ಆರ್‌ಬಿಐ ಬೆಂಗಳೂರಿನ ಮ್ಯಾನೇಜರ್ ಅಬ್ದುಲ್ ರಜಾಕ್ ಎನ್., ಪ್ರಶಾಂತ ಸಿ.ಬಿ., ಮಾಲತಿ ಎಸ್. ನಾಯ್ಕ, ವೀಣಾ ಶಾನುಭಾಗ್ ವಿವಿಧ ವಿಷಯದ ಬಗ್ಗೆ ಮಾಹಿತಿ ಹಂಚಿಕೊಂಡರು.
ವಿವಿಧ ಬ್ಯಾಂಕಿನ ಅಧಿಕಾರಿಗಳ ಜತೆಗೆ ಸಂವಾದ ನಡೆಯಿತು. ಆರ್ಥಿಕ ಸಾಕ್ಷರತೆಯ ಸಂಯೋಜಕಿ ವೀರಾ, ತಾಲೂಕಿನ ಸ್ವ ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.
ಆರ್‌ಬಿಐ ವ್ಯವಸ್ಥಾಪಕರಾದ ತನು ನಂಜಪ್ಪ ಸ್ವಾಗತಿಸಿದರು. ಉಡುಪಿ ಲೀಡ್ ಬ್ಯಾಂಕಿನ ಮ್ಯಾನೇಜರ್ ಪಿ.ಎಂ.ಪಿಂಜಾರ್ ವಂದಿಸಿದರು. ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್, ನವ್ಯಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.