ಮಲ್ಪೆಯಲ್ಲಿ ಶ್ರೀ ಲಕ್ಷ್ಮೀನಾರಾಯಣ ಮಹಾಯಜ್ಞ
Team Udayavani, Dec 10, 2018, 9:56 AM IST
ಮಲ್ಪೆ: ಲೋಕಕಲ್ಯಾಣಾರ್ಥ ಡಾ| ಮಹರ್ಷಿ ಆನಂದ ಗುರೂಜಿ ನೇತೃತ್ವದಲ್ಲಿ ರವಿವಾರ ಮಲ್ಪೆ ಕಡಲ ತೀರದಲ್ಲಿ ಶ್ರೀ ಲಕ್ಷ್ಮೀನಾರಾಯಣ ಮಹಾಯಜ್ಞ ಸಂಪನ್ನಗೊಂಡಿತು. ಆರಂಭದಲ್ಲಿ ಸಮುದ್ರ ಪೂಜೆ, ಗೋಪೂಜೆ, ತುಳಸಿಪೂಜೆ, ಅಶ್ವಪೂಜೆ, ಗಜಪೂಜೆ ನೆರವೇರಿತು. ವಿವಿಧೆಡೆಗಳಿಂದ ಆಗಮಿಸಿದ 8 ಸಾವಿರಕ್ಕೂ ಅಧಿಕ ಮಂದಿ ಯಜ್ಞದಲ್ಲಿ ಪಾಲ್ಗೊಂಡಿದ್ದರು.
ಕನ್ನರ್ಪಾಡಿ ಜಯದುರ್ಗಾ ಪರಮೇಶ್ವರೀ ದೇವಸ್ಥಾನದಿಂದ ವಡಭಾಂಡ ಬಲರಾಮ ದೇವಸ್ಥಾನದವರೆಗೆ ಬೃಹತ್ ವಾಹನ ಮೆರವಣಿಗೆ, ಅಲ್ಲಿಂದ ವಿವಿಧ ಭಜನ ತಂಡಗಳೊಂದಿಗೆ ಬೃಹತ್ ಶೋಭಾಯಾತ್ರೆಯ ಮೂಲಕ ಗುರೂಜೀ ಅವರನ್ನು ಕಡಲತೀರಕ್ಕೆ ಕರೆತರಲಾಯಿತು
ಗಣ್ಯರಾದ ಕೆ. ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಆನಂದ ಸಿ. ಕುಂದರ್, ಉದಯ ಕುಮಾರ್ ಮುನಿಯಾಲು, ಕೃಷ್ಣಮೂರ್ತಿ ಆಚಾರ್ಯ, ಯಶ್‌ಪಾಲ್ ಎ. ಸುವರ್ಣ, ಸುರೇಂದ್ರ ಶೆಟ್ಟಿ, ಆನಂದ ಪಿ. ಸುವರ್ಣ, ಪುರುಷೋತ್ತಮ ಶೆಟ್ಟ, ಪ್ರಸಾದ್‌ರಾಜ್ ಕಾಂಚನ್, ಸಾಧು ಸಾಲ್ಯಾನ್, ಹರಿಯಪ್ಪ ಕೋಟ್ಯಾನ್, ಸತೀಶ್ ಕುಂದರ್, ವಿಲಾಸ್ ನಾಯಕ್, ಕಿಶೋರ್ ಆಳ್ವ, ದಿವಾಕರ ಶೆಟ್ಟಿ ತೋಟದಮನೆ, ಜಯಕರ ಶೆಟ್ಟಿ ಇಂದ್ರಾಳಿ, ಭೋಜರಾಜ್ ಕಿದಿಯೂರು, ಪಾಂಡುರಂಗ ಮಲ್ಪೆ ಉಪಸ್ಥಿತರಿದ್ದರು.
ಸಮುದ್ರರಾಜ ಋಣ ವಿಮೋಚಕ
ಮಹರ್ಷಿ ಆನಂದ ಗುರೂಜಿ ಮಾತನಾಡಿ, ಸಮುದ್ರರಾಜ ಋಣ ವಿಮೋಚಕ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮಲ್ಪೆ ಕಡಲತೀರ ಪರಮಪವಿತ್ರ ಪುಣ್ಯಸ್ಥಾನವಾಗಿದ್ದು, ಮಥುರದಿಂದ ಭಗವಂತ ಶ್ರೀಕೃಷ್ಣ ಸಾಗಿಬಂದ ಸ್ಥಳವಾಗಿದೆ. ಈ ಹಿಂದೆ ರೈತರು ಮತ್ತು ಯೋಧರ ಒಳಿತಿಗಾಗಿ ಸಂಕಲ್ಪ ಕೈಗೊಳ್ಳಲಾಗಿತ್ತು. ಪ್ರಸ್ತುತ ಸಾಕಷ್ಟು ಮೀನುಗಾರರ ಕುಟುಂಬಗಳು ಸಂಕಷ್ಟದಲ್ಲಿರುವುದರಿಂದ ಅವರ ಒಳಿತಿಗಾಗಿ, ಸಮಸ್ತ ಭಕ್ತರ ಕಷ್ಟ ದೂರವಾಗುವಂತೆ ಪ್ರಾರ್ಥಿಸಿ ಈ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
AjekarCase: ತನಿಖೆ ದಿಕ್ಕು ತಪ್ಪುತ್ತಿದೆ: ದಿಲೀಪ್ ತಂದೆ ವಿರುದ್ದ ಬಾಲಕೃಷ್ಣ ಮನೆಯವರ ಆರೋಪ
Katpadi: ಭತ್ತದ ತೆನೆಯಿಂದಲೇ ಆಟೋ ರಿಕ್ಷಾ ಅಲಂಕರಿಸಿ ಸಂಭ್ರಮಿಸಿದ ಚಾಲಕ
Udupi: ಗೀತಾರ್ಥ ಚಿಂತನೆ-83: ಅಪೇಕ್ಷಿತ-ಅನಪೇಕ್ಷಿತ ವಂಶವಾಹಿಗಳು
Congress Govt.,: ರಾಜ್ಯ ಸರಕಾರದ ವಿರುದ್ಧ ಮೂರು ಹಂತದ ಪ್ರತಿಭಟನೆ: ಕಿಶೋರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.