ದೇಶಕ್ಕೆ ನಾನಾ ಸತ್ವಪರೀಕ್ಷೆ: ಅನಂತನಾಗ್‌ ಕಳವಳ


Team Udayavani, Sep 5, 2021, 1:03 AM IST

Untitled-1

ಉಡುಪಿ: ಕೊರೊನಾ, ಅಫ್ಘಾನಿಸ್ಥಾನದ ಬಿಕ್ಕಟ್ಟು, ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸಿ ಎಂಬ ಒತ್ತಡ, ಅಲ್ಲಿನ ಹಿಂದೂ-ಸಿಕ್ಖರ ರಕ್ಷಣೆ ಹೀಗೆ ಭಾರತ ನಾನಾ ಕಡೆಗಳಿಂದ ಸತ್ವಪರೀಕ್ಷೆಯನ್ನು ಎದುರಿಸುತ್ತಿದೆ. ಆದರೂ ಸಮರ್ಥ ಪ್ರಧಾನಿಯನ್ನು ಹೊಂದಿದ್ದೇವೆ ಎಂಬ ಸಂತೃಪ್ತಿ ಇದೆ- ಇದು ಹಿರಿಯ ಚಲನಚಿತ್ರ ನಟ, ಜನತಾ ಪರಿವಾರದ “ತಟಸ್ಥ’ ನಾಯಕ ಅನಂತ ನಾಗ್‌ ಅವರ ಅಭಿಪ್ರಾಯ.

ನಟ ರಕ್ಷಿತ್‌ ಶೆಟ್ಟಿ ಹೊರತರುತ್ತಿರುವ “ಆಬ್ರಕಡಾಬ್ರ’ ಚಲನಚಿತ್ರದ ಚಿತ್ರೀಕರಣಕ್ಕೆ ಉಡುಪಿಗೆ ಆಗಮಿಸಿ ರುವ ಅವರು “ಉದಯವಾಣಿ’ ಪ್ರತಿನಿಧಿ ಜತೆ ಮಾತುಕತೆ ನಡೆಸಿದರು. ಅವರ ಅಭಿಪ್ರಾಯಗಳು ಹೀಗಿವೆ:

2000ರಲ್ಲಿ ನಾನು ಸಕ್ರಿಯ ರಾಜಕೀಯದಿಂದ ನಿವೃತ್ತನಾಗಿದ್ದೇನೆ. ಕೆಲವೊಂದು ಸಂದರ್ಭ ಮುಖ್ಯ ಘಟನೆಗಳು ನಡೆದಾಗ ನಾನು ವಿಧಾನ ಸಭೆ, ವಿಧಾನ ಪರಿಷತ್‌ ಸದಸ್ಯ, ಸಚಿವನಾಗಿದ್ದ ಕಾರಣ ನನ್ನ ಪ್ರತಿಕ್ರಿಯೆ ಕೇಳಿದರೆ ನನಗನ್ನಿಸಿದ್ದನ್ನು ಹೇಳುತ್ತೇನೆ. ನಾನು ಜನತಾ ಪರಿವಾರದಿಂದ ಹೊರಬಂದಿಲ್ಲ. ಮನೆಯೊಳಗೆ ಸುಮ್ಮನೆ ಇದ್ದೇನೆ.

ಮಧ್ಯಮ ಮಾರ್ಗ :

ಭಾರತದ ಆಡಳಿತದಲ್ಲಿ ತೀವ್ರವಾದ ಇರಲಿಲ್ಲ, ಈಗಲೂ ಇಲ್ಲ. ಇಲ್ಲಿರುವುದು ಸೆಂಟರಿಸ್ಟ್‌ ಕಲ್ಚರ್‌ (ಮಧ್ಯಮ ಮಾರ್ಗ). ಆಚೆ ಎಡ ಈಚೆ ಬಲದಂತಹ ಸ್ಥಿತಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ನೆಹರೂ, ಇಂದಿರಾ ಕಾಲದಿಂದಲೂ ಸ್ವಲ್ಪ ಎಡದ ಕಡೆ ವಾಲಿಕೊಂಡಿದ್ದರು. ಅಮೆರಿಕ ಕಡೆಗೆ ವಾಲಬೇಕೋ? ರಷ್ಯಾ ಕಡೆ ವಾಲಬೇಕೋ ಎನ್ನುವಾಗ ಪಾಕಿಸ್ಥಾನದ ಯುದ್ಧದ ಸಂದರ್ಭ ಅಮೆರಿಕ ಪಾಕ್‌ ಪರ ನಿಂತ ಕಾರಣ ಭಾರತದ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿತು. ಈಗ ಎಡ ಪಕ್ಷದ ಪ್ರಾಬಲ್ಯ ಕೇರಳ ಹೊರತುಪಡಿಸಿದರೆ ಎಲ್ಲೂ ಇಲ್ಲ. ಜನತಾ ಪರಿವಾರವೂ ಮುಗಿದಿದೆ. ಮಧ್ಯಮ ಮಾರ್ಗ ಮುಂದುವರಿಯುತ್ತಲೇ ಇದೆ.

51 ಬೈಗುಳುಗಳ ಪಟ್ಟಿ :

ಕಾಶ್ಮೀರದ 370ನೆಯ ವಿಧಿಯನ್ನು ರದ್ದುಗೊಳಿಸಿರುವುದು, ಚೀನಕ್ಕೆ ಕೊಟ್ಟ ದಿಟ್ಟ ಉತ್ತರ, ತ್ರಿವಳಿ ತಲಾಖ್‌ ಇತ್ಯಾದಿ ವಿಷಯಗಳಲ್ಲಿ ಪ್ರಧಾನಿಯವರ ನಡೆ ಉತ್ತಮವಾಗಿದೆ. ಇವರು ಹಿಂದಿನ

ವರಂತೆ ಕಾಲ ತಳ್ಳುತ್ತ ಹೋಗಲಿಲ್ಲ. ನಿರ್ಣಾಯಕ ಹೆಜ್ಜೆಗಳನ್ನು ಇರಿಸಿ

ದ್ದಾರೆ. ಆದರೆ ಪ್ರತಿನಿತ್ಯ ಟೀಕೆಗೋಸ್ಕ ರವೇ ಟೀಕೆ ಮಾಡುವುದು ಸರಿಯಲ್ಲ.

ತಾತ್ವಿಕವಾಗಿ ಟೀಕಿಸಬಹುದು. “ನಾಲಾಯಕ್‌’, “ಚೋರ್‌ ಹೈ’ ಎಂಬಂತಹ

ಸುಶಿಕ್ಷಿತರು ಮಾತನಾಡಬಾರದ 51 ಬೈಗುಳುಗಳ ಪಟ್ಟಿಯನ್ನು ಮಾಡಲಾಗಿದೆ. ಅವರ ತಾಯಿಯನ್ನೂ ಟೀಕಾಕಾರರು ಬಿಡಲಿಲ್ಲ. ಆದರೂ ಮೋದಿ ದೇಶವನ್ನು ಮುನ್ನಡೆಸುವ ಭರವಸೆ ಇದೆ.

300 ಚಿತ್ರಗಳ ಸರದಾರ :

ಇದುವರೆಗೆ ಅನಂತನಾಗ್‌ ಸುಮಾರು 300 ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಪ್ರಸ್ತುತ ನಟ ರಕ್ಷಿತ್‌ ಶೆಟ್ಟಿಯವರ ನಿರ್ಮಾಪಕತ್ವದ, ಶಿಶಿರ್‌ ರಾಜಮೋಹನ್‌ ಅವರ ನಿರ್ದೇಶನದ “ಆಬ್ರಕಡಾಬ್ರ’ ಚಿತ್ರೀ ಕರಣಕ್ಕಾಗಿ ಶುಕ್ರವಾರ ಉಡುಪಿಗೆ ಆಗಮಿಸಿದ್ದಾರೆ. 15 ದಿನಗಳ ಕಾಲ ಮಣಿಪಾಲ ದಲ್ಲಿದ್ದು ಉಡುಪಿ ಆಸುಪಾಸಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಭಾಗವಹಿಸುವರು.

ಬಾಲ್ಯ ಕಂಡ ಉಡುಪಿಯಲ್ಲಿ 74ನೇ ಹುಟ್ಟುಹಬ್ಬ  :

1948ರ ಸೆಪ್ಟಂಬರ್‌ 4ರಂದು ಜನಿಸಿದ ಅನಂತನಾಗ್‌ 74ನೇ ಜನ್ಮದಿನವನ್ನು ಬಾಲ್ಯದಲ್ಲಿ ಎರಡು ವರ್ಷವಿದ್ದ ಉಡುಪಿಯಲ್ಲಿ ಆಚರಿಸಿದರು.

ಉಡುಪಿಯಲ್ಲಿ ಜನಿಸಿದ್ದ ಶಂಕರನಾಗ್‌ ಅನಂತನಾಗ್‌ ತಂದೆ ಸದಾನಂದ ಭವಾನಿಶಂಕರ್‌ ಮತ್ತು ತಾಯಿ ಆನಂದಿಯವರು ಕಾಂಞಂಗಾಡ್‌ನ‌ ಆನಂದಾಶ್ರಮದ ವಾಸಿಗಳಾಗಿದ್ದರು. ಒಮ್ಮೆ ಚಿತ್ರಾಪುರ ಮಠದ ಸ್ವಾಮೀಜಿಯವರು ಆನಂದಾಶ್ರಮಕ್ಕೆ ಬಂದಾಗ ಸದಾನಂದರಂತಹ ಒಬ್ಬರು ಮಠದ ವ್ಯವಹಾರ ನೋಡಿಕೊಳ್ಳಲು ಬೇಕು ಎಂದು ಆಶ್ರಮದ ಸ್ಥಾಪಕ ರಾಮದಾಸರಲ್ಲಿ ಕೇಳಿದರು. ಸದಾನಂದರನ್ನೇ ಕರೆದೊಯ್ಯಲು ರಾಮದಾಸರು ಸಲಹೆ ನೀಡಿದಂತೆ ಸ್ವಾಮೀಜಿಯವರು ಸದಾನಂದರನ್ನು ಭಟ್ಕಳದ ಶಿರಾಲಿ ಮಠಕ್ಕೆ ಕರೆದುಕೊಂಡು ಹೋದರು. ಆನಂದಿ ಮತ್ತು ಹಿರಿಯ ಮಗಳು ಆಶ್ರಮದಲ್ಲಿದ್ದರು. ಬಳಿಕ ಅನಂತನಾಗ್‌ ಜನಿಸಿದರು. ಉಡುಪಿ ಶಂಕರ ರಾವ್‌ ಮತ್ತು ಮಿತ್ರಾಬಾಯಿ ಅವರು ಆಶ್ರಮಕ್ಕೆ ಬಂದು ಹೋಗುತ್ತಿದ್ದರು. ಅವರು ಉಡುಪಿಯ ಮನೆಗೆ ಬರಲು ಹೇಳಿದಾಗ ಆನಂದಿಯವರು ಮಕ್ಕಳನ್ನು ಕರೆದುಕೊಂಡು ಬಂದರು. ಹೀಗೆ ಅಜ್ಜರಕಾಡಿನಲ್ಲಿ ಎರಡು ವರ್ಷವಿದ್ದು ಸೈಂಟ್‌ ಸಿಸಿಲಿ ಶಾಲೆಗೆ 1 ಮತ್ತು 2ನೇ ತರಗತಿಗೆ ಅನಂತನಾಗ್‌ ಹೋದರು. ಪ್ರಸಿದ್ಧ ನಟರಾಗಿದ್ದ ತಮ್ಮ ಶಂಕರನಾಗ್‌ ಹುಟ್ಟಿದ್ದು ಉಡುಪಿಯಲ್ಲಿ. ಬಳಿಕ ಸದಾನಂದರಿಗೆ ಇದ್ದ ಶಿರಾಲಿ ಮಠದ ವಸತಿಗೃಹಕ್ಕೆ ಕುಟುಂಬ ಸ್ಥಳಾಂತರಗೊಂಡಿತು.

ಟಾಪ್ ನ್ಯೂಸ್

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

puttige-5

Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.