“ಆರೋಗ್ಯ, ನೆಮ್ಮದಿಗಾಗಿ ಪದ್ಮನಾಭನಿಗೆರಗಿ’
Team Udayavani, Apr 8, 2017, 6:35 AM IST
ಹೆಬ್ರಿ: ಅನಂತ ಎಂದರೆ ಕೊನೆಯಿಲ್ಲದ್ದು ಅವನ ಕೆಲಸಗಳು ನಿರಂತರ ನಡೆಯುತ್ತಿರುವುದರೊಂದಿಗೆ ನಿತ್ಯ ನಿರಂತರ ಭಕ್ತರನ್ನು ಅನುಗ್ರಹಿಸುವ ದೇವರು ಅನಂತ ಪದ್ಮನಾಭ. ದೇಗುಲ ಹೊಸತಾದರೂ ಪುರಾತನ ಇತಿಹಾಸವಿರುವ ಅನಂತ ಪದ್ಮನಾಭನ ಮೂರ್ತಿ ವಿಶೇಷ ಸಾನ್ನಿಧ್ಯದೊಂದಿಗೆ ಕಾರಣಿಕ ಶಕ್ತಿಯನ್ನು ಹೊಂದಿದೆ. ಇಂತಹ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಪಾಲ್ಗೊಂಡ ಎಲ್ಲರೂ ಧನ್ಯರು ಎಂದು ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಅವರು ಎ. 6ರಂದು ಕಾರ್ಕಳ ತಾಲೂಕಿನ ಹೆಬ್ರಿಯ ಇತಿಹಾಸ ಪ್ರಸಿದ್ಧ ಶ್ರೀ ಅನಂತಪದ್ಮನಾಭ ದೇವರ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವದ ಅಂಗವಾಗಿ ಎ. 6ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಜೋತಿಷಿ ಎಚ್. ನಿತ್ಯಾನಂದ ನಾಯಕ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಷ್ಮೀ ಅನಂತ ಪದ್ಮನಾಭ ದೇವರು ಲಕ್ಷ್ಮೀ ಯನ್ನು ಜನರ ಬಳಿ ಬಿಟ್ಟು ಆರೋಗ್ಯ ನೆಮ್ಮದಿ ಬೇಕಾದರೆ ಪದ್ಮನಾಭನಿಗೆ ಶರಣಾಗಬೇಕು ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ಧಿಯಲ್ಲಿ ನಿರಂತರ ಕೈ ಜೋಡಿಸಿದ ಉದ್ಯಮಿ ವಿನಯ್ ಬಿಜಿಯಾ ಹಾಗೂ ಅವರ ತಂದೆ-ತಾಯಿಗಳಾದ ಅನಂತಮೂರ್ತಿ, ಶಕುಂತಳಾ ಅವರನ್ನು ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿ ವಿನಯ್ ಬಿಜಿಯಾ ಶ್ರೀ ಕ್ಷೇತ್ರ ವಿಶೇಷ ಸಾನ್ನಿಧ್ಯವನ್ನು ಹೊಂದಿದ್ದು ತಾನು ಪದ್ಮನಾಭನಿಗೆ ಶರಣಾದ ಅನಂತರ ತನ್ನ ಕಷ್ಟಗಳೆಲ್ಲ ದೂರವಾಗಿವೆ. ಇದಕ್ಕೆ ಮುಖ್ಯ ಕಾರಣ ಹೆಬ್ರಿ ದೇವಸ್ಥಾನದ ಅಭಿವೃದ್ಧಿಯಲ್ಲಿ ನಿರಂತರ ತೊಡಗಿಸಿಕೊಂಡ ಜೋತಿಷಿ ನಿತ್ಯಾನಂದ ನಾಯಕ್ ಅವರು. ಅವರ ಮಾರ್ಗದರ್ಶನದಿಂದ ಸಹಸ್ರಾರು ಭಕ್ತರು ಅನಂತ ಪದ್ಮನಾಭನ ಸೇವೆಗೆ ಮುಂದಾಗಿದ್ದಾರೆ ಎಂದರು.
ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಚ್. ಬಾಲಕೃಷ್ಣ ನಾಯಕ್, ಕ್ಷೇತ್ರೇತರ ತಾರಾನಾಥ ಬಲ್ಲಾಳ್, ಆರ್ಥಿಕ ಸಮಿತಿಯ ಅಧ್ಯಕ್ಷ ಎಚ್. ಪ್ರಸಾದ್ ಬಲ್ಲಾಳ್, ಸಂಚಾಲಕ ಎಚ್. ಸತೀಶ್ ಪೈ, ಆಡಳಿತಾಧಿಕಾರಿ ಗಣೇಶ್ ಪಿ., ಪ್ರಚಾರ ಹಾಗೂ ಸಂಪರ್ಕ ಸಮಿತಿಯ ಅಧ್ಯಕ್ಷ ಸೀತಾನದಿ ವಿಟಲ ಶೆಟ್ಟಿ , ಸಮ್ಮಾನ ಸಮಿತಿ ಅಧ್ಯಕ್ಷ ಸುಧೀರ್ ನಾಯಕ್, ಪ್ರಕಟನಾ ಸಮಿತಿ ಅಧ್ಯಕ್ಷ
ಟಿ.ಜಿ. ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಕಚೇರಿ ನಿರ್ವಾಹಣೆ ಸಮಿತಿಯ ಸಂಚಾಲಕ ಸಿ. ಆನಂದ ಹೆಗ್ಡೆ ಸ್ವಾಗತಿಸಿ, ಪ್ರಕಟನೆ ಸಮಿತಿಯ ಸಂಚಾಲಕ ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪಂ. ಸದಸ್ಯ ಎಚ್.ಕೆ. ಸುಧಾಕರ ವಂದಿಸಿದರು. ಬಳಿಕ ಗಿಲಿ ಗಿಲಿ ಮ್ಯಾಜಿಕ್ ತಂಡದಿಂದ ಜಾದೂ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.