ಅಂದು ಸಾಮಾನ್ಯರಿಗೆ, ಇಂದು ಸಂತರಿಗೆ ತೆರೆಯಲಿದೆ‌ ಮನೆ-ಮನ


Team Udayavani, Nov 19, 2017, 1:07 PM IST

171117js29.jpg

ಇದು ಸುಮಾರು ಅರ್ಧ ಶತಮಾನದ ಹಿಂದಿನ ಕತೆ. ಉಡುಪಿಯಲ್ಲಿ 1969ರ ಡಿಸೆಂಬರ್‌ 13-14ರಂದು ಪ್ರಥಮ ವಿಶ್ವ ಹಿಂದೂ ಪರಿಷದ್‌ ಸಮ್ಮೇಳನ ನಡೆದಾಗ ಪರಿಷದ್‌ ಕಾರ್ಯ ವಿಸ್ತಾರ ಬೆಳೆದಿರಲಿಲ್ಲ. ಅದು ಜನ್ಮತಾಳಿದ್ದೆ 1964ರಲ್ಲಿ. ಆರೆಸ್ಸೆಸ್‌ ಸ್ವಯಂಸೇವಕರೇ ಉಡುಪಿ ಸಮ್ಮೇಳನದ ಜವಾಬ್ದಾರಿಯನ್ನು ನಿಭಾಯಿಸಿದರು.

ಉಡುಪಿ ನಗರದ ಆಗಿನ ಜನಸಂಖ್ಯೆ ಸುಮಾರು 25ರಿಂದ 30 ಸಾವಿರ. ಸುಮಾರು 5-6 ಸಾವಿರ ಪ್ರತಿನಿಧಿಗಳ ಆಗಮನ ನಿರೀಕ್ಷಿಸಲಾಗಿತ್ತು. ಶಾಲಾ ಕಾಲೇಜುಗಳಲ್ಲಿ ಪುರುಷರಿಗೆ ಹಾಗೂ ವೆಂಕಟರಮಣ ದೇವಸ್ಥಾನದಲ್ಲಿ ಮಹಿಳೆ ಯರಿಗೆ ವಸತಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗಬಹುದೆಂದು ಅನಿಸಿದಾಗ ಸ್ಥಳಾವಕಾಶದ ಕೊರತೆಯಿಂದ ಹೆಚ್ಚಿಗೆ ಪ್ರತಿನಿಧಿಗಳ ನೋಂದಣಿ ಮಾಡದಂತೆ ಸೂಚನೆ ನೀಡಲಾಯಿತು. ಡಿ. 12ರ ರಾತ್ರಿ 8 ಸಾವಿರ ಪ್ರತಿನಿಧಿಗಳು ತಲುಪಿದ್ದರು. ಇನ್ನಷ್ಟು ಮಂದಿ ಬರುತ್ತಿದ್ದಾರೆಂಬ ಸೂಚನೆ ಸಿಕ್ಕಿದಾಗ ಕಾರ್ಯಕರ್ತರು ನಗರದಲ್ಲೆಲ್ಲ ಸಂಚರಿಸಿ ಪ್ರತಿನಿಧಿಗಳನ್ನು ತಮ್ಮ ಮನೆಗಳಲ್ಲಿ ಉಳಿಸಿ ಕೊಳ್ಳುವಂತೆ ಧ್ವನಿವರ್ಧಕದ ಮೂಲಕ ನಾಗರಿಕರನ್ನು ಕೋರಿಕೊಂಡರು. ಆತಿಥ್ಯಕ್ಕೆ ಹೆಸರಾದ ಉಡುಪಿಯ ಜನರೂ ಅಷ್ಟೇ ಉತ್ಸಾಹದಿಂದ ಮನೆ-ಮನದ ಬಾಗಿಲು ತೆರೆದು ಪ್ರತಿನಿಧಿಗಳನ್ನು ಸ್ವಾಗತಿಸಿದರು.  

ಬೆಳಗ್ಗೆ ಆಗಮಿಸಿದ ಪ್ರತಿನಿಧಿಗಳ ಸಂಖ್ಯೆ 15 ಸಾವಿರ ಮೀರಿತ್ತು. ರಾತೋರಾತ್ರಿ ಅಡುಗೆ ಸಾಮಗ್ರಿಗಳನ್ನು ಪಾಕಶಾಲೆಗಳಿಗೆ ಸಾಗಿಸಿ ವ್ಯವಸ್ಥೆ ಕೈಗೊಂಡರು. ಈಗ ಉಡುಪಿ ಜನಸಂಖ್ಯೆ ಲಕ್ಷ ಮೀರಿದೆ. ಆಗ ಪುರಸಭೆಯಾಗಿದ್ದರೆ ಈಗ ಮೇಲ್ದರ್ಜೆಗೇರಿ ನಗರಸಭೆ. ಆಗ ಸಾಮಾನ್ಯ ಪ್ರತಿನಿಧಿಗಳನ್ನೂ ಮನೆಗೆ ಕರೆದು ಉಪಚರಿಸಿದ ನಾಗರಿಕರೀಗ ಸಂತರನ್ನು ತಮ್ಮ ಸ್ವಾಗತಿಸಲು ಸಜ್ಜಾಗಿದ್ದಾರೆ. ಅವರ ಮನೆಗಳೀಗ ಸಂತರ ಬರುವಿಕೆಗೆ ಸಿದ್ಧಗೊಳ್ಳುತ್ತಿದೆ. 

ನ. 24ರಿಂದ 26ರ ವರೆಗೆ ನಡೆಯುವ 15ನೇ ಧರ್ಮಸಂಸದ್‌ ಅಧಿವೇಶನದಲ್ಲಿ ಸುಮಾರು 2 ಸಾವಿರ ಸಾಧು ಸಂತರು ಪಾಲ್ಗೊಳ್ಳುವ ಅಂದಾಜಿದೆ. ಇವರಲ್ಲಿ ಉತ್ತರ ಭಾರತ, ಈಶಾನ್ಯ ಭಾರತ, ಜಮ್ಮು ಕಾಶ್ಮೀರ ವಿವಿಧೆಡೆಯಿಂದ ಬರುತ್ತಿದ್ದಾರೆ. ಇಷ್ಟು ಸಂತರನ್ನು ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಮಠದ ಸುತ್ತಮುತ್ತಲಿನ ಅತಿಥಿ ಗೃಹಗಳು, ಆಸುಪಾಸಿನ ದೇವಸ್ಥಾನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಘಟಕರ ಮನವಿ ಮೇರೆಗೆ ಹಲವು ಫ್ಲ್ಯಾಟ್‌, ಮನೆ ಮಾಲಕರೂ ಸ್ವಾಗತಕ್ಕೆ ಸಿದ್ಧರಾಗಿದ್ದಾರೆ.

ಸುಮಾರು 1ಸಾವಿರ ಸಂತರನ್ನು ಅತಿಥಿ ಗೃಹ, ಕಲ್ಯಾಣಮಂಟಪ, ದೇವಸ್ಥಾನಗಳಲ್ಲಿ ಉಳಿಸಲಾಗುತ್ತಿದೆ. ಸುಮಾರು 300 ಮಂದಿಯನ್ನು ಉಳಿಸಿಕೊಳ್ಳಲು ನೂರಕ್ಕೂ ಹೆಚ್ಚು ಮನೆಯವರು ಹೆಸರು ನೋಂದಾಯಿಸಿದ್ದಾರೆ. ಇತಿಹಾಸ ಪುನರಾವರ್ತನೆ ಯಾಗುತ್ತಿದೆ, ಮೇಲ್ದರ್ಜೆಗೇರಿಕೊಂಡು.  
ಮಟಪಾಡಿ ಕುಮಾರಸ್ವಾಮಿ

ಮಹಿಳೆಯರ ವೇದಘೋಷ: ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಮಹಿಳೆಯರು ವೇದಘೋಷ ನಡೆಸಲಿದ್ದಾರೆ. ಶನಿವಾರ ರಿಕ್ಷಾ ಚಾಲಕರು-ಮಾಲಕರು ಮತ್ತು ಟಾಕ್ಸಿಮನ್‌ ಅಸೋ ಸಿಯೇಶನ್‌ ಸದಸ್ಯರ ಸಭೆಯಲ್ಲಿ ವಿಶ್ವ ಹಿಂದೂ ಪರಿಷದ್‌ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್‌ ಈ ವಿಷಯ ತಿಳಿಸಿದರು.

ನಮ್ಮ ಪರ್ಯಾಯದಲ್ಲಿ ಮಹತ್ವದ ಅಧಿವೇಶನ ನಡೆಯುತ್ತಿರುವುದು ಸುಯೋಗ ಎಂದು ಹೇಳಿದ ಶ್ರೀ ಪೇಜಾವರ ಮಠಾಧೀಶರು ಅಸೋಸಿ ಯೇಶನ್‌ ಮುಖ್ಯಸ್ಥರಿಗೆ ಧ್ವಜ ಹಸ್ತಾಂತರಿಸಿದರು. ಹಿಂಪ ಜಿಲ್ಲಾಧ್ಯಕ್ಷ ವಿಲಾಸ ನಾಯಕ್‌, ಬಜರಂಗದಳದ ಶರಣ್‌ ಪಂಪ್‌ವೆಲ್‌, ಸುನಿಲ್‌ ಕೆ.ಆರ್‌., ಆಟೋರಿಕ್ಷಾ ಸಂಘಟನೆಯ ಸಂತೋಷ್‌ ರಾವ್‌, ಟ್ಯಾಕ್ಸಿಮನ್‌ ಅಸೋಸಿಯೇಶನ್‌ನ ರಘುಪತಿ ಭಟ್‌ ಮೊದಲಾದವರು ಉಪಸ್ಥಿತರಿದ್ದರು.  

ವಿಶಿಷ್ಟ ಗೃಹಸ್ಥ ಸಾಧಕರು ಆದಿಉಡುಪಿಯ ಗೋಪಾಲ ಪೂಜಾರಿ ಅವರು ಕಟ್ಟಿದ ಮನೆಯ ಗೃಹ ಪ್ರವೇಶವಾಗಿ ಒಂದು ತಿಂಗಳು ಕಳೆದಿತ್ತು. ಎರಡು ಮೂರು ಬಾಡಿಗೆದಾರರು ಬಂದರೂ ಕೊಡಲಿಲ್ಲ. ಧರ್ಮಸಂಸದ್‌ ಸಭೆಗೆ ಬರುವ ಸ್ವಾಮೀಜಿಯವರ ವಸತಿಗಾಗಿ ಮನೆಯನ್ನು ಅವರು ಕಾದಿರಿಸಿದ್ದಾರೆ. 

ಆದಿಉಡುಪಿಯ ಶ್ವೇತಾ ಸತೀಶ್‌ ಅವರು ಮೂರು ಫ್ಲ್ಯಾಟ್‌ ಗಳನ್ನು ನೀಡಿ 15 ಸ್ವಾಮೀಜಿಯವರ ವ್ಯವಸ್ಥೆಯನ್ನು ತಾವೇ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಪಾಜಕ ಕ್ಷೇತ್ರದ ಬಳಿ ಸುಮಾರು 100 ಸ್ವಾಮೀಜಿಯವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ಊಟ, ಭದ್ರತೆ, ಕಾರ್ಯಕರ್ತರು ಎಲ್ಲವನ್ನೂ ಒಬ್ಬರು ನೋಡಿಕೊಳ್ಳುತ್ತಿದ್ದಾರೆ.

 ಕಾಪುವಿನಲ್ಲಿ ಒಂದು ಮನೆಯವರು ಉಳಿದುಕೊಳ್ಳುವ 15 ಸ್ವಾಮೀಜಿಯವರ ಎಲ್ಲ ಖರ್ಚನ್ನೂ ನೋಡಿಕೊಳ್ಳುವರು. ಕುಂದಾಪುರದವರೊಬ್ಬರು ಸುಮಾರು 10 ಸ್ವಾಮೀಜಿಯ ವರನ್ನು ಉಳಿಸಿಕೊಳ್ಳುವುದಲ್ಲದೆ ಅವರನ್ನು ಉಡುಪಿಗೆ ನಿತ್ಯ ಕರೆದುತಂದು ವಾಪಸು ಕರೆದೊಯ್ಯುವ ಹೊಣೆ ಹೊತ್ತಿದ್ದಾರೆ. ಸಂತರನ್ನು ಮನೆಗಳಲ್ಲಿ ಉಳಿಸಿಕೊಳ್ಳಲು ತನ್ನಲ್ಲಿ ಸಾಮರ್ಥ್ಯವಿಲ್ಲ ಎಂದ ಶ್ರೀಸಾಮಾನ್ಯರೊಬ್ಬರು ಧರ್ಮಸಂಸದ್‌ ಕಾರ್ಯಾಲಯಕ್ಕೆ ಬಂದು 500 ರೂ. ದೇಣಿಗೆ ಕೊಟ್ಟು
ಹೋಗಿದ್ದಾರೆ.

ಪರಿಸರಸ್ನೆಹಿ ಅಲಂಕರಣ
ಧರ್ಮಸಂಸದ್‌ ಮತ್ತು ಹಿಂದೂ ಸಮಾಜೋತ್ಸವಕ್ಕಾಗಿ ನಗರವನ್ನು ಸಿಂಗರಿಸಲಾಗುತ್ತಿದೆ. ನಗರದ ಎರಡು ಬಸ್‌ ನಿಲ್ದಾಣಗಳ ಮಾರ್ಗ, ಹಳೆ ತಾಲೂಕು ಕಚೇರಿ ವೃತ್ತ, ಹಳೆ ಡಯಾನ ವೃತ್ತ, ಧರ್ಮಸಂಸದ್‌ ಅಧಿವೇಶನ ನಡೆಯುವ ತಾಣವಾದ ಕಲ್ಸಂಕ ವೃತ್ತ ಸುತ್ತಮುತ್ತ ಕೇಸರಿ ಪತಾಕೆ
ಗಳಿಂದ ತುಂಬಿವೆ. ಇವೆಲ್ಲವೂ ಬಟ್ಟೆಯಿಂದ ತಯಾರಿಸಿದ್ದು ಪರಿಸರ ಸ್ನೇಹಿ. ಪ್ಲಾಸ್ಟಿಕ್‌ನಿಂದ ತಯಾರಿಸಿದ ಧ್ವಜಗಳು ಬೇರೆ ಬೇರೆ ಸಂದರ್ಭಗಳಲ್ಲಿ ರಾರಾಜಿ ಸುವುದು ಸಾಮಾನ್ಯ. ಇವು ತಾತ್ಕಾಲಿಕ ವಾಗಿ ಅಲಂಕಾರವಾದರೂ ಬಳಿಕ ಪರಿಸರಕ್ಕೆ ಹಾನಿ ನಿಶ್ಚಿತ. ಬಟ್ಟೆಯಿಂದ ತಯಾರಿಸಿದ ಬಂಟಿಂಗ್ಸ್‌ ಹೊಸ ಸಂದೇಶ ವನ್ನು ವಿವಿಧ ಸಂಘಟಕರಿಗೆ ಕೊಡುತ್ತಿದೆ. 

150 ಕಿ.ಮೀ. ಬಂಟಿಂಗ್ಸ್‌: ಉಡುಪಿ ಜೋಡುಕಟ್ಟೆಯಿಂದ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನ ದವರೆಗೆ, ಕಿನ್ನಿಮೂಲ್ಕಿಯಿಂದ ಕರಾವಳಿ ಜಂಕ್ಷನ್‌, ನಿಟ್ಟೂರು ಜಂಕ್ಷನ್‌, ಅಂಬಾಗಿಲು ಜಂಕ್ಷನ್‌ ಹೀಗೆ ವಿವಿಧೆಡೆ ಒಟ್ಟು 150 ಕಿ.ಮೀ. ಉದ್ದದ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. 4ಗಿ2 ಅಡಿಯ ಸುಮಾರು 5,000 ಫ್ಲೆಕ್ಸ್‌ಗಳು ಮಂಗಳೂರು ನಂತೂರಿ ನಿಂದ ಬೈಂದೂರುವರೆಗೆ ಹಾಕಲಾಗುತ್ತಿದೆ. ಸುಮಾರು ದೊಡ್ಡ ಗಾತ್ರದ 300 ಫ್ಲೆಕ್ಸ್‌ಗಳು ಪ್ರದರ್ಶನ ಗೊಳ್ಳುತ್ತಿವೆ. ಕರಾವಳಿಯ ಮತ್ತು ರಾಜ್ಯದ ಇತರ ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಬಂಟಿಂಗ್ಸ್‌, ಫ್ಲೆಕ್ಸ್‌ಗಳು ಪ್ರದರ್ಶನಗೊಂಡಿವೆ. 

ನಿಸ್ವಾರ್ಥಿ ಕಾರ್ಯಕರ್ತರು ಇದು ನಡೆಯುತ್ತಿರುವುದು ವೇತನ ತೆಗೆದುಕೊಂಡ ಕಾರ್ಮಿಕರಿಂದಲ್ಲ. ನಿತ್ಯವೂ ಬೇರೆ ಬೇರೆ ಕಡೆಗಳಿಂದ 30-40-50 ಕಾರ್ಯಕರ್ತರು ಬಂದು ಬೆಳಗ್ಗಿನ ಜಾವದವರೆಗೆ ಅಲಂಕಾರ ಮಾಡಿ ಮತ್ತೆ ತಮ್ಮೂರಿಗೆ ತೆರಳುತ್ತಿದ್ದಾರೆ.

ಈ ಸಂಖ್ಯೆ 80-100 ತಲುಪುವುದೂ ಇದೆ. ಇವರೆಲ್ಲರೂ ತೀರಾ ಸಾಮಾನ್ಯ ಕಾರ್ಯಕರ್ತರು ಎನ್ನುವುದು ವಿಶೇಷ. ಇದಲ್ಲದೆ ತಿಂಗಳುಗಟ್ಟಲೆ ಉಚಿತವಾಗಿ ಸೇವೆ ಸಲ್ಲಿಸುತ್ತಿರುವ ಸ್ಥಳೀಯ ಮತ್ತು ಹೊರಗಿನ ಪೂರ್ಣಾವಧಿ ಕಾರ್ಯಕರ್ತರೂ ಇದ್ದಾರೆ. 

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.