ಅಂಡಾರು: ಸಂಪೂರ್ಣ ಹದಗೆಟ್ಟ ಕೋಲಿಬೆಟ್ಟು -ತುರ್ಕೆರೆಗುಡ್ಡೆ ರಸ್ತೆ
Team Udayavani, Jun 14, 2019, 6:10 AM IST
ಅಜೆಕಾರು: ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಡಾರು ಗ್ರಾಮದ ಕೋಲಿಬೆಟ್ಟು-ತುರ್ಕೆರೆಗುಡ್ಡೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕೆಸರಿನಿಂದ ಆವೃತಗೊಂಡಿದೆ.
ಸುಮಾರು 2.5 ಕಿ.ಮೀ. ಯಷ್ಟು ಉದ್ದವಿರುವ ಈ ರಸ್ತೆಯ ಹೊಂಡಗಳಿಗೆ ಬೇಸಗೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಈಗ ಮಳೆಗೆ ಮಣ್ಣು ರಾಡಿ ಎದ್ದು ಕೆಸರುಮಯವಾಗಿ ಸಂಚರಿಸಲು ಸಂಕಷ್ಟಪಡಬೇಕಾಗಿದೆ.
ರಸ್ತೆ ತುಂಬ ಹೊಂಡ-ಗುಂಡಿ
2.5 ಕಿ.ಮೀ. ರಸ್ತೆಯಲ್ಲಿ ಸುಮಾರು 1.5 ಕಿ.ಮೀ. ಯಷ್ಟು ಭಾಗವನ್ನು 15 ವರ್ಷಗಳ ಹಿಂದೆ ಡಾಮರು ಹಾಕಲಾಗಿದ್ದು ಇದರಲ್ಲಿ ಸುಮಾರು 100 ಮೀ.ನಷ್ಟು ಭಾಗಕ್ಕೆ 2 ವರ್ಷಗಳ ಹಿಂದೆ ಗ್ರಾಮ ವಿಕಾಸ ಯೋಜನೆಯಡಿ ಕಾಂಕ್ರೀಟ್ ಹಾಕಲಾಗಿದೆ. ಉಳಿದೆಡೆ ಡಾಮರು ಕಿತ್ತು ಹೋಗಿ ರಸ್ತೆಯುದ್ದಕ್ಕೂ ಜಲ್ಲಿಕಲ್ಲು ರಾಶಿಬಿದ್ದಿದೆ.
ಇನ್ನು, 1 ಕಿ.ಮೀ. ಉದ್ದಕ್ಕೆ ರಸ್ತೆ ಯಾವುದೇ ಅಭಿವೃದ್ಧಿ ಕಾಣದ್ದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ಈ ಕಾರಣ ವಾಹನ ಸಂಚಾರ ಅಸಾಧ್ಯವಾಗಿದೆ.
ಸಂಚಾರ ಸಂಕಷ್ಟ
ಈ ಭಾಗದಲ್ಲಿ ಮಲೆಕುಡಿಯ ಸಮುದಾಯದವರ ಹಾಗೂ ಇತರೆ ಸಮುದಾಯಗಳ ನೂರಾರು ಮನೆಗಳಿದ್ದು ಸಂಚರಿಸಲು ಇರುವ ಏಕೈಕ ರಸ್ತೆ ಇದಾಗಿದೆ. ಈ ರಸ್ತೆಯ ಮೂಲಕ ವಿದ್ಯಾರ್ಥಿಗಳು ದಿನನಿತ್ಯ ಸಂಚರಿಸುತ್ತಿದ್ದು ಕೆಸರಿನಿಂದಾಗಿ ನಡೆದುಕೊಂಡು ಹೋಗಲೂ ಸಾಧ್ಯವಾಗುತ್ತಿಲ್ಲ. ತುರ್ಕೆರೆಗುಡ್ಡೆ ಭಾಗಕ್ಕೆ ರಿಕ್ಷಾ ಚಾಲಕರೂ ಹೋಗಲು ಹಿಂದೇಟು ಹಾಕುತ್ತಿದ್ದು ಇದರಿಂದಾಗಿ ಸ್ಥಳೀಯರು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದೆ. ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸಿ ಸ್ಥಳೀಯರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಈ ಭಾಗದ ನಾಗರಿಕರು ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.