ಮಂಗನ ಕಾಯಿಲೆಗೆ ಮತ್ತೂಂದು ಬಲಿ
Team Udayavani, Mar 7, 2019, 12:30 AM IST
ಉಡುಪಿ/ತೀರ್ಥಹಳ್ಳಿ: ಮಹಾಮಾರಿ ಮಂಗನ ಕಾಯಿಲೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರಿದಿದ್ದು ತೀರ್ಥಹಳ್ಳಿ ತಾಲೂಕಿನ ಬಾಂಡ್ಯ ಗ್ರಾ.ಪಂ. ವ್ಯಾಪ್ತಿಯ ಘಂಟೆ ಜನಗಲ್ ವಾಸಿ ಐತಪ್ಪ ಪೂಜಾರಿ (55) ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೂಲಿ ಕಾರ್ಮಿಕನಾಗಿದ್ದ ಐತಪ್ಪ ತಿಂಗಳ ಹಿಂದೆ ಜ್ವರಕ್ಕೆ ತುತ್ತಾಗಿದ್ದರು. ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದಿದ್ದರೂ ಜ್ವರ ಕಡಿಮೆಯಾಗಿರಲಿಲ್ಲ. ಹತ್ತು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರೊಂದಿಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಇಬ್ಬರು ಈ ಕಾಯಿಲೆಗೆ ಬಲಿಯಾದಂತಾ ಗಿದೆ. 6 ದಿನಗಳಲ್ಲಿ ಜಿಲ್ಲೆಯ ಐವರು ಮೃತಪಟ್ಟಿದ್ದಾರೆ. ಇದು ವರೆಗೆ ಕೆಎಂಸಿಯಲ್ಲಿ ಮಂಗನ ಕಾಯಿಲೆ ಚಿಕಿತ್ಸೆಗೆ ದಾಖಲಾಗಿದ್ದ ಶಿವಮೊಗ್ಗ ಜಿಲ್ಲೆಯ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಸುಮಾರು 211 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. 30 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ಮಂಗನ ಶವ ಪತ್ತೆ
ಉಡುಪಿ ಜಿಲ್ಲೆಯ ಪಳ್ಳಿ ನಿಂಜೂರಿನಲ್ಲಿ ಬುಧವಾರ ಒಂದು ಮಂಗನ ಶವ ಪತ್ತೆಯಾಗಿದೆ. ಬುಧವಾರ ಓರ್ವರನ್ನು ಪರೀಕ್ಷೆ ಗೊಳಪಡಿಸಲಾಗಿದೆ ಎಂದು ಆ. ಇ. ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್ಪಾತ್ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.