![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 9, 2018, 6:35 AM IST
ಕೋಟ: ಮಣೂರು- ಪಡುಕರೆ, ಕೋಡಿಕನ್ಯಾಣ, ಕೋಡಿಬೆಂಗ್ರೆ ಮುಂತಾದ ಕಡೆ ಪ್ರತಿ ವರ್ಷ ಕಡಲ್ಕೊರೆತ ಸಮಸ್ಯೆ ಎದುರಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ. ಈ ಬಾರಿಯೂ ಸಮಸ್ಯೆ ಮರುಕಳಿಸುವ ಸಾಧ್ಯತೆ ಇದೆ.
ಹಲವು ವರ್ಷಗಳಿಂದ ಮನವಿ
ಮಣೂರು ಪಡುಕರೆಯ ಬಿ.ಬಿ. ಕಾಂಚನ್ ರಸ್ತೆಯಿಂದ ಬೈನಾಯ್ಕರ ಮನೆ ತನಕ 200 ಮೀಟರ್ ಹಾಗೂ ಮಣೂರು ಜಟ್ಟಿಗೇಶ್ವರ ದೇವಸ್ಥಾನದ ಹಿಂಬದಿಯಿಂದ ತೆಕ್ಕಟ್ಟೆ ಕೊಮೆಯ ಗಡಿಭಾಗದ ವರೆಗೆ 300 ಮೀಟರ್ ತಡೆಗೋಡೆ ನಿರ್ಮಿಸಲು ಬಾಕಿ ಇದೆ. ಇಲ್ಲಿನ 10ಕ್ಕೂ ಹೆಚ್ಚು ಮನೆಗಳು, ರಸ್ತೆ, ವಿಶಾಲ ತೆಂಗಿನ ತೋಟ ಪ್ರತಿ ವರ್ಷ ಅಪಾಯಕ್ಕೆ ಸಿಲುಕುತ್ತವೆ. ಸಮಸ್ಯೆ ಬಗೆಹರಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದರೂ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ.
ಅದೇ ರೀತಿ ಕೋಡಿ ಕನ್ಯಾಣ ದಲ್ಲೂ 500 ಮೀ.ನಷ್ಟು ತಡೆಗೋಡೆ ಅಗತ್ಯವಿದೆ ಹಾಗೂ ಕೋಡಿಬೆಂಗ್ರೆಯಲ್ಲೂ ಸಮಸ್ಯೆ ಇದೆ.
ತಡೆಗೋಡೆ ಕಲ್ಲು ಸಮುದ್ರಕ್ಕೆ
ಹಲವು ಕಡೆಗಳಲ್ಲಿ ಸ್ವಲ್ಪ-ಸ್ವಲ್ಪವೇ ಕಾಮಗಾರಿ ಮತ್ತು ತಾತ್ಕಾಲಿಕ ಕಾಮಗಾರಿ ನಡೆಸಿರುವುದರಿಂದ ಕಡಲ
ಅಲೆಗಳ ರಭಸಕ್ಕೆ ತಾತ್ಕಾಲಿಕ ತಡೆಗೋಡೆಯ ಕಲ್ಲುಗಳು ಸಮುದ್ರ ಸೇರುತ್ತಿದೆ. ಹೀಗಾಗಿ ಶಾಶ್ವತ ಪರಿಹಾರ ಶೀಘ್ರ ಅಗತ್ಯವಿದೆ.
500 ಮೀ. ತಡೆಗೋಡೆ ಬಾಕಿ
ಮಣೂರು ಪಡುಕರೆಯಲ್ಲಿ ಕೇವಲ 500 ಮೀ.ನಷ್ಟು ತಡೆಗೋಡೆ ಬಾಕಿ ಇದ್ದು ಪ್ರತಿ ವರ್ಷ ಅದೇ ಕಡೆ ಕಡಲ್ಕೊರೆತ ಹೆಚ್ಚುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಕಳೆದ ಬಾರಿ ಕಾಮ ಗಾರಿ ಆರಂಭಿಸುವ ಭರವಸೆ ಕೂಡ ದೊರೆತಿತ್ತು. ಆದರೆ ಕೆಲಸ ಮಾತ್ರ ನಡೆಯಲಿಲ್ಲ. ಈ ವರ್ಷವಾದರು ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿ ಕಾರ್ಯಪ್ರವೃತ್ತರಾಗಬೇಕು.
– ಭುಜಂಗ ಗುರಿಕಾರ, ಕೋಟ ಗ್ರಾ.ಪಂ. ಸದಸ್ಯರು.
ಕಡಲ್ಕೊರೆತ ಸಮಸ್ಯೆ
ಕೋಡಿಕನ್ಯಾಣದಲ್ಲಿ ಸುಮಾರು 500ಮೀಟರ್ ಕಡಲ್ಕೊರೆತದ ಸಮಸ್ಯೆ ಇದ್ದು ತಡೆಗೋಡೆ ನಿರ್ಮಿಸುವ ಸಲುವಾಗಿ ದಡದಲ್ಲಿ ಕಲ್ಲು ತಂದು ರಾಶಿ ಹಾಕಲಾಗಿದೆ. ಆದರೆ ಕಾಮಗಾರಿ ಆರಂಭಿಸಿಲ್ಲ. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ಇನ್ನು ಕಾಮಗಾರಿ ನಡೆಸುವುದು ಕಷ್ಟ.. ಹೀಗಾಗಿ ಇಲ್ಲಿನ ರಸ್ತೆ, ತೆಂಗಿನ ತೋಟಕ್ಕೆ ಈ ಬಾರಿ ಹಾನಿಯಾಗುವ ಸಂಭವವಿದೆ. ಜೋಡಿಸದಿರುವುದರಿಂದ ಕಲ್ಲುಗಳು ಸಮುದ್ರ ಸೇರಲಿವೆ. ಈ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು.
– ಜಯಂತ್ ಅಮೀನ್ ಕೋಡಿಕನ್ಯಾಣ, ಸ್ಥಳೀಯ ನಿವಾಸಿ
You seem to have an Ad Blocker on.
To continue reading, please turn it off or whitelist Udayavani.