Missing Case: ಇನ್ನಾ ಗ್ರಾಮದ ವ್ಯಕ್ತಿ ನಾಪತ್ತೆ
Team Udayavani, Nov 29, 2024, 12:07 AM IST
ಪಡುಬಿದ್ರಿ: ಮನೆಯಿಂದ ಮೂಲ್ಕಿಗೆ ಹೋಗಿ ಬರುವುದಾಗಿ ಹೇಳಿ ನ. 25ರಂದು ಬೆಳಗ್ಗೆ ಮನೆ ಬಿಟ್ಟು ತೆರಳಿದ್ದ ಇನ್ನಾ ಗ್ರಾಮದ ಶಂಕರ ಜೆ. ಪೂಜಾರಿ (53) ಅವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನ. 27ರಂದು ಪ್ರಕರಣ ದಾಖಲಾಗಿದೆ.
ಪಾರ್ಶ್ವವಾಯು ಪೀಡಿತರಾಗಿದ್ದು, ಬಲಗೈ ಸ್ವಾಧೀನವಿರದ ಅವರು ಮೂಲ್ಕಿಯತ್ತ ಹೋಗದೆ ಉಡುಪಿ ಬಸ್ ನಿಲ್ದಾಣದವರೆಗೆ ಹೋಗಿ ಬಳಿಕ ಕಾಣೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಳಿ ಬಣ್ಣದ ಅಂಗಿ, ಕಪ್ಪು ಬಣ್ಣದ ಬರ್ಮುಡ ಧರಿಸಿರುವ ಅವರು 5.8 ಅಡಿ ಎತ್ತರ, ಕನ್ನಡ, ತುಳು ಮತ್ತು ಹಿಂದಿ ಮಾತಾಡಬಲ್ಲವರಾಗಿದ್ದಾರೆ. ಸಪೂರ ಶರೀರ, ಎಣ್ಣೆಗಪ್ಪು ಮೈಬಣ್ಣ ಹೊಂದಿರುವ ಅವರ ಕುರಿತು ಯಾರಿಗಾದರೂ ಮಾಹಿತಿ ಲಭಿಸಿದ್ದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆ(0820 2555452)ಯನ್ನು ಸಂಪರ್ಕಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.