ಕ್ಷಣಾರ್ಧದಲ್ಲಿ ವಾಹನ ಗುರುತಿಸಲು ಎಎನ್‌ಪಿಆರ್
Team Udayavani, Mar 16, 2018, 6:00 AM IST
ಉಡುಪಿ: ವಾಹನಗಳು ಚಲಿಸುತ್ತಿರುವಾಗಲೇ ಅವುಗಳ ನೋಂದಣಿ ಸಂಖ್ಯೆಯನ್ನು ಬಹುದೂರ ದಿಂದ ಗುರುತಿಸಿ, ವಾಹನದ ಸಮಗ್ರ ಮಾಹಿತಿಯೊಂದಿಗೆ ವಾಹನದ ಮಾಲಕರ ವಿವರವನ್ನು ಕ್ಷಣಾರ್ಧದಲ್ಲಿ ಒದಗಿಸುವ ಹೊಸ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕೊಗ್ನಿಶನ್ (ಎಎನ್‌ಪಿಆರ್) ಕೆಮರಾ ವ್ಯವಸ್ಥೆಯನ್ನು ಆಂಧ್ರಪ್ರದೇಶದಲ್ಲಿ ಈಗಾಲೇ ಪರಿ ಚಯಿಸಲಾಗಿದ್ದು, ಇಂತಹ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಮತ್ತು ಉಡುಪಿ ಜಿಲ್ಲೆಗೆ ಕೂಡ ಅತೀ ತುರ್ತಾಗಿ ಬೇಕಾಗಿದೆ.
ಉಪಯೋಗ
ಸಂಚಾರ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇರಿಸುವಲ್ಲಿ ಎಎನ್‌ಪಿಆರ್ ಪ್ರಮುಖ ಪಾತ್ರ ವಹಿಸುತ್ತದೆ. ಅಪ ರಾಧ ಕೃತ್ಯಗಳನ್ನು ತಡೆಯಲು ಅತ್ಯಂತ ಉಪಯೋಗಕಾರಿ. ಇದು ಸಂಚ ರಿಸುತ್ತಿರುವ ವಾಹನದ ಚಿತ್ರದೊಂದಿಗೆ ಅದರ ನೋಂದಣಿ ಸಂಖ್ಯೆಯ ಸಹಿತ ಸಮಗ್ರ ಮಾಹಿತಿಯನ್ನು ಕರಾರುವಕ್ಕಾಗಿ ಒದಗಿಸುತ್ತದೆ.
ಅವಳಿ ಕೆಮರಾ
ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿ ಒಂದೇ ಕೆಮರಾದಿಂದ ವಾಹನಗಳ, ಜನರ ಚಲನವಲನಗಳನ್ನು ದಾಖಲಿಸ ಲಾಗುತ್ತದೆ. ಆದರೆ ಎಎನ್‌ಪಿಆರ್ ವ್ಯವಸ್ಥೆಯಲ್ಲಿ ಎರಡು ಕೆಮರಾಗಳು ಇರುತ್ತವೆ. ಒಂದು ವಾಹನದ ಚಿತ್ರವನ್ನು ಏಕವರ್ಣಕ್ಕೆ ಪರಿವರ್ತಿಸಿಕೊಂಡು ವಾಹನದ ನೋಂದಣಿ ಸಂಖ್ಯೆಯನ್ನು ಪ್ರತ್ಯೇಕಿಸಿಕೊಳ್ಳುತ್ತದೆ. ಇದರಿಂದ ವಾಹನದ ನೋಂದಣಿ ಸಂಖ್ಯೆ ಕ್ಷಣಮಾತ್ರದಲ್ಲಿ ಲಭ್ಯವಾಗುತ್ತದೆ. ಎರಡನೇ ಕೆಮರಾ ಬಹುವರ್ಣದಲ್ಲಿ ದೃಶ್ಯಾವಳಿಯನ್ನು ದಾಖಲಿಸಿಕೊಳ್ಳುತ್ತದೆ. ಇದರಿಂದ ವಾಹನದ ಬಣ್ಣ ಮತ್ತು ಇತರ ವಿವರಗಳು ತಿಳಿಯುತ್ತವೆ.
ಕೆಮರಾದ ವೈಶಿಷ್ಟ್ಯ
ಎಎನ್‌ಪಿಆರ್ ಕೆಮರಾ ಕಾರ್ಯ ನಿರ್ವಹಿಸಲು ಸಮರ್ಪಕ ಸಾಫ್ಟ್ವೇರ್ ಮತ್ತು ದಕ್ಷ ಹಾರ್ಡ್‌ವೇರ್ ಆವಶ್ಯಕತೆ ಇದೆ. ಸಾಫ್ಟ್ವೇರ್‌ನಲ್ಲಿ ಆಪ್ಟಿಕಲ್ ಕ್ಯಾರೆಕ್ಟರ್ ರೆಕೊಗ್ನಿಶನ್, ವೆಬ್ ಕ್ಯಾಮ್ ಮತ್ತು ಮ್ಯಾಟ್ ಲ್ಯಾಬ್ ಆವಶ್ಯಕತೆ ಇದೆ. ಹಾರ್ಡ್‌ವೇರ್‌ನಲ್ಲಿ ದೃಶ್ಯಾವಳಿಗಳನ್ನು ದಾಖಲಿಸಲು ಸ್ಟೋರೇಜ್, ಕಂಪ್ಯೂಟರ್, ವೆಬ್‌ಕ್ಯಾಮ್ ಮತ್ತು ಇನ್‌ನಾರೆಡ್ ಸೆನ್ಸರ್‌ಗಳು ಬೇಕಾಗುತ್ತವೆ.
ವಿದೇಶಗಳಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಎಎನ್‌ಪಿಆರ್ ಕೆಮರಾ ವ್ಯವಸ್ಥೆ ಬಂದು ದಶಕಗಳೇ ಕಳೆದಿವೆ. ಈ ತಂತ್ರಜ್ಞಾನಕ್ಕಿಂತಲೂ ಮುಂದೆ ಹೋಗಿರುವ ವಿದೇಶಿ ಸಂಚಾರ ಪೊಲೀಸರು ವಾಹನದ ವೇಗ, ಮೊಬೈಲ್ ನಂಬರ್ ಆಧಾರದಲ್ಲಿ ವಾಹನದೊಳಗಿರುವ ವ್ಯಕ್ತಿಯ ಮಾಹಿತಿ ಮತ್ತು ವಾಹನ ಚಾಲಕ ಸಂಚಾರ ನಿಯಮಗಳನ್ನು ಉಲ್ಲಂ ಸಿದ್ದಲ್ಲಿ ದಂಡವನ್ನು ಕೂಡಲೇ ಕಟ್ಟಿಸಿಕೊಳ್ಳುವ ಮಟ್ಟವನ್ನು ಈಗಾಗಲೇ ತಲುಪಿದ್ದಾರೆ. ಇದರಿಂದಾಗಿ ವಿದೇಶಗಳಲ್ಲಿ ಸಂಚಾರ ನಿಯಮ ಗಳನ್ನು ಉಲ್ಲಂ ಸಲು ಹೆದರುತ್ತಾರೆ. ತಪ್ಪನ್ನು ಪುನರಾವರ್ತಿಸಿದರೆ ಚಾಲನಾ ಪರವಾನಿಗೆಯನ್ನೇ ರದ್ದು ಮಾಡ ಲಾಗುತ್ತದೆ.
ಸ್ಥಳದಲ್ಲಿಯೇ ದಂಡ ಪಾವತಿ
ಹೊಸದಾಗಿ ವಿತರಿಸಲಾಗುವ ಸಾಧನದ ಮೂಲಕ ನಿಯಮ ಉಲ್ಲಂ ಸುವ ವಾಹನ ಚಾಲಕರಿಂದ ದಂಡವನ್ನು ಸ್ಥಳದಲ್ಲಿಯೇ ಡೆಬಿಟ್‌ಯಾ ಕ್ರೆಡಿಟ್ ಕಾರ್ಡ್ ಮೂಲಕ ಕಟ್ಟಿಸಿಕೊಳ್ಳ ಬಹುದಾಗಿದೆ. ಇದರಿಂದ ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಹೋಗಿ ದಂಡ ತೆರುವ ಸಮಯವನ್ನು ಉಳಿಸಬಹುದಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಗೆ ಹತ್ತು ಹೊಸ ಸಾಧನಗಳು: ಎಸ್‌ಪಿ
ಸಂಚಾರ ನಿಯಮ ಉಲ್ಲಂಘಿಸಿದವರಿಂದ ದಂಡ ಕಟ್ಟಿಸಿಕೊಳ್ಳಲು ಮೊದಲು ಬ್ಲ್ಯಾಕ್‌ಬೆರಿ ಫೋನ್ ಬಳಸಲಾಗುತ್ತಿತ್ತು. ಈ ಸಾಧನದಲ್ಲಿ ಕೇವಲ ದೂರು ಮಾತ್ರ ದಾಖಲಿಸಲಾಗುತ್ತಿತ್ತು. ಆದರೆ ಈಗ ಒದಗಿಸಲಾಗಿರುವ ಹೊಸ ಸಾಧನದಲ್ಲಿ ವಾಹನ ಚಾಲಕರ ಚಾಲನಾ ಪತ್ರ ಮತ್ತು ವಾಹನ ನೋಂದಣಿ ಪತ್ರದಲ್ಲಿರುವ ಸಿಮ್‌ನಿಂದ ದಾಖಲೆಗಳನ್ನು ವರ್ಗಾಯಿಸಿಕೊಳ್ಳಬಹುದಾಗಿದೆ. ಇದು ಅಧಿಕೃತ ಮಾಹಿತಿಯಾಗಿ ರೂಪುಗೊಳ್ಳುತ್ತದೆ. ಆರಂಭದಲ್ಲಿ ಉಡುಪಿ ನಗರ ಮತ್ತು ಕುಂದಾಪುರಕ್ಕೆ ಎರಡು, ಮಣಿಪಾಲ, ಬ್ರಹ್ಮಾವರ, ಬೈಂದೂರು, ಕಾಪು ಮತ್ತು ಪಡುಬಿದ್ರಿಗಳಿಗೆ ತಲಾ ಒಂದು ಸಾಧನಗಳನ್ನು ಮುಂದಿನ ವಾರ ನೀಡಲಾಗುತ್ತದೆ. ಸಂಚಾರ ಪೊಲೀಸರಿಗೆ ಈಗಾಗಲೇ ಹೊಸ ಸಾಧನದ ಬಳಕೆ ಕುರಿತು ತರಬೇತಿಯನ್ನು ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ “ಉದಯವಾಣಿ’ಗೆ ತಿಳಿಸಿದ್ದಾರೆ.
ಆಸ್ಟ್ರೋ ಮೋಹನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.