ಎಪಿಎಲ್ ‘ಅನ್ನ ಭಾಗ್ಯ’ ಯೋಜನೆ ಅಕ್ಕಿಗೆ ಕತ್ತರಿ
ಜಿಲ್ಲೆಯಲ್ಲಿ 1,09,585 ಎಪಿಎಲ್ ಕಾರ್ಡ್ 15,302 ಮಂದಿಗೆ ರೇಶನ್ ಇಲ್ಲ
Team Udayavani, Jul 23, 2019, 5:25 AM IST
ಸಾಂದರ್ಭಿಕ ಚಿತ್ರ.
ಗ್ರಾಮೀಣ ಭಾಗದಲ್ಲಿ ಎಪಿಎಲ್ ಕಾರ್ಡ್‌ದಾರರಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿಲ್ಲ. ಇದಕ್ಕೆ ಕಾರಣ ಕೆಲವು ಬಿಪಿಎಲ್ ಕಾರ್ಡ್‌ದಾರರು ಅಕ್ಕಿ ಪಡೆಯದೆ ಇರುವುದು. ಇದರಿಂದಾಗಿ ಅವರ ರೇಶನ್ ಅಂಗಡಿಯಲ್ಲಿ ಸಂಗ್ರಹವಾಗುತ್ತದೆ. ಅದನ್ನು ಪಡಿತರ ಸಾಮಗ್ರಿ ನೋಂದಾಯಿತ ಎಪಿಎಲ್ ಕಾರ್ಡ್‌ದಾರರಿಗೆ ನೀಡಲಾಗುತ್ತಿದೆ. ಆದರೆ ನಗರದಲ್ಲಿ ಬಿಪಿಎಲ್ ಕಾರ್ಡ್ ಗಿಂತ ಎಪಿಎಲ್ ಕಾರ್ಡ್‌ದಾರರ ಸಂಖ್ಯೆ ಹೆಚ್ಚಿರುವುದರಿಂದ ಇಲ್ಲಿ ಅಕ್ಕಿ ಸಂಗ್ರಹವಾಗುತ್ತಿಲ್ಲ.
ಉಡುಪಿ: ಜಿಲ್ಲೆಯರೇಶನ್‌ಅಂಗಡಿಗಳಲ್ಲಿ ಅಕ್ಕಿ ದಾಸ್ತಾನು ಕೊರತೆಯಿಂದ ಅನ್ನಭಾಗ್ಯ ಯೋಜನೆಯ ಅಡಿ ಎಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ವಿತರಣೆಯಾಗುತ್ತಿಲ್ಲ.
ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಗತ್ಯವಿರುವ ಅಕ್ಕಿ ಹಂಚಿಕೆಯಾಗಿಲ್ಲ. ಇರುವ ಕ್ಲೋಸಿಂಗ್ ಸ್ಟಾಕ್ ಬಳಸಿಕೊಳ್ಳುವಂತೆ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಆದೇಶ ಬಂದಿದೆ. ಆದರೆ ಉಡುಪಿಯಲ್ಲಿರುವ ಕ್ಲೋಸಿಂಗ್ ಸ್ಟಾಕ್‌ನಲ್ಲಿ ಜಿಲ್ಲೆಯ ಎಪಿಎಲ್ ಕಾರ್ಡ್‌ದಾರರಿಗೆ ಅಗತ್ಯವಿರುವ ಪ್ರಮಾಣದ ಅಕ್ಕಿ ದಾಸ್ತಾನಿಲ್ಲ. ಇದು ಸಮಸ್ಯೆಗೆ ಕಾರಣ. ಇಂತಹುದೇ ಸಮಸ್ಯೆ ರಾಜ್ಯದ ಇನ್ನೂ ಹಲವು ಜಿಲ್ಲೆಗಳಿಗೂ ತಟ್ಟಿರುವ ಸಾಧ್ಯತೆ ಇದೆ.
ಅಕ್ಕಿ ದಾಸ್ತಾನು ಕೊರತೆ
ಜಿಲ್ಲೆಯಲ್ಲಿ ಒಟ್ಟು ಎಪಿಎಲ್ 72,050 ಕಾರ್ಡ್‌ಗಳಿವೆ. ಹಲವು ತಿಂಗಳಿನಿಂದ ಕ್ಲೋಸಿಂಗ್ ಸ್ಟಾಕ್ ಅಡಿಯಲ್ಲಿ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯ ಕೆಲವು ರೇಶನ್ ಅಂಗಡಿಗಳಲ್ಲಿ ಎಲ್ಲ ಎಪಿಎಲ್ ಕಾರ್ಡ್‌ದಾರರಿಗೆ ಅಗತ್ಯವಿರುವಷ್ಟು ಪ್ರಮಾಣದ ಅಕ್ಕಿ ದಾಸ್ತಾನಿಲ್ಲದೆ ಎಪಿಎಲ್ ಕಾರ್ಡ್ ದಾರರು ಪರದಾಡುವಂತಾಗಿದೆ.
ಅಕ್ಕಿ ಖರೀದಿಗೆ ಪತ್ರ
ಪ್ರಸ್ತುತ ಜಿಲ್ಲೆಯಿಂದ ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಖರೀದಿಸಿ ನೀಡುವಂತೆ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದ್ದಾರೆ.
ಗ್ರಾಮೀಣ ಭಾಗದಲ್ಲಿ ಎಪಿಎಲ್ ಕಾರ್ಡ್‌ದಾರರಿಂದ ಅಕ್ಕಿಗೆ ಹೆಚ್ಚಿನ ಬೇಡಿಕೆಯಿಲ್ಲದ ಕಾರಣ ಇರುವ ದಾಸ್ತಾನು ಸಾಕಾಗುತ್ತಿದೆ. ಆದರೆ ನಗರ ಪ್ರದೇಶದಲ್ಲಿ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆಯಿದ್ದು, ದಾಸ್ತಾನು ಸಾಲುತ್ತಿಲ್ಲ.
2.2 ಲಕ್ಷ ಕಾರ್ಡ್‌ಗಳಿವೆ
ಜಿಲ್ಲೆಯಲ್ಲಿ ಒಟ್ಟು 2,29,508 ಕಾರ್ಡ್‌ಗಳಿವೆ. ಉಡುಪಿ ತಾಲೂಕಿನಲ್ಲಿ ಅಂತ್ಯೋದಯ 11,149, ಬಿಪಿಎಲ್ 64,448, ಎಪಿಎಲ್ 66,451, ಕಾರ್ಕಳದಲ್ಲಿ ಅಂತ್ಯೋದಯ 4,164, ಬಿಪಿಎಲ್ 33,064, ಎಪಿಎಲ್ 19,559,ಕುಂದಾಪುರದಲ್ಲಿ ಅಂತ್ಯೋ ದಯ 13,596, ಬಿಪಿಎಲ್ 59,945, ಎಪಿಎಲ್ 23,575 ಕಾರ್ಡ್‌ಗಳಿವೆ.
ಎಪಿಎಲ್ 15,000 ನೊಂದಣಿ
ಜಿಲ್ಲೆಯಲ್ಲಿ ಒಟ್ಟು 72,050 ಎಪಿಎಲ್ ಕಾರ್ಡ್‌ಗಳಿವೆ. ಕೇವಲ 15,309 ಕಾರ್ಡ್‌ದಾರರು ಮಾತ್ರ ಪಡಿತರ ಸಾಮಗ್ರಿ ಪಡೆಯಲು ನೊಂದಾಯಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.