ಸೈಬರ್‌ ಪ್ರಕರಣ ಕಡಿವಾಣಕ್ಕೆ ಪರಿಣತರ ನೇಮಕ


Team Udayavani, Dec 5, 2021, 3:40 AM IST

ಸೈಬರ್‌ ಪ್ರಕರಣ ಕಡಿವಾಣಕ್ಕೆ ಪರಿಣತರ ನೇಮಕ

ಉಡುಪಿ: ಸೈಬರ್‌ ವಂಚನೆ ಪ್ರಕರಣದಲ್ಲಿ ನಡೆಯುವ ಕಳ್ಳ-ಪೊಲೀಸ್‌ ಆಟದಲ್ಲಿ ಕಳ್ಳರದ್ದೇ ಮೇಲುಗೈ ಎಂಬಂತಹ ಸ್ಥಿತಿ ಇಂದು ನಿರ್ಮಾಣವಾಗಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಇರುವ ಸೈಬರ್‌ ಠಾಣೆಗಳಿಗೆ 250 ಮಂದಿ ಸೈಬರ್‌ ಪರಿಣತರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.

ಇತ್ತೀಚೆಗೆ ವರದಿಯಾಗುತ್ತಿರುವ ಪ್ರಕರಣಗಳನ್ನು ಗಮನಿಸಿದರೆ ವಿದ್ಯಾವಂತರೇ ಕ್ಷಣಾರ್ಧದಲ್ಲಿ ನಡೆಯುವ ಕಳ್ಳರ ಕೈಚಳಕದಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿರುವ ಸರಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಗುಜರಾತ್‌ ಸರಕಾರದೊಂದಿಗೆ ಎಂಒಯು:

“ಸೈಬರ್‌ ಸೇಫ್ ಮಿಷನ್‌’ ಮೂಲಕ ಗುಜರಾತ್‌ ಸರಕಾರ ಈಗಾಗಲೇ ಹಲವಾರು ರೀತಿಯಲ್ಲಿ ಜಾಗೃತಿ ಕಾರ್ಯಕ್ರಮ ರೂಪಿಸಿ ಮಾದರಿ ಎನಿಸಿಕೊಂಡಿದೆ. ಹಾಗೆಯೇ ಸೈಬರ್‌ ಠಾಣೆಗಳಿಗೆ ಪರಿಣತ ರನ್ನು ನೇಮಕ ಮಾಡಿ ಅನೇಕ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಸಹಕಾರಿಯಾಗಿದ್ದಾರೆ. ಇದನ್ನೇ ಮಾದರಿಯಾಗಿರಿಸಿಕೊಂಡು ಕರ್ನಾಟಕ ಸರಕಾರವೂ ಗುಜರಾತ್‌ ಸರಕಾರದೊಂದಿಗೆ ಎಂಒಯುನಡಿ ಸೈಬರ್‌ ವಿಂಗ್‌ ರಚಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸೈಬರ್‌ ಠಾಣೆಗಳಿಗೂ ಪರಿಣತರನ್ನು ನೇಮಿಸುವ ಉದ್ದೇಶ ರಾಜ್ಯ ಸರಕಾರದ್ದು. ಮೊದಲ ಹಂತದಲ್ಲಿ 250 ಮಂದಿ ಪರಿಣತರನ್ನು ನೇಮಕ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣತರನ್ನು ನೇಮಿಸಲು ಉದ್ದೇಶಿಸಲಾಗಿದೆ.

ದೇಶದ್ರೋಹ ಮಟ್ಟ ಹಾಕುವ ಉದ್ದೇಶ:

ದೇಶದ್ರೋಹ ಕೃತ್ಯ ಎಸಗುವವರು ವಿವಿಧ ಚೈನೀಸ್‌ ಆ್ಯಪ್‌ಗ್ಳು, ಐಎಸ್‌ಐ ಏಜೆಂಟ್‌ಗಳು, ನಕಲಿ ಆ್ಯಪ್‌ಗ್ಳ ಮೂಲಕ ವಿವಿಧ ರೀತಿಯಲ್ಲಿ ಬಳಕೆದಾರರ ಡಾಟಾ ಕದಿಯುವ ಮೂಲಕ ಅನಾಮಧೇಯ ವ್ಯಕ್ತಿಗಳು ಷಡ್ಯಂತ್ರ ರೂಪಿಸುತ್ತಿರು ವುದು ಪೊಲೀಸರಿಗೂ ತಲೆ ನೋವಾಗಿದೆ. ಇತ್ತೀಚೆಗಷ್ಟೇ ಬಿಟ್‌ಕಾಯಿನ್‌ ಹಗರಣ ದೇಶಾದ್ಯಂತ ಸದ್ದು ಮಾಡಿದ್ದು, ಈ ಪ್ರಕರಣವನ್ನೂ ಭೇದಿಸಲು ಸರಕಾರ ನಾನಾ ಕಸರತ್ತು ಮಾಡುತ್ತಿದೆ. ಸೈಬರ್‌ ಕ್ರೈಂ ಪ್ರಕರಣಗಳಲ್ಲಿ ಸಿಕ್ಕಿಬಿದ್ದ ಆರೋಪಿಗಳಿಂದಲೇ ಪೊಲೀಸರು ಪ್ರಾತ್ಯಕ್ಷಿಕೆ ಮಾಡಿಸುವ ಘಟನೆಗಳೂ ನಡೆದಿವೆ.

ಬೇಗನೇ ದೂರು ನೀಡಿದರೆ ಉತ್ತಮ:

ಸೈಬರ್‌ ವಂಚನೆ ಪ್ರಕರಣಗಳಲ್ಲಿ ಘಟನೆ ನಡೆದ ತತ್‌ಕ್ಷಣವೇ ಪೊಲೀಸರಿಗೆ ಹಾಗೂ ಬ್ಯಾಂಕ್‌ನವರಿಗೆ ಮಾಹಿತಿ ನೀಡಿದರೆ ಉತ್ತಮ. ಆ ಹಣ ಎಲ್ಲಿಂದ ಎಲ್ಲಿಗೆ ವರ್ಗಾವಣೆಯಾಗಿದೆ ಎಂಬ ಮಾಹಿತಿ ಲೊಕೇಶನ್‌ ಆಧಾರದಲ್ಲಿ ಲಭ್ಯವಾಗುತ್ತದೆ. ವಿಳಂಬ ಮಾಡಿದಷ್ಟು ಸಮಸ್ಯೆ ಜಟಿಲವಾಗಿ ಪರಿಣಮಿಸತೊಡಗುತ್ತದೆ.

ವಿದೇಶದಿಂದಲೂ ಕನ್ನ :

ರಾಜ್ಯಕ್ಕೆ ಉತ್ತರಪ್ರದೇಶ ಸಹಿತ ಅನ್ಯ ದೇಶದಲ್ಲಿದ್ದುಕೊಂಡು ಕೃತ್ಯ ಮಾಡುವವರೇ ಬಹಳಷ್ಟು ಮಂದಿ ಇದ್ದಾರೆ. ನಕಲಿ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಡುವುದು. ಕರೆಮಾಡಿ ಒಟಿಟಿ ಸಂಖ್ಯೆ ಕೇಳುವುದು. ವಿವಿಧ ಬಗೆಯ ಬಹುಮಾನಗಳ ಆಫ‌ರ್‌ ನೀಡುವುದು. ನಿಮಗೆ ಕೋಟ್ಯಂತರ ರೂ.ಹಣ ಬಂದಿದೆ; ಪಡೆದುಕೊಳ್ಳಿ ಎಂಬ ಅನಾಮಧೇಯ ಲಿಂಕ್‌ಉಳ್ಳ ಸಂದೇಶಗಳು ಹ್ಯಾಕರ್‌ಗಳ ತಂತ್ರವಾಗಿದೆ. ಇದರ ಹಿಂದೆ ಹೋದಷ್ಟೇ ವೇಗವಾಗಿ ನಮ್ಮ ಅಕೌಂಟ್‌ನಲ್ಲಿರುವ ಹಣವೂ ಮಾಯವಾಗತೊಡಗುತ್ತದೆ. ಕೆಲವರಿಗೆ ಈ ಬಗ್ಗೆ ದೂರು ನೀಡಲು ಮುಜುಗರವಾದರೆ; ಇನ್ನೂ ಕೆಲ ವರು ದೂರು ನೀಡಿದರೂ ತಮ್ಮ ಸಮಸ್ಯೆ ಬಗೆಹರಿಯಲಿಲ್ಲ ಎಂಬ ಚಿಂತೆಯಲ್ಲಿದ್ದಾರೆ.

ಜಿಲ್ಲೆಯಲ್ಲಿ ದಾಖಲಾದ ಪ್ರಕರಣ :

ಇಸವಿ  ಪ್ರಕರಣ

2019       28

2020       49

2021       40

ಸೈಬರ್‌ ಠಾಣೆಗಳ ಬಲವರ್ಧನೆ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ. ಪರಿಣತರನ್ನೊಳಗೊಂಡ ಸೈಬರ್‌ ವಿಂಗ್‌ಗಳ ಮೂಲಕ ರಾಜ್ಯದ ಎಲ್ಲ ಠಾಣೆಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಪರಿಗಣಿಸಿ ತ್ವರಿತಗತಿಯ ತನಿಖೆ ಮಾಡಲಾಗುವುದು. ಆರಗ ಜ್ಞಾನೇಂದ್ರ,ಗೃಹ ಸಚಿವರು

ಜಿಲ್ಲೆಯ ಸೈಬರ್‌ ಠಾಣೆಯಲ್ಲಿ ದಿನನಿತ್ಯ ವಿಭಿನ್ನ ಪ್ರಕರಣಗಳು ದಾಖಲಾಗುತ್ತಿವೆ. ಇದರ ಜಾಡು ಹಿಡಿಯಲು ಪೊಲೀಸರು ತಂತ್ರಜ್ಞಾನಗಳ ಬಳಕೆ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ವಂಚನೆ ಮಾಡಿದವರು ಉತ್ತರ ಭಾರತ ಮೂಲದವರಾಗಿರುತ್ತಾರೆ. ಕೃತ್ಯ ನಡೆಸಿದ ಕೆಲವೇ ಕ್ಷಣಗಳಲ್ಲಿ ಇವರು ದಾಖಲೆಗಳನ್ನು ಮರೆಮಾಚುತ್ತಾರೆ.  ಮಂಜುನಾಥ್‌,ಪೊಲೀಸ್‌ ನಿರೀಕ್ಷಕರು, ಸೆನ್‌ ಠಾಣೆ ಉಡುಪಿ

ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.