ಆಹಾರವಿಲ್ಲದೆ ಸಾಯುತ್ತಿವೆಯೇ ಹಕ್ಕಿಗಳು?

ಮಂಗಳೂರಿನ ಹಲವೆಡೆ ಸತ್ತುಬಿದ್ದ ಕಾಗೆ, ಪಾರಿವಾಳಗಳು ಪತ್ತೆ: ಪಕ್ಷಿಪ್ರಿಯರಲ್ಲಿ ಆತಂಕ

Team Udayavani, Apr 17, 2020, 9:52 AM IST

ಮಂಗಳೂರು: ಬಂದರಿನಲ್ಲಿ ಸತ್ತುಬಿದ್ದ ಪಾರಿವಾಳ.

ಮಂಗಳೂರು: ಬಂದರಿನಲ್ಲಿ ಸತ್ತುಬಿದ್ದ ಪಾರಿವಾಳ.

ಉಡುಪಿ / ಮಂಗಳೂರು: ನಗರದ ರಸ್ತೆ ಬದಿಯಲ್ಲಿ, ಬಾಗಿಲು ಹಾಕಿರುವ ಅಂಗಡಿಗಳ ಮುಂಭಾಗದಲ್ಲಿ ಸತ್ತು ಬಿದ್ದಿರುವ ಕಾಗೆ, ಪಾರಿವಾಳ ಹಾಗೂ ಇತರ ಹಕ್ಕಿಗಳು ಕಂಡುಬರುತ್ತಿವೆ. ಲಾಕ್‌ಡೌನ್‌ ಪರಿಣಾಮ ಆಹಾರವಿಲ್ಲದೆ ಇವು ಅಸುನೀಗಿದವೇ ಎನ್ನುವ ಪ್ರಶ್ನೆ ಮೂಡಿದೆ.

ನಗರ ಪ್ರದೇಶದ ಹಕ್ಕಿಗಳು ಸಾಮಾನ್ಯವಾಗಿ ನಗರ ಪ್ರದೇಶದಿಂದ ವಲಸೆ ಹೋಗುವುದಿಲ್ಲ. ನಗರದಲ್ಲೇ ಸಿಗುವ ಆಹಾರವನ್ನು ತಿಂದು ಬದುಕುತ್ತವೆ. ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ಇದ್ದು, ಆಹಾರ, ನೀರಿನ ಕೊರತೆಯಿಂದ ಹಕ್ಕಿಗಳು ಸಾಯುತ್ತಿರುವ ಸಾಧ್ಯತೆ ಇದೆ. ನಿಶ್ಶಕ್ತಿ ಇದ್ದಾಗ ಹಾರುವ ವೇಳೆ ರಸ್ತೆಗೆ ಬಿದ್ದು ತಲೆಗೆ ಪೆಟ್ಟಾಗಿ ರಕ್ತ ಬಂದಿರಬಹುದು ಎಂದು ಬಂಟ್ವಾಳದ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಹೆನ್ಸಿ ಡೊನಾಲ್ಡ್‌ ಲಸ್ರಾದೊ ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಪ್ರದೇಶದಲ್ಲೇ ಹಕ್ಕಿಗಳು ಸತ್ತುಬಿದ್ದಿರುವುದು ಗೋಚರಿಸಿದೆ. ಮೊದಲೆಲ್ಲ ಇಲ್ಲಿ ತಳ್ಳುಗಾಡಿಗಳಲ್ಲಿ ಹಣ್ಣು, ತರಕಾರಿ, ಕಾಫಿ-ತಿಂಡಿ, ಇತ್ಯಾದಿಗಳ ವ್ಯಾಪಾರ ಮಾಡಲಾಗುತ್ತಿತ್ತು. ಹಕ್ಕಿಗಳಿಗೂ ಆಹಾರ ಸಿಗುತ್ತಿತ್ತು. ಲಾಕ್‌ ಡೌನ್‌ ಜಾರಿಗೊಂಡಲ್ಲಿಂದ ಇಲ್ಲಿ ವಹಿವಾಟು ಸ್ತಬ್ಧವಾಗಿದೆ.

ಶಕ್ತಿನಗರದ ಅನಿಮಲ್‌ ಕೇರ್‌ ಟ್ರಸ್ಟ್‌ನ ಸುಮಾ ನಾಯಕ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಹಕ್ಕಿಗಳು ಹಸಿವೆಯಿಂದ ಸತ್ತಿರಬಹುದು. ಗಿಡುಗ ಮುಂತಾದವೂ ಆಹಾರಕ್ಕಾಗಿ ಹಕ್ಕಿಗಳ ಮೇಲೆ ದಾಳಿ ಮಾಡುತ್ತವೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾದ ಗಿಳಿ, ಪಾರಿವಾಳ, ಕಾಗೆ, ಬುಲ್‌ ಬುಲ್‌ ಮುಂತಾದ ಹಕ್ಕಿಗಳು ಸಿಕ್ಕಿವೆ’ ಎಂದು ಹೇಳಿದರು.

ರಸ್ತೆ ಮೇಲೆ ಬಿದ್ದ ಕಾಳುಗಳನ್ನು ಹಕ್ಕಿಗಳು ಹೆಕ್ಕಿ ತಿನ್ನುತ್ತವೆ. ಲ್ಯಾಂಡ್‌ ಲಿಂಕ್ಸ್‌ ಪರಿಸರದಲ್ಲಿ ಕೋತಿಗಳೂ ಕಾಣಸಿಗುತ್ತಿವೆ. ಮರಗಳ ಮೇಲೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿದೆ. ಬೇಸಗೆಯ ದಿನಗಳಾಗಿದ್ದರಿಂದ ಆಹಾರ, ನೀರು ಇಲ್ಲದೆ ಇವೆಲ್ಲ ಚಡಪಡಿಸುತ್ತಿವೆ.

ಹಕ್ಕಿಗಳಿಗೆ ಮೀನಿಲ್ಲ
ಬಂದರಿನ ದಕ್ಕೆ ಪರಿಸರ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಮೀನಿನ ವ್ಯಾಪಾರ ವಹಿವಾಟು ನಡೆಯುತ್ತಿರುವ ವೇಳೆ ನೂರಾರು ಗಿಡುಗ, ಕಾಗೆಗಳು ಬಂದರು ಪ್ರದೇಶದಲ್ಲೇ ಇರುತ್ತಿದ್ದವು. ಇಲ್ಲಿನ ಮೀನುಗಳೇ ಇವುಗಳಿಗೆ ಆಹಾರ. ಈಗ ಬಂದರಿನಲ್ಲಿ ಮೀನು ಸಿಗುತ್ತಿಲ್ಲ. ಹೀಗಾಗಿ ಪಕ್ಷಿಗಳಿಗೆ ಆಹಾರ ಕೊರತೆ ಉಂಟಾಗಿದೆ ಎಂದು ಪ್ರಾಣಿ ಪ್ರೇಮಿ ತೌಸಿಫ್ ಹೇಳಿದ್ದಾರೆ.

ಪ್ರದೇಶಕ್ಕೆ ಅವಲಂಬಿತ
ಲಾಕ್‌ಡೌನ್‌ ಪರಿಣಾಮ ಪಕ್ಷಿಗಳಿಗೆ ಆಹಾರ ಕಡಿಮೆಯಾಗಿದೆ. ಆಯಾ ಪ್ರದೇಶಗಳನ್ನೇ ಅವಲಂಬಿಸಿರುವ ಪಕ್ಷಿಗಳು ಬೇರೆ ಕಡೆಗಳಿಗೆ ಆಹಾರಕ್ಕೆಂದು ಹೋದಾಗ ಅಲ್ಲಿ ಹೊಂದಿಕೊಳ್ಳುವುದಿಲ್ಲ. ಆ ಸಮಯ ಆಹಾರ ಸಮಸ್ಯೆಯಿಂದ ಸಾವನ್ನಪ್ಪಬಹುದು.
– ಡಾ| ವಸಂತ ಕುಮಾರ್‌, ಪಶುವೈದ್ಯರು

ಆಹಾರ ಕೊರತೆ
ನಗರವನ್ನು ಅವಲಂಬಿಸಿಯೇ ಅನೇಕ ಹಕ್ಕಿಗಳು ಇರುತ್ತವೆ. ನಗರದ ಬಂದರು, ಬೊಕ್ಕಪಟ್ಣ ಪ್ರದೇಶಗಳಲ್ಲಿ ಅಂಗಡಿ ಮಾಲಕರು ಪಕ್ಷಿಗಳಿಗೆಂದೇ ಆಹಾರ ಹಾಕುತ್ತಾರೆ. ಅದನ್ನು ತಿನ್ನಲೆಂದೇ ಹತ್ತಾರು ಪಕ್ಷಿಗಳು ಬರುತ್ತವೆ. ಲಾಕ್‌ಡೌನ್‌ನಿಂದಾಗಿ ಅಂಗಡಿ – ಮುಂಗಟ್ಟು ಬಂದ್‌ ಆಗಿವೆ. ಪಕ್ಷಿಗಳಿಗೆ ಆಹಾರ ಕೊರತೆ ಇದೆ. ಪಾರಿವಾಳ, ಕಾಗೆ ಹೆಚ್ಚಾಗಿ ಸಾಯತ್ತಿವೆ.
– ದಿನೇಶ್‌ ಹೊಳ್ಳ, ಪರಿಸರವಾದಿ

ಆಹಾರದ ಕೊರತೆ ಸಂಭವವಿಲ್ಲ
ಹಕ್ಕಿಗಳು ಆಹಾರವಿಲ್ಲದೆ ಸಾವನ್ನಪ್ಪುವ ಸಾಧ್ಯತೆಗಳು ಕಡಿಮೆ. ಅಂತಹ ಯಾವ ಪ್ರಕರಣಗಳು ಇಲ್ಲಿ ತನಕ ನಮ್ಮ ಗಮನಕ್ಕೆ ಬಂದಿಲ್ಲ. ಹಕ್ಕಿಗಳಿಗೆ ನೀರು, ಆಹಾರ ಕೊರತೆ ಎದುರಾಗುವ ಸಂಭವವಿಲ್ಲ
-ತೇಜಸ್ವಿ ಎಸ್‌. ಮಣಿಪಾಲ ಬರ್ಡ್ಸ್‌ ಕ್ಲಬ್‌, ಸದಸ್ಯ

ಟಾಪ್ ನ್ಯೂಸ್

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

5-thekkatte

Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

Malpe-Fire

Malpe: ಮೀಟಿಂಗ್‌ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು

Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ

Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.