ಅಡಿಕೆ ದರ ಏರಿಕೆ; ಕರಿಚಿನ್ನ ಇಳಿಕೆ
Team Udayavani, Jul 22, 2018, 6:00 AM IST
ಮಳೆ ರಭಸಕ್ಕೆ ಮಾರುಕಟ್ಟೆ ಧಾರಣೆಗಳು ವ್ಯತ್ಯಾಸ ಕಂಡಿವೆ. ಅಡಿಕೆ ಧಾರಣೆ ಏರಿಕೆ ಕಂಡಿದ್ದು ಮಾತ್ರವಲ್ಲ, ಡಬಲ್ ಚೋಲು ಹಾಗೂ ಹಳೆ ಅಡಿಕೆ ಧಾರಣೆ ಒಂದಾಗುವ ಹಂತದಲ್ಲಿದೆ. ಇನ್ನೊಂದೆಡೆ ಕಾಳುಮೆಣಸು ಧಾರಣೆಯಲ್ಲಿ ಇಳಿಕೆ ಕಂಡಿದೆ.
ಡಬಲ್ ಚೋಲು ಧಾರಣೆ ಇದುವರೆಗೆ 285 ರೂ. ನಲ್ಲಿತ್ತು. ಇದರಲ್ಲಿ 7 ರೂ. ಏರಿಕೆ ಕಂಡು, 292 ರೂ. ಗೆ ಶನಿವಾರ ಖರೀದಿ ನಡೆಸಿದೆ. 280 ರೂ. ನಲ್ಲಿದ್ದ ಹಳೆ ಅಡಿಕೆ, 10 ರೂ. ಏರಿಕೆ ಕಂಡು 290 ರೂ. ಗೆ ಖರೀದಿಯಾಗಿದೆ.
ಹೊಸ ಅಡಿಕೆ ಧಾರಣೆಯಲ್ಲಿ 230 ರೂ. ನಲ್ಲಿದ್ದು, ಯಥಾಸ್ಥಿತಿ ಕಾಯ್ದುಕೊಂಡಿದೆ. ಚೋಲು ಅಡಿಕೆ ಧಾರಣೆ ನಿರೀಕ್ಷಿತವೇ. ಈ ಧಾರಣೆ ಏರಿಕೆ ದಾಖಲಾಗುತ್ತಾ ಸಾಗಿ, ಹಳೆ ಅಡಿಕೆ ಜತೆ ವಿಲೀನಗೊಳ್ಳುತ್ತದೆ. ಬಳಿಕ ಡಬಲ್ ಚೋಲು ಎಂಬ ಹೆಸರು ಇರುವುದಿಲ್ಲ. ಬಳಿಕ ಮಾರುಕಟ್ಟೆಯಲ್ಲಿ ಹಳೆ ಅಡಿಕೆ ಹಾಗೂ ಹೊಸ ಅಡಿಕೆಗಳು ಮಾತ್ರ ಚಾಲ್ತಿಯಲ್ಲಿರುತ್ತವೆ.
ಬಿಡದೇ ಸುರಿಯುವ ಮಳೆಗೆ ಅಡಿಕೆ ಕೃಷಿಕರು ಕಂಗಾಲಾಗಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಒಂದಷ್ಟು ಹಿನ್ನಡೆ ಆಗಿದೆ. ಅದರಲ್ಲೂ ಅಡಿಕೆಗೆ ಮದ್ದು ಸಿಂಪರಣೆ ಕಾರ್ಯ ಹೆಚ್ಚಿನ ಕಡೆಗಳಲ್ಲಿ ನಡೆದೇ ಇಲ್ಲ. ಈ ಕಾರಣಕ್ಕೆ ಒಂದಷ್ಟು ಆತಂಕ ಮನೆ ಮಾಡಿದೆ. ಮಳೆ ಬಿಡುವು ಪಡೆಯುವುದನ್ನೇ ಕಾದು ಕುಳಿತಿದ್ದಾರೆ ಕೃಷಿಕರು. ದೊಡ್ಡ ಮಳೆ ಸ್ವಲ್ಪ ಬಿಡುವು ಪಡೆದುಕೊಂಡರೂ ಸಾಕು, ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತವೆ.
ತೆಂಗಿನಕಾಯಿ ಧಾರಣೆ ಇಳಿಕೆ
ತೆಂಗಿನಕಾಯಿ ಧಾರಣೆಯಲ್ಲಿ 3 ರೂ. ಇಳಿಕೆ ದಾಖಲಾಗಿದ್ದು, 31 ರೂ.ಗೆ ಖರೀದಿ ಆಗಿದೆ. ಉತ್ಕೃಷ್ಟ ಗುಣಮಟ್ಟದ ತೆಂಗು ಧಾರಣೆ 32 ರೂ. ವರೆಗೂ ವ್ಯವಹಾರ ಕುದುರಿಸಿದೆ. ಹಿಂದಿನ ವಾರಾಂತ್ಯಕ್ಕೆ ತೆಂಗು 33- 34 ರೂ.ನಲ್ಲಿ ಖರೀದಿ ನಡೆಸಿತ್ತು. 41 ರೂ. ವರೆಗೆ ತಲುಪಿದ್ದ ತೆಂಗಿನಕಾಯಿ, ಈ ವರ್ಷದಲ್ಲಿ ದೊಡ್ಡ ಮಟ್ಟಿನ ಧಾರಣೆ ದಾಖಲಿಸುವಲ್ಲಿ ವಿಫಲವಾಗಿದೆ. ಸಾಕಷ್ಟು ಬೇಡಿಕೆ ಇದ್ದರೂ, ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಧಾರಣೆ ಕುದುರಿಸುವಲ್ಲಿ ವಿಫಲವಾಗಿದೆ. ಫಸಲು ಕಡಿಮೆ ಇದ್ದರೂ, ತೀರಾ ಅಗತ್ಯದ ಪದಾರ್ಥ ವಸ್ತು ಎಂಬ ಹಣೆಪಟ್ಟಿ ಹೊತ್ತಿರುವ ತೆಂಗು ನಿರೀಕ್ಷೆಯಷ್ಟು ಬೇಡಿಕೆ ಪಡೆದುಕೊಳ್ಳಲೇ ಇಲ್ಲ.
ಕಾಳುಮೆಣಸು ಧಾರಣೆ ಕುಸಿತ
ಕಾಳುಮೆಣಸು ಧಾರಣೆಯಲ್ಲಿ ಕುಸಿತ ದಾಖಲಾಗಿದೆ. ಸುಮಾರು 20 ರೂ. ನಷ್ಟು ಕುಸಿತ ಕಂಡಿರುವ ಕಾಳುಮೆಣಸು ವಾರಾಂತ್ಯಕ್ಕೆ 290 ರೂ. ನಲ್ಲಿ ಖರೀದಿ ನಡೆಸಿದೆ. ಸಾಂಬಾರ ಪದಾರ್ಥಗಳ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟಿನ ಮಾರುಕಟ್ಟೆ ಹೊಂದಿರುವ ಕಾಳುಮೆಣಸು, ಬೇಡಿಕೆ ಕುದುರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಾಮಾನ್ಯವಾಗಿ ಕರಿಮೆಣಸು ಧಾರಣೆ 600- 700 ರೂ. ವರೆಗೂ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ. ಇಷ್ಟು ಧಾರಣೆ ಇರಬಹುದು ಎಂಬ ಕಾರಣದಿಂದಲೇ ಇದನ್ನು ಕರಿಚಿನ್ನ ಎಂದೇ ಕರೆಯಲಾಗುತ್ತದೆ. ಆದರೆ ದೊಡ್ಡ ಮಟ್ಟಿನ ಧಾರಣೆಗೆ ತಲುಪಲೇ ಇಲ್ಲ.
ಕೊಕ್ಕೋ ಇಳಿಕೆ
ಹಸಿ ಕೊಕ್ಕೋ ಧಾರಣೆ ಇಳಿಕೆ ಹಾದಿ ಮುಂದುವರಿಯು ತ್ತಿದೆ. 53 ರೂ. ನಲ್ಲಿದ್ದ ಹಸಿ ಕೊಕ್ಕೋ ಧಾರಣೆ 45- 50 ರೂ.ನಲ್ಲಿ ಖರೀದಿ ಆಗಿದೆ. ಇನ್ನೊಂದು ಕಡೆ ಒಣ ಕೊಕ್ಕೋ 195 ರೂ.ನಲ್ಲಿ ಸ್ಥಿರವಾಗಿದೆ. ಒಣ ಕೊಕ್ಕೋಗೆ ಮಳೆಯಿಂದ ದೊಡ್ಡ ಎಫೆಕ್ಟ್ ಇಲ್ಲ.
ಆದ್ದರಿಂದ ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ದಾಖಲಿಸುತ್ತಿಲ್ಲ ಮಳೆಗಾಲ ದಲ್ಲಿ ದಾಸ್ತಾನು ತುಸು ಕಷ್ಟವೇ ಆದರೂ,ದಾಸ್ತಾನು ಸಮರ್ಪಕವಾಗಿ ಇಟ್ಟುಕೊಂಡವ ರಿಗೆ ನಿರೀಕ್ಷಿತ ಧಾರಣೆ ಕೈಗೆಟುಕು ತ್ತಿದೆ. ಕೃಷಿಕರ ಪಾಲಿಗೆ ದಾಸ್ತಾನು ಸಮಸ್ಯೆ ದೊಡ್ಡದಾಗಿ ಕಾಡುತ್ತದೆ.
ಯಥಾಸ್ಥಿತಿ ಕಾಯ್ದುಕೊಂಡ ರಬ್ಬರ್
ರಬ್ಬರ್ ಧಾರಣೆಯಲ್ಲಿ ಮಾತ್ರ ಯಾವುದೇ ವ್ಯತ್ಯಾಸಗಳು ದಾಖಲಾಗಿಲ್ಲ. ನಿರೀಕ್ಷೆಗಳೇ ಬತ್ತಿ ಹೋಗಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ಅತ್ತ ಕತ್ತರಿಸಲೂ ಆಗದೇ, ಇತ್ತ ಬೆಳೆಸಲು ಆಗದೇ ಇಬ್ಬದಿ ಸ್ಥಿತಿಯಲ್ಲಿದ್ದಾರೆ ರಬ್ಬರ್ ಕೃಷಿಕರು. ಹಿಂದಿನ ಶನಿವಾರದಂತೆ ಈ ವಾರಾಂತ್ಯದಲ್ಲೂ ರಬ್ಬರ್ ಆರ್‌ಎಸ್‌ಎಸ್4 ದರ್ಜೆ 123 ರೂ., ಆರ್‌ಎಸ್‌ಎಸ್5 ದರ್ಜೆ 118 ರೂ., ಲಾಟ್ 111 ರೂ., ಸಾðಪ್1 ದರ್ಜೆ 84 ರೂ., ಸಾðಪ್2 ದರ್ಜೆ 76 ರೂ. ನಲ್ಲಿ ಯಥಾಸ್ಥಿತಿ ಆಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.