ಸೇನಾ ರ್ಯಾಲಿ: 4,000 ಅಭ್ಯರ್ಥಿಗಳಿಗೆ ವಸತಿ ವ್ಯವಸ್ಥೆ
Team Udayavani, Mar 21, 2021, 3:20 AM IST
ಉಡುಪಿ: ಸೇನಾ ನೇಮಕಾತಿಗೆ ಬಂದ ಕಳೆದ ನಾಲ್ಕು ದಿನಗಳಿಂದ ನಗರದ ಪಾರ್ಕ್, ಫುಟ್‌ಪಾತ್ ಸೇರಿದಂತೆ ವಿವಿಧ ಕಡೆಗಳಲ್ಲಿ ಆಶ್ರಯ ಪಡೆಯುತ್ತಿರುವ ವಿವಿಧ ಜಿಲ್ಲೆಯ ಅಭ್ಯರ್ಥಿಗಳಿಗೆ ಜಿಲ್ಲಾಡಳಿತ ಮಾ.19ರ ರಾತ್ರಿಯಿಂದ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಿದ್ದು, ನಗರದಲ್ಲಿ ಶನಿವಾರ 4,000 ಅಭ್ಯರ್ಥಿಗಳು ವಸತಿ ಸೌಲಭ್ಯ ಪಡೆದುಕೊಂಡಿದ್ದಾರೆ.
ಜಿಲ್ಲಾಡಳಿತದಿಂದ ಶ್ರೀ ಕೃಷ್ಣ ಮಠದ ರಾಜಾಂಗಣ, ಪಾರ್ಕಿಂಗ್ ಪ್ರದೇಶದಲ್ಲಿ 1,000, ಅಂಬಲಪಾಡಿ ದೇವಾಲಯದಲ್ಲಿ 300, ಜಿ. ಶಂಕರ್ ಕಾಲೇಜಿನಲ್ಲಿ 700, ವಿವೇಕಾನಂದ ಶಾಲೆ 200, ಬನ್ನಂಜೆ ಮಹಾಲಿಂಗೇಶ್ವರ ದೇವಾಲಯದಲ್ಲಿ 100 ಮಂದಿಗೆ ಮಂದಿ ಸೇರಿದಂತೆ ಒಟ್ಟು 4,000 ಮಂದಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅಜ್ಜರಕಾಡು ಸೈನಿಕ ಸ್ಮಾರಕ ಬಳಿ 24×7 ಹೆಲ್ಪ್ ಡೆಸ್ಕ್ ಪ್ರಾರಂಭಿಸಿದ್ದು, ವಸತಿ ಮತ್ತಿತರ ಸೌಲಭ್ಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ರ್ಯಾಲಿಯಲ್ಲಿ ಅನುತೀರ್ಣರಾದ ಅಭ್ಯರ್ಥಿಗಳು ನಗರದಲ್ಲಿ ಉಳಿ ಯುತ್ತಿರುವುದರಿಂದ ವಸತಿ ಸಮಸ್ಯೆ ಎದುರಾಗುತ್ತಿದೆ. ಶಾಸಕ ಕೆ. ರಘುಪತಿ ಭಟ್ ಅವರ ಸೂಚನೆಯಂತೆ ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ದುಬಾಷ್, ನಗರಸಭೆ ಅಧ್ಯಕ್ಷೆ, ಸದಸ್ಯರು, ಪೌರಾಯುಕ್ತರು, ಉಡುಪಿ ತಹಶೀಲ್ದಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಶುಕ್ರವಾರ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದರು.
ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಸಂತೋಷ್ ಜತ್ತನ್, ಮಂಜುನಾಥ್ ಮಣಿಪಾಲ, ಚಂದ್ರಶೇಖರ್, ಯೋಗೀಶ್ ಸಾಲಿಯಾನ್, ಗಿರಿಧರ್ ಆಚಾರ್ಯ, ಹರೀಶ್ ಶೆಟ್ಟಿ, ಅಶೋಕ್ ನಾಯ್ಕ, ಪ್ರಭಾಕರ್ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಕೆ, ಪೌರಾಯುಕ್ತ ಡಾ| ಉದಯ ಶೆಟ್ಟಿ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಸಭೆಯಲ್ಲಿ ಭಾಗವಹಿಸಿದರು.
ಕೆಲವು ಅಭ್ಯರ್ಥಿಗಳು ಜಿಲ್ಲಾಡಳಿತ ಕಲ್ಪಿಸಿದ ವಸತಿ ವ್ಯವಸ್ಥೆ ಬಳಸಿಕೊಳ್ಳದೆ ಹೊರಗಡೆ ಮಲಗುವ ಪ್ರಯತ್ನ ಮಾಡುತ್ತಿದ್ದಾರೆಂಬ ದೂರು ಇದೆ. ಅವರನ್ನು ಹುಡುಕಿ ಅಧಿಕಾರಿಗಳು ವಸತಿ ವ್ಯವಸ್ಥೆ ಕಲ್ಪಿಸಿದ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. -ಡಾ| ರೋಶನ್ ಕುಮಾರ್ ಶೆಟ್ಟಿ, ಕ್ರೀಡೆ ಮತ್ತು ಯುವಜನ ಸಶಕ್ತೀಕರಣ ಇಲಾಖೆ ಉಡುಪಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.