ಕೊಡಗು ನೆರೆ ಸಂತ್ರಸ್ತ ಕುಟುಂಬಕ್ಕೆ ಸಂಜೀವಿನಿಯಾದ ‘ಗೋನಿಧಿ’ ಪ್ರದರ್ಶನ
Team Udayavani, Oct 23, 2018, 10:02 PM IST
ಉಡುಪಿ: ಮಣಿಪಾಲ ಮತ್ತು ಕುಂದಾಪುರಗಳಲ್ಲಿ ಕಲಾಸಕ್ತರಿಗೆ ಚಿತ್ರಕಲಾ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವ ‘ತ್ರಿವರ್ಣ’ ಕಲಾ ತರಗತಿ’ಯ ವಿದ್ಯಾರ್ಥಿಗಳು ಇತ್ತೀಚೆಗೆ ಮಣಿಪಾಲದ ಆರ್.ಎಸ್.ಬಿ. ಸಭಾಭವನದಲ್ಲಿ ‘ಗೋ ನಿಧಿ’ ಎಂಬ ಚಿತ್ರ ಕಲಾ ಪ್ರದರ್ಶನವನ್ನು ಆಯೋಜಿಸಿ ಆ ಮೂಲಕ ಸಂಗ್ರಹಿಸಿದ ಮೊತ್ತವನ್ನು ಕೊಡಗು ನೆರೆ ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ನಮ್ಮ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನವನ್ನು ಪಡೆದಿರುವ ಹಾಗೂ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿರುವ ಗೋವಿನ ಮಹತ್ವವನ್ನು ಸಾರುವ ಸುಮಾರು 30 ವೈವಿಧ್ಯಮಯ ಕಲಾಕೃತಿಗಳನ್ನು ವಿವಿಧ ಕಲಾ ಪ್ರಾಕಾರಗಳಲ್ಲಿ ಈ ಕಲಾಶಾಲೆಯ ಮಕ್ಕಳೇ ರಚಿಸಿದ್ದರು. ಈ ಕಲಾಕೃತಿಗಳಿನ್ನು ಮಾರಿ ಸಂಗ್ರವಾದ ಹಣ ಮತ್ತು ವಿವಿಧ ದಾನಿಗಳ ಉದಾರ ನೆರವಿನಿಂದ ಸಂಚಯನಗೊಂಡ ಸುಮಾರು 50 ಸಾವಿರ ರೂಪಾಯಿಗಳಷ್ಟು ಮೊತ್ತವನ್ನು ಕೊಡಗು ನೆರೆ ಸಂದರ್ಭದಲ್ಲಿ ನಿರಾಶ್ರಿತರಾದ ಶ್ರೀಮತಿ ಅನಿತಾ ರಜೋರಿಯಾ ಮತ್ತು ವಾಜ್ಹಿ ಡಿ’ಸೋಜಾ ದಂಪತಿಗೆ ಹಸ್ತಾಂತರಿಸಲಾಯಿತು. ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀ ನರಸಿಂಹ ಆಚಾರ್ ದಾನಿಗಳ ಪರವಾಗಿ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೋಷಕರಾದ ಸುಬ್ರಹ್ಮಣ್ಯ ಪ್ರಭು, ಅಲಪಾಠಿ ವಿಠಲೇಶ್ವರ, ಸವಿತಾ ನಾಯಕ್, ಮಂಜುಳಾ ಎಸ್., ಭಾವನಾ, ವರಲಕ್ಷ್ಮೀ ಅಲಪಾಟಿ, ಕಲಾ ಶಿಕ್ಷಕಿ ಪವಿತ್ರಾ ಸಿ., ಕಲಾವಿದ ಮತ್ತು ಕಲಾಶಾಲೆಯ ಮುಖ್ಯಸ್ಥರಾಗಿರುವ ಹರೀಶ್ ಸಾಗಾ ಅವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್!
Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.