ಆಧುನಿಕತೆ ಅಬ್ಬರಕ್ಕೆ ಮಂಕಾದ ಮಣ್ಣಿನ ಹಣತೆ
ದೀಪಾವಳಿಗೆ ಮಣ್ಣಿನ ಹಣತೆ ಮೆರುಗು!
Team Udayavani, Nov 3, 2021, 6:50 AM IST
ಕಾರ್ಕಳ: ದೀಪಗಳ ಹಬ್ಬದಲ್ಲಿ ಹಣತೆಗಳಿಗೆ ಪ್ರಾಧಾನ್ಯವಿದೆ. ಆದರೆ ಆಧುನಿಕತೆಯ ಬಿರುಗಾಳಿಗೆ ಸಿಲುಕಿ ಕುಂಬಾರರ ಮಣ್ಣಿನ ಹಣತೆ ಆರುತ್ತಿದ್ದು, ಅವರ ಬದುಕು ಕತ್ತಲಾಗುತ್ತಿದೆ. ಜೇಡಿ (ತೇವ) ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಕುಂಬಾರ ಜೀವನ ನಿರ್ವಹಣೆ ಕಷ್ಟವಾಗಿದೆ.
ದೂರದ ಸ್ಥಳಗಳಿಂದ ಜೇಡಿ ಮಣ್ಣು ತಂದು ಹದ ಮಾಡಿ ತಮ್ಮ ಕೈಚಳಕದಿಂದ ವಿವಿಧ ವಿನ್ಯಾಸದ ಹಣತೆಗಳನ್ನು ತಯಾರಿಸಿ, ಸುಟ್ಟು ಮಾರುಕಟ್ಟೆಗೆ ತಂದು 10ರಿಂದ 15 ರೂ.ಗಳಿಗೆ ಡಜನ್ ಹಣತೆ ಎಂದರೂ ಗ್ರಾಹಕರು ಖರೀದಿಸದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಸಂಗತಿ. ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಪಿಂಗಾಣಿ ಹಣತೆ, ಕ್ಯಾಂಡಲ್‌ಗಳಿಗೆ ಬಹುತೇಕ ಜನರು ಮಾರುಹೋಗಿದ್ದೇ ಕುಂಬಾರರ ಈ ಗೋಳಿಗೆ ಕಾರಣ.
ದಶಕದ ಹಿಂದೆ ದೊಡ್ಡ ಪ್ರಮಾಣದಲ್ಲಿ ಹಣತೆಗಳನ್ನು ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು ಇತ್ತೀಚಿನ ವರ್ಷಗಳಿಂದ ಸಾವಿರದೊಳಗಿನ ಲೆಕ್ಕದಲ್ಲಿ ಹಣತೆಗಳನ್ನು ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿವೆ. ಹಣತೆ ತಯಾರಿಸಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಈಗ ಬೇರೆ ವೃತ್ತಿಯತ್ತಲೂ ಮುಖ ಮಾಡಿದ್ದಾರೆ.
ಹಿಂದೆಲ್ಲ ಹಣತೆ ಮಾಡುವ ಕುಂಬಾರರ ಕುಟುಂಬಗಳಿಗೆ ದೀಪಾವಳಿ ಬಂತೆಂದರೆ ಅದೊಂದು ಅಕ್ಷರಶಃ ಅವರ ಬದುಕಿನ ಬೆಳಕಿನ ಹಬ್ಬವೇ ಆಗಿತ್ತು. ದೀಪಾವಳಿಗೆ ಎರಡು ತಿಂಗಳು ಮುಂಚೆಯೇ ಜೇಡಿ ಮಣ್ಣನ್ನು ತಂದು ಹದ ಮಾಡಿ ಮನೆಯೊಳಗೆ, ಅಂಗಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಣತೆಗಳನ್ನು ಮಾಡಿ ಬಿಸಿಲಿಗೆ ಒಣಗಲು ಇಡುತ್ತಿದ್ದರು. ಬಳಿಕ ಅದನ್ನು ಚೆನ್ನಾಗಿ ಸುಟ್ಟು ಮಾರುಕಟ್ಟೆಗೆ ತರುತ್ತಿದ್ದರು. ಗ್ರಾಹಕರಂತೂ ಒಬ್ಬೊಬ್ಬರು 30-40 ಹಣತೆಗಳನ್ನು ಒಯ್ಯುತ್ತಿದ್ದರು. ಈಗ ಅದೆಲ್ಲವೂ ಇತಿಹಾಸವಾಗಿದೆ. ಬೆರಳೆಣಿಕೆ ಸಂಖ್ಯೆಯಲ್ಲಿ ಮಣ್ಣಿನ ಹಣತೆ ಒಯ್ಯುವವರ ಸಂಖ್ಯೆಯೂ ವಿರಳವಾಗುತ್ತಿದೆ. ಕುಂಬಾರರ ಬಾಳಿಗೆ ದೀಪಾವಳಿ ಬೆಳಕು ನೀಡುವ ಹಬ್ಬವಾಗಿ ಉಳಿದಿಲ್ಲ.
ಇದನ್ನೂ ಓದಿ:ಕೊಹ್ಲಿ ಮಗು ಮೇಲೆ ಅತ್ಯಾಚಾರ ಬೆದರಿಕೆ; ದೆಹಲಿ ಪೊಲೀಸರಿಗೆ ಡಿಸಿಡಬ್ಲ್ಯೂ
ಆಧುನಿಕತೆ ಎಷ್ಟು ವೇಗವಾಗಿ ಸಾಗಿದೆ ಎಂದರೆ ಇಲ್ಲಿಯವರೆಗೂ ಮಣ್ಣಿನ ಹಣತೆ ಜಾಗವನ್ನು ಆವರಿಸಿದ್ದ ಪಿಂಗಾಣಿ ದೀಪಗಳೂ ಸಹ ಈಗ ಮರೆಯಾಗುತ್ತಿದ್ದು ಗ್ರಾಹಕರು ಎಲ್ ಇಡಿ ದೀಪಗಳಿಗೆ ಮೊರೆ ಹೋಗುತ್ತಿದ್ದಾರೆ.
ಬೂದಿ ಕಕ್ಕುವ ಬದುಕು
ಆಧುನಿಕತೆಯ ಭರಾಟೆಯ ಕಾರಣದಿಂದ ಈ ಮಣ್ಣಿನ ಹಣತೆ ಮೂಲೆ ಸೇರುತ್ತಿದ್ದು, ಕಲವೇ ಕೆಲವು ಕಟ್ಟಾ ಸಂಪ್ರದಾಯಸ್ಥರು ಮಾತ್ರ ಮಣ್ಣಿನ ಹಣತೆ ಖರೀದಿಸುವಂತಾಗಿದೆ. ಹಲವಾರು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡತ್ತ ಬಂದವರು ಈಗ ಬೇರೆ ವೃತಿಯತ್ತ ಮುಖ ಮಾಡಿದ್ದಾರೆ. ಆದರೆ ಕುಂಬಾರಿಕೆಯಿಂದ ಕುಟುಂಬ ನಿರ್ವಹಣೆ ಹೊರತುಪಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಆಗುತ್ತಿಲ್ಲ.
ತಾಲೂಕಿನಲ್ಲಿ ಸುಮಾರು 50 ಕಡೆಗಳಲ್ಲಿ ಕುಂಬಾರರು ಕುಲಕಸುಬು ವೃತ್ತಿಗಳಲ್ಲಿ ತೊಡಗಿಸಿ ಹಣತೆ, ಮಡಕೆ, ಗಡಿಗೆ, ಕುಡುಪೆ ಇನ್ನಿತರ ಗೃಹ ಬಳಕೆಯ ವಸ್ತುಗಳನ್ನು ತಯಾರಿಸುತ್ತಿದ್ದರು. ಆದರೇ ಈಗ ಸಿದ್ಧಪಡಿಸುವವರ ಸಂಖ್ಯೆ 20ಕ್ಕೆ ಇಳಿದಿದೆ. ಕಸುಬು ನಡೆಸುತ್ತಿದ್ದವರು ಈಗ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಹೊಸಬರು ಈ ವೃತ್ತಿ ನಡೆಸಲು ಮುಂದೆ ಬರುತ್ತಿಲ್ಲ. ಜತೆಗೆ ಮಣ್ಣಿನ ವಸ್ತುಗಳಿಗೆ ಪ್ರೋತ್ಸಾಹ ಕೂಡ ನಿರೀಕ್ಷೆಯಂತೆ ಸಿಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಮಣ್ಣಿನ ವಸ್ತುಗಳಿಗೆ ಬೇಡಿಕೆ ಕಮ್ಮಿಯಾಗಿದೆ. ಮಡಿಕೆ, ಸಣ್ಣ ಕುದೆ³ಗೂ ಬೇಡಿಕೆಯಿದ್ದರೂ ಮೊದಲಿನಷ್ಟಿಲ್ಲ. ಆರ್ಡರ್ ಕೊಟ್ಟವರಿಗಷ್ಟೆ ತಯಾರಿಸಿ ನೀಡುತ್ತಿದ್ದು. ಈ ಬಾರಿ 600 ಹಣತೆ ಸಿದ್ಧಪಡಿದ್ದೇವೆ ಎನ್ನುತ್ತಾರೆ ಕಳೆದ 45 ವರ್ಷಗಳಿಂದ ಹಣತೆ ಸೇರಿ ಮಣ್ಣಿನ ವಸ್ತುಗಳನ್ನು ತಯಾರಿಸುವ ಕಾರ್ಕಳ ಕಡಾರಿಯ ಅಣ್ಣು ವಸಂತಿ ಮೂಲ್ಯ ದಂಪತಿ.
ನಿರೀಕ್ಷಿತ ಲಾಭವಿಲ್ಲ
ಕುಂಬಾರ ಕುಟುಂಬಗಳು ತಯಾರಿಸುವ ಸಾಂಪ್ರದಾಯಿಕ ಮಣ್ಣಿನ ಹಣತೆಗಳು ಮಾರುಕಟ್ಟೆ ಪ್ರವೇಸುತಿಲ್ಲ. ಆರ್ಡರ್ ನೀಡಿದರಷ್ಟೆ ಸಿದ್ಧಪಡಿಸಿ ಕೊಡುವ ಕ್ರಮವಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ಪಾದನ ವೆಚ್ಚ ಹೆಚ್ಚಾಗಿ ನಿರೀಕ್ಷಿತ ಲಾಭ ದೊರಕುತ್ತಿಲ್ಲ ಎಂಬುದು ಬೇಸರ ತರಿಸುತ್ತದೆ ಎನ್ನುತ್ತಾರೆ ಕುಂಬಾರ ಸಮುದಾಯದವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Udupi: ಗೀತೆಯ ಸಂದೇಶ ಪ್ರತೀ ಮನೆಯನ್ನೂ ಪ್ರವೇಶಿಸಲಿ: ಕಾಂಚಿ ಶ್ರೀ
Udupi: ಎಂಜಿಎಂ ಕಾಲೇಜಿನಲ್ಲಿ ನ.29 ರಿಂದ ಡಿ.1ವರೆಗೆ ಅಮೃತ ಮಹೋತ್ಸವ ಸಂಭ್ರಮ
Udupi: ಗೀತಾರ್ಥ ಚಿಂತನೆ-100: ಸತ್ತಾಗ ದುಃಖ, ಸಾಯುತ್ತಿರುವಾಗಲ್ಲ!
Udupi: ಕಾಂಚೀ ಶ್ರೀಗಳಿಂದ ಶ್ರೀಕೃಷ್ಣ ಮುಖ್ಯಪ್ರಾಣ, ಅನಂತೇಶ್ವರ, ಚಂದ್ರೇಶ್ವರ ದರ್ಶನ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.