ಕೋಣಿ ರಾಜ್ಯ ಹೆದ್ದಾರಿಯಲ್ಲಿ ಕೃತಕ ಹಂಪ್ಸ್
Team Udayavani, Feb 4, 2020, 5:38 AM IST
ಬಸ್ರೂರು: ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಬಸ್ರೂರು ಮೂರುಕೈನಿಂದ ಬಸ್ರೂರಿಗೆ ಬರುವ ರಸ್ತೆಯ ಕೋಣಿಯ ಎಚ್.ಎಂ.ಟಿ. ರಸ್ತೆಯ ಹತ್ತಿರ ಹೆದ್ದಾರಿಯ ತಳಭಾಗದಲ್ಲಿ ಒಂದು ಪೈಪ್ ಹಾಕಲು ಈ ಮೊದಲು ರಸ್ತೆಯಡಿ ಹೊಂಡ ಮಾಡಿದ್ದರು. ಆಗ ರಸ್ತೆಯ ಮಧ್ಯೆ ಉದ್ದಕ್ಕೆ ಹೊಂಡ ಬಿದ್ದಿತ್ತು. ಈಗಲೂ ಹಾಗೆಯೇ ಇದೆ.
ಈ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ತಗ್ಗಾದ ರಸ್ತೆಯ ಉದ್ದದ ಹೊಂಡವನ್ನು ಜಲ್ಲಿ – ಕಲ್ಲನ್ನು ಸೇರಿಸಿ ಮುಚ್ಚಲಾಗಿತ್ತು. ಇದರ ಪರಿಣಾಮ ಈಗ ಈ ಪ್ರದೇಶ
ದಲ್ಲಿ ರಸ್ತೆಯ ಅಡ್ಡಕ್ಕೆ ಉದ್ದಕ್ಕೂ ಕೃತಕ ಹಂಪ್ಸ್ ನಿರ್ಮಾಣವಾದಂತಾಗಿದೆ. ಯಾವುದೇ ವಾಹನ ನೇರವಾಗಿ ಹೋದರೆ ಇಲ್ಲಿ ಪಲ್ಟಿ ಹೊಡೆಯುವುದು ಖಂಡಿತ ಎನ್ನುವಂತಾಗಿದೆ.
ಕೋಣಿ ರಸ್ತೆಯ ಈ “ಏರು ತಗ್ಗನ್ನು’ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ರೈಲು ಬಡಿದು ವ್ಯಕ್ತಿ ಸಾವು
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.