ಬೂದಿ ಮಳೆ: ಎನ್ಐಟಿಕೆಗೆ ಪರೀಕ್ಷೆಗಾಗಿ ಮಾದರಿ ರವಾನೆ
Team Udayavani, Aug 5, 2018, 9:19 AM IST
ಉಡುಪಿ: ಉಡುಪಿ ನಗರ ಸುತ್ತಮುತ್ತ ಆ.3ರಂದು ಬೂದಿ ಮಳೆಯಾದ ಬಗ್ಗೆ ವರದಿಯಾಗುತ್ತಿದ್ದಂತೆ, ಮಾಲಿನ್ಯ ನಿಯಂತ್ರಣಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ರೀತಿಯ ಮಳೆ ಇದೇ ಮೊದಲ ಬಾರಿ ಆಗಿದ್ದು, ನಗರದ ಜನರಲ್ಲಿ ಆತಂಕ ಸೃಷ್ಟಿಸಿದೆ. ಶನಿವಾರ ಕರಂಬಳ್ಳಿ, ದ.ಕ.ದ ಪುತ್ತೂರು ಭಾಗದಲ್ಲೂ ಬೂದಿ ಮಳೆಯಾಗಿದೆ.
ಇದರ ಮಾದರಿಯನ್ನು ಸುರತ್ಕಲ್ನ ಎನ್ಐಟಿಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 3-4 ದಿನಗಳಲ್ಲಿ ವರದಿ ದೊರೆಯಲಿದೆ. ಇದಕ್ಕೆ ಕಾರಣವೇನೆಂಬುದು ವರದಿ ಬಂದ ಅನಂತರವಷ್ಟೇ ಖಚಿತವಾಗಲಿದೆ’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ತಿಳಿಸಿದ್ದಾರೆ.
ಯುಪಿಸಿಎಲ್ಗೆ ಸೂಚನೆ
ಉಡುಪಿ ನಗರ ಭಾಗದಿಂದ 29 ಕಿ.ಮೀ ದೂರದಲ್ಲಿರುವ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾವರ ಅದಾನಿ ಯುಪಿಸಿಎಲ್ನಿಂದ ಬಂದಿರುವ ಹಾರುಬೂದಿ ಇದಾಗಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಸ್ಥಾವರದ ಕಾರ್ಯಾಚರಣೆ, ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ವಿವರ ಮಾಹಿತಿ ನೀಡಲು ಸೂಚಿಸಲಾಗಿದೆ.
ವಿಜ್ಞಾನಿಗಳಿಂದ ಮಾದರಿ ಸಂಗ್ರಹ
“ಬೂದಿಯಂತಹ ಮಾದರಿಯನ್ನು ಸಂಗ್ರಹಿಸಿದ್ದೇವೆ. ಅದನ್ನು ಹೈ ವಾಲ್ಯೂಂ ಏರ್ ಫಿಲ್ಟರ್ ಸ್ಯಾಂಪ್ಲರ್ ನೆರವಿನಿಂದ ಪತ್ತೆ ಹಚ್ಚಲು ಸಾಧ್ಯವಿದೆ’ ಎಂದು ಮಣಿಪಾಲ ಎಂಐಟಿ ಭೂ ವಿಜ್ಞಾನ ವಿಭಾಗದ ವಿಜ್ಞಾನಿಗಳಾದ ಡಾ| ಎಚ್.ಎನ್.ಉದಯ ಶಂಕರ್ ಮತ್ತು ಡಾ| ಕೆ.ಬಾಲಕೃಷ್ಣ ತಿಳಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ದಾವೆಗೆ ಸಿದ್ಧತೆ
ಉಡುಪಿ ಪರಿಸರದಲ್ಲಿ ಕಂಡು ಬಂದಿರುವ ಬೂದಿ/ಧೂಳು ಮಿಶ್ರಿತ ಮಳೆಯ ಕುರಿತು ಸಮಗ್ರವಾದ ತನಿಖೆ ನಡೆಸಬೇಕು ಎಂದು ಉಡುಪಿಯ ಪರಿಸಾರಸಕ್ತರ ತಂಡ ಶನಿವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.