ಮತದಾರರ ಮಾಹಿತಿ ಸೋರಿಕೆ ವಿಚಾರದಲ್ಲಿ ಸಮರ್ಪಕ ತನಿಖೆ: ಸಚಿವ ಡಾ| ಅಶ್ವತ್ಥನಾರಾಯಣ
Team Udayavani, Nov 27, 2022, 10:18 AM IST
ಕೋಟ: ಮತದಾರರ ಮಾಹಿತಿ ಕಳವು ವಿಚಾರವಾಗಿ ಯಾವ ಮುಚ್ಚುಮರೆ ಇಲ್ಲದೆ ತನಿಖೆ ನಡೆಯುತ್ತಿದೆ. ಅಗತ್ಯವಿದ್ದರೆ ಮತ್ತಷ್ಟು ಹೆಚ್ಚಿನ ತನಿಖೆ ಮಾಡಿಸುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ತಿಳಿಸಿದರು.
ಶನಿವಾರ ಕೋಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಎಲ್ಲ ಕಾಲದಲ್ಲೂ ಆಗುತ್ತಿರುತ್ತದೆ. ಪಟ್ಟಿಯಲ್ಲಿ ಯಾವುದೇ ತಪ್ಪು ಒಪ್ಪುಗಳಿದ್ದರೂ ಪರಿಷ್ಕರಣೆ ಆಗಬೇಕು. ನಾವು ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲಕ್ಕೆ ಆಸ್ಪದ ಕೊಡುವುದಿಲ್ಲ. ನಮ್ಮ ಸರಕಾರ, ಪಕ್ಷ ಈ ವಿಚಾರದಲ್ಲಿ ಪಾರದರ್ಶಕವಾಗಿದೆ. ಗೊಂದಲ ಉಂಟು ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ನಾವು ಜನರ ಆಶೀರ್ವಾದ ಇರುವವರು, ಯಾವುದೇ ಅಡ್ಡ ದಾರಿಯಲ್ಲಿ ನಮಗೆ ನಂಬಿಕೆ ಇಲ್ಲ ಎಂದರು.
ಕಾರ್ಯಕರ್ತರಿಲ್ಲದ ಪಕ್ಷ ಕಾಂಗ್ರೆಸ್
ಕಾರ್ಯಕರ್ತರಿಲ್ಲದ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ಸಿಗೆ ಜನರ ಆಶೀರ್ವಾದವೂ ಇಲ್ಲ. ಕಾಂಗ್ರೆಸ್ ಕುಟುಂಬದ ಪಕ್ಷ, ಚುನಾವಣ ಆಯೋಗ ಮಧ್ಯಪ್ರವೇಶ ಮಾಡಿರುವುದು ಸ್ವಾಗತ. ಮತದಾರರ ಸ್ವಾತಂತ್ರ್ಯ ರಕ್ಷಣೆಗೆ ಚುನಾವಣ ಆಯೋಗ ಇದೆ. ಮತದಾರರ ಹಕ್ಕನ್ನು ಯಾವ ಸಂದರ್ಭ ದಲ್ಲಿ ಯಾರೂ ಕಸಿಯಬಾರದು. ನನ್ನ ಕ್ಷೇತ್ರದಲ್ಲಿ ಇಂತಹ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ತನ್ನ ಹಿತ್ತಲು ನೋಡಿದರೆ ಅದರ ಹಣೆಬರಹ ತಿಳಿಯಲಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಮಹಾಪುರುಷರು ಯಾರು ಅನ್ನುವುದು ಬಯಲಾಗಬೇಕು. ಕಾಂಗ್ರೆಸ್ ಪಕ್ಷದ ನಾಯಕರ ಹಿತ್ತಲು ಬರೀ ಕೊಳಕು ಎಂದು ವಾಗ್ಧಾಳಿ ನಡಸಿದರು.
ಭಾರತೀಯತೆ ಗಡಿ ಮೀರಿದ ವಿಚಾರ
ಮಹಾರಾಷ್ಟ್ರದ ಧೋರಣೆಯನ್ನು ಖಂಡಿಸುತ್ತೇವೆ. ಇತ್ಯರ್ಥ ಆಗಿರುವ ವಿಚಾರವನ್ನು ಮತ್ತೆ ಮತ್ತೆ ಕೆದಕವುದು ಸರಿಯಲ್ಲ. ಜನರ ಭಾವನೆಯನ್ನು ಕೆರಳಿಸುವುದು ಖಂಡನೀಯ. ಇಂತಹ ವಿಚಾರಗಳಿಗೆ ನಾಗರಿಕರು ಬಲಿಯಾಗಬೇಡಿ.
ನಾವು ಜತೆಯಾಗಿ ಬದುಕಿ ಬಾಳಬೇಕು; ಪ್ರಚೋದನೆಗಳಿಗೆ ಬಲಿಯಾಗಬೇಡಿ. ನಾವೆಲ್ಲರೂ ಭಾರತೀಯರು ಎನ್ನುವ ಭಾವನೆಯಲ್ಲಿ ಮುಂದೆ ಸಾಗೋಣ. ಯಾವುದೇ ಅಹಿತಕರ ಘಟನೆ ಗಲಭೆೆ, ಗದ್ದಲಕ್ಕೆ ಅವಕಾಶವಿಲ್ಲದಂತೆ ಕಠಿನ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಶಿವಸೇನೆ ತನ್ನ ರಾಜಕೀಯ ಅಸ್ತಿತ್ವಕ್ಕೆ ಬೇಕಾಗಿರುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದೆ. ನೆಲಜಲದ ವಿಚಾರದಲ್ಲಿ ಯಾವುದೇ ಪ್ರಚೋದನೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಅಸ್ಸಾಂ: ಐರನ್, ಫೋಲಿಕ್ ಆಸಿಡ್ ಮಾತ್ರೆ ಸೇವಿಸಿದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.