ವಿಧಾನಸಭಾ ಚುನಾವಣೆ: ಶಿರೂರು ಗಡಿಭಾಗದಲ್ಲಿ ಚೆಕ್‌ಪೋಸ್ಟ್ ಪ್ರಾರಂಭ
Team Udayavani, Apr 6, 2018, 7:00 AM IST
ಬೈಂದೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶಿರೂರು ಗಡಿಭಾಗದಲ್ಲಿ ವಾಹನ ಚೆಕ್‌ಪೋಸ್ಟ್ ಪ್ರಾರಂಭಗೊಂಡಿದೆ. ಪ್ರತಿ ವಾಹನವನ್ನು ತಪಾಸಣೆ ಮಾಡಿ, ಮಾಹಿತಿ ದಾಖಲಿಸಿ ಕೊಳ್ಳಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಅಧಿಕಾರಿಗಳು, ಈಗಾಗಲೇ ಶಿರೂರು, ಸಿದ್ದಾಪುರ ಹಾಗೂ ಕೊಲ್ಲೂರಿನಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್ ಪ್ರಾರಂಭಿಸಲಾಗಿದೆ.
ವಿವಿಧ ಇಲಾಖೆಯ ಅಧಿಕಾರಿಗಳನ್ನು ಈ ಕೆಲಸಕ್ಕೆ ನೆಮಿಸಲಾಗಿದ್ದು, ಸರದಿಪ್ರಕಾರ ದಿನದ 24 ಗಂಟೆಯು ತಪಾಸಣೆ ಮಾಡಲಾಗುತ್ತಿದೆ. ವಿಶೇಷ ನಿಗಾ ವಹಿಸಲು ಪ್ರತ್ಯೇಕವಾದ ಸಿ.ಸಿ. ಕೆಮರಾ ಅಳವಡಿಸಲಾಗಿದೆ. ಅಲ್ಲದೆ ಪ್ರತಿ ಚೆಕ್‌ಪೋಸ್ಟ್‌ಗಳಲ್ಲಿ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.