ಭ್ರಷ್ಟಾಚಾರದ ವಿರುದ್ಧ ಹೋರಾಟ
Team Udayavani, Apr 14, 2018, 6:20 AM IST
ಎರಡು ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ
ಸೋತಿರುವ ದಯಾನಾಥ ಕೋಟ್ಯಾನ್ ಸದ್ಯ ಮಂಗಳೂರಿನಲ್ಲಿ ಹಿರಿಯ ನ್ಯಾಯವಾದಿಯಾಗಿದ್ದಾರೆ. ಅವರು 1978ರಲ್ಲಿ ಜನತಾ ಪಕ್ಷ ಹಾಗೂ 1985ರಲ್ಲಿ ಜನತಾ ದಳದಿಂದ ವಿಧಾನಸಭಾ ಚುನಾವಣೆಗಳಲ್ಲಿ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಭ್ರಷ್ಟಾಚಾರ, ಲಂಚದ ವಿರುದ್ಧ ತಮ್ಮ ಹೋರಾಟವನ್ನು ಈಗಲೂ ಮುಂದು ವರಿಸು ತ್ತಿರುವ ಅವರು ಫೋರಮ್ ಫಾರ್ ಜಸ್ಟಿಸ್ ಎಂಬ ಜಿಲ್ಲಾ ಮಟ್ಟದ ರಾಜಕೀಯೇತರ ಸಂಸ್ಥೆ ರಚಿಸಿಕೊಂಡು ದ.ಕ. ಜಿಲ್ಲೆಯ ಹೆಸರಾಂತರೊಂದಿಗೆ ಸೇರಿಕೊಂಡು ದುಡಿಯುತ್ತಿದ್ದಾರೆ.
ನಿಮ್ಮ ಸೋಲಿಗೆ ಯಾವ ಕಾರಣ ನೀಡುತ್ತೀರಿ?
ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೊಂಡ 1978ರ ಕಾಲವದು. ಜನಸಾಮಾನ್ಯರೆಲ್ಲರೂ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಪ್ರಧಾನಿ ಇಂದಿರಾ ಗಾಂಧಿಯವರನ್ನೇ ಬೆಂಬಲಿಸುತ್ತಿದ್ದರು. ಕಾಂಗ್ರೆಸ್ ಅಲೆ ಬಲವಾಗಿತ್ತು. ಹಾಗಾಗಿ ಆ ಚುನಾವಣೆಯಲ್ಲಿ ತಾನು ಸೋತೆ. ಭಾಸ್ಕರ ಶೆಟ್ಟಿ ಜಯಿಸಿದರು. 1985ರಲ್ಲಿ ಬಿಜೆಪಿ ಬಾಹ್ಯ ಬೆಂಬಲದೊಂದಿಗೆ ಜನತಾದಳ ಸರಕಾರವಿತ್ತು. ಆದರೂ ಬಿಜೆಪಿ, ಜನತಾ ದಳಗಳೂ ತಮ್ಮ ತಮ್ಮ ಅಭ್ಯರ್ಥಿಗಳನ್ನು ಹೋರಾಟಕ್ಕೆ ಇಳಿಸಿದ್ದವು. ಹಾಗಾಗಿ ಇಲ್ಲಿ ಗೆಲ್ಲುವ ಕುದುರೆ ಕಾಂಗ್ರೆಸ್ ಎಂದೇ ಬಿಂಬಿತವಾಗಿತ್ತು. ವಸಂತ ಸಾಲ್ಯಾನ್ ಗೆದ್ದಿದ್ದರು. ನನ್ನ ಸೋಲಿನ ಅಂತರ 10,000ಕ್ಕೂ ಅಧಿಕವಾಗಿತ್ತು. ಭಾಸ್ಕರ ಶೆಟ್ಟಿ ಅವರಿಗೂ ನನಗೂ ಹೆಚ್ಚು ಕಡಿಮೆ ಸರಿಸಮಾನ ಮತ ಬಿದ್ದಿದ್ದವು. ಮತದಾನದ ದಾಖಲೆಗಳಲ್ಲಿ ಇಂದಿಗೂ ನನ್ನದು ಎರಡನೇ ಸ್ಥಾನವಿದೆ. ಆದರೆ ಫಲಿತಾಂಶ ಮಾಧ್ಯಮಗಳಲ್ಲಿ ಬಂದಾಗ ನಾನು 3ನೇ ಸ್ಥಾನಕ್ಕೆ ಜಾರಿದ್ದೆ !
ಅಂದಿನ ಚುನಾವಣೆಗಳಲ್ಲೂ
ಹಣ, ಮದ್ಯ ಆಮಿಷಗಳ ಪ್ರಭಾವ ಇತ್ತೇ?
ಕಾಂಗ್ರೆಸ್ ಹೊರತು ಪಡಿಸಿ ಇತರೆಲ್ಲ ಪಕ್ಷಗಳು ಚುನಾವಣೆ ಗಳಲ್ಲಿ ಗೆಲ್ಲಬೇಕಾದರೆ ಹಣ ಖರ್ಚು ಮಾಡಲೇ ಬೇಕಿತ್ತು. ಹೆಂಡ ಹಾಗೂ ಹಣ ಹಂಚುವುದೂ ಇಂದಿಗೂ ಚುನಾವಣೆ ಯಲ್ಲಿ ಪ್ರಮುಖ ಸಂಗತಿಗಳು. ನನ್ನಲ್ಲಿ ಹಣ ಬಲ ಇರಲಿಲ್ಲ.
ಇಂದಿನ ಚುನಾವಣೆಯಲ್ಲಿ ಯಾವುದಕ್ಕೆ ಮಣೆ ?
ಜಾತಿ ರಾಜಕಾರಣ ಪ್ರಮುಖ ಪಾತ್ರ ವಹಿಸುತ್ತದೆ. ಸರಕಾರದ ಅಭಿಪ್ರಾಯವೂ ಪ್ರಮುಖವಾಗಿರುತ್ತದೆ. ಅಭ್ಯರ್ಥಿಗಳೂ ಬಲಶಾಲಿಗಳಾಗಿರಬೇಕು.
ಯುವ ಜನತೆಯ ಬಗ್ಗೆ ನಿಮ್ಮ ಅಭಿಪ್ರಾಯ ?
ಯುವ ಜನತೆ ಮೇಲೆ ಬಹಳಷ್ಟು ವಿಶ್ವಾಸವಿರಿಸಿದ್ದೇನೆ. ನಮ್ಮ ಫೋರಮ್ ಫಾರ್ ಜಸ್ಟೀಸ್ ಮೂಲಕ ಮಂಗಳೂರಿನ ಎಲ್ಲ ಹಾಗೂ ಸುರತ್ಕಲ್ ಗೋವಿಂದದಾಸ ಕಾಲೇಜಿನ ವಿದ್ಯಾರ್ಥಿ ಗಳಿಗೆ ಭ್ರಷ್ಟಾಚಾರ ನಿರ್ಮೂಲನೆ, ಉತ್ತಮ ಆಡಳಿತ ವ್ಯವಸ್ಥೆಯ ಕಲ್ಪನೆಗಳ ಕುರಿತಾಗಿ ಮಾಹಿತಿಗಳನ್ನು ನೀಡು ತ್ತಿದ್ದೇವೆ. ಉತ್ತಮ ಸ್ಪಂದನೆಯೂ ದೊರೆಯುತ್ತಿದೆ. ಇಂದಲ್ಲ ವಾದರೂ ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಆಡಳಿತವನ್ನು ನಾವು ಪಡೆಯಬಲ್ಲೆವೆಂಬ ವಿಶ್ವಾಸವಿದೆ.
– ಆರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.