“ನಾವು ಓಟು ಹಾಕುತ್ತೇವೆ ಆದರೆ ನೀವು ಪ್ರತಿಜ್ಞೆ ಮಾಡುತ್ತೀರಾ?’
Team Udayavani, Apr 14, 2018, 7:30 AM IST
ಕುಂದಾಪುರ: ನಾವು ನಿಮಗೆ ಮತ ಹಾಕುತ್ತೇವೆ. ಆದರೆ ನೀವು ಅದಕ್ಕೂ ಮೊದಲು ನಮಗೊಂದು ಪ್ರತಿಜ್ಞೆ ಮಾಡುತ್ತೀರಾ ಇದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಣಕ್ಕಿಳಿಯಲು ಸಜ್ಜಾಗಿರುವ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ಸಮಿತಿಯು ಒಂದು ವಿಶಿಷ್ಟ ಪ್ರತಿಜ್ಞಾ ವಿಧಿಯನ್ನು ಸಿದ್ದಪಡಿಸಿ, ಇದಕ್ಕೆ ಬದ್ಧರಾದರೆ ಮಾತ್ರ ನಾವು ನಿಮಗೆ ಓಟು ಹಾಕುತ್ತೇವೆ ಎನ್ನುವುದನ್ನು ಮತದಾರರ ಮೂಲಕ ವ್ಯಕ್ತಪಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ಸಮಿತಿಯು ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದಂತೆ ಎಲ್ಲ ಕಡೆಗಳಲ್ಲಿ ಮತದಾನದ ಜಾಗೃತಿ ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಆ ಕಾರ್ಯಕ್ರಮಗಳಲ್ಲಿ ವ್ಯಕ್ತವಾದ ಜನಾಭಿಪ್ರಾಯವನ್ನು ಆಧರಿಸಿ ಈ ಪ್ರತಿಜ್ಞಾ ವಿಧಿಯನ್ನು ಸಿದ್ದಪಡಿಸಿದ್ದು, ಇದನ್ನು ಈಗ ಅಭ್ಯರ್ಥಿಗಳ ಮುಂದಿಡಲಾಗುತ್ತಿದೆ.
ಈ ಅಂಶಗಳಿಗೆ ಬದ್ಧರಾಗಿರಿ
- ಹಣ, ಹೆಂಡ, ವಸ್ತುಗಳನ್ನು ಹಂಚದೇ, ಯಾವುದೇ ಆಸೆ-ಆಮಿಷಗಳನ್ನು ಜನರಿಗೆ ಒಡ್ಡದೇ ಪ್ರಾಮಾಣಿಕ, ಚೊಕ್ಕ ಚುನಾವಣೆ ನಡೆಸುತ್ತೇನೆ.
- ಎಲ್ಲರನ್ನೊಳಗೊಂಡ ಜನ ಭಾಗವಹಿಸುವಿಕೆಗೆ ಬೆಂಬಲ ನೀಡುತ್ತೇನೆ ಹಾಗೂ ಜನಪರ ಅಭಿವೃದ್ಧಿಯಲ್ಲಿ ಪಕ್ಷ ರಾಜಕೀಯ ಮಾಡುವುದಿಲ್ಲ.
- ದೇಶದ ಸಂವಿಧಾನಕ್ಕೆ ಹಾಗೂ ಅದರ ರಕ್ಷಣೆ, ಅನುಷ್ಠಾನಕ್ಕೆ ಬದ್ಧನಾಗಿರುತ್ತೇನೆ.
- ಹಕ್ಕು, ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಬದ್ಧನಾಗಿರುತ್ತೇನೆ.
- ಯಾವುದೇ ಸಂದರ್ಭದಲ್ಲೂ, ಯಾವುದೇ ಕಾರಣಕ್ಕೂ ಜನರನ್ನು ಹಣ ಕೊಟ್ಟು ಕೊಂಡುಕೊಳ್ಳುವುದಿಲ್ಲ.
- ಮಹಿಳೆ ಮತ್ತು ಮಕ್ಕಳನ್ನು ಒಳಗೊಂಡ ಶೋಷಿತ ವರ್ಗದವರ ಬಗ್ಗೆ ಗೌರವ ಮತ್ತು ಕಾಳಜಿ ಉಳ್ಳವನಾಗಿದ್ದು, ಅವರ ಪರವಾಗಿ, ಅವರ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತೇನೆ.
- ಜಾತಿ, ಮತ, ಧರ್ಮ, ಪ್ರಾದೇಶಿಕ, ಲಿಂಗ, ವಯಸ್ಸಿನ ಬೇಧ ಮಾಡದೇ ಎಲ್ಲರ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಹಾಗೂ ಪಾರದರ್ಶಕ ಆಡಳಿತ ನಡೆಸುತ್ತೇನೆ.
ಅಭ್ಯರ್ಥಿಗಳೇ ಪ್ರತಿಜ್ಞೆ ಮಾಡಿ
“ಭಾರತ ದೇಶದ ಪ್ರಜೆಯಾದ ನಾನು, ಈ ದೇಶದ ಸಂವಿಧಾನವನ್ನು ಗೌರವಿಸುವುದಲ್ಲದೇ, ಸಂವಿಧಾನದ ಆಶಯಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸುವಲ್ಲಿ ಬದ್ಧನಾಗಿರುತ್ತೇನೆ. ಅದಲ್ಲದೇ ಈಗ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು, ಪ್ರಜಾಪ್ರಭುತ್ವದ ನೆಲೆಯಲ್ಲಿ ಜನರ ಒಡಗೂಡಿ ಪ್ರಾಮಾಣಿಕವಾಗಿ, ಯಾವುದೇ ರೀತಿಯ ಸ್ವಂತ ಹಿತಾಸಕ್ತಿ ತೋರದೇ, ಜನರನ್ನು ಆಸೆ-ಆಮಿಷಗಳಿಗೆ ಒಡ್ಡದೇ, ಜನರೊಂದಿಗೆ ಸೇರಿ ಸೇವೆ ಸಲ್ಲಿಸುವುದಕ್ಕೋಸ್ಕರ, ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವಲ್ಲಿ ಯಾವುದೇ ಪಕ್ಷ ರಾಜಕೀಯ ಮಾಡುವುದಿಲ್ಲ ಎಂಬ ದೃಢ ನಿಲುವಿನೊಂದಿಗೆ ಜನರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದೇನೆ’.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.