Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Team Udayavani, Dec 1, 2024, 4:02 PM IST
ಮಣಿಪಾಲ: ಉದಯವಾಣಿಯ ಮಣಿಪಾಲ ಆವೃತ್ತಿಯಲ್ಲಿ ಸಹಾಯಕ ಸುದ್ದಿ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ದಾಮೋದರ ಕಕ್ರಣ್ಣಾಯ (75) ಅವರು ಡಿ. 1ರಂದು ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾ ರೆ.
35 ವರ್ಷಗಳ ವೃತ್ತಿ ಜೀವನ
ಮೂಲತಃ ದ.ಕ. ಜಿಲ್ಲೆಯ ಉಪ್ಪಿನಂಗಡಿ ಬಂದಾರು ಬರಮೇಲು ಗ್ರಾಮದ ನಿವಾಸಿಯಾಗಿದ್ದ ಅವರು ಹಲವು ವರ್ಷಗಳಿಂದ ಮಣಿಪಾಲದಲ್ಲಿ ವಾಸವಾಗಿದ್ದರು. ಸುಮಾರು 35 ವರ್ಷ ಉದಯವಾಣಿ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದರು. ಉಜಿರೆಯ ಎಸ್‌ಡಿಎಂನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು.
ಪದವಿಯಲ್ಲಿರುವಾಗ “ಉದಯವಾಣಿ’ಯು ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಡಾ| ಎಸ್.ಎಲ್. ಭೈರಪ್ಪನವರ “ವಂಶವೃಕ್ಷ’ ಕಾದಂಬರಿಯ ಪಾತ್ರಗಳ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ “ಕಾತ್ಯಾಯಿನಿ’ ಪಾತ್ರದ ಬಗ್ಗೆ ಬರೆದ ದಾಮೋದರ ಕಕ್ರಣ್ಣಾಯ ಅವರು ಪ್ರಥಮ ಬಹುಮಾನ ಗಳಿಸಿದ್ದರು.
“ಉದಯವಾಣಿ’ಯ ಸಂಪಾದಕೀಯ ವಿಭಾಗದಲ್ಲಿ 1972ರಲ್ಲಿ ಉಪಸಂಪಾದಕರಾಗಿ ಸೇವೆಗೆ ಸೇರಿದ ಕಕ್ರಣ್ಣಾಯ ಅವರು ಬಳಿಕ ಮುಖ್ಯ ಉಪಸಂಪಾದಕರಾದರು. 2008ರಲ್ಲಿ ಸಹಾಯಕ ಸುದ್ದಿ ಸಂಪಾದಕರಾಗಿ ನಿವೃತ್ತಿ ಹೊಂದಿದರು.
ಪಿಟಿಐ, ಯುಎನ್‌ಐ ಸುದ್ದಿ ಸಂಸ್ಥೆಗಳ ಆಂಗ್ಲ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸುವ ಮತ್ತು ಪುಟ ವಿನ್ಯಾಸವನ್ನು ಮಾಡುವ ಕೆಲಸದಲ್ಲಿ ಸುದೀರ್ಘ ಕಾಲ ತೊಡಗಿಸಿಕೊಂಡಿದ್ದರು. ಹಲವು ಲೇಖನಗಳನ್ನು ಬರೆದಿದ್ದರಲ್ಲದೆ, ಹೊಸ ಹೊಸ ಪ್ರಯೋಗಗಳನ್ನು ನಡೆಸಿದ್ದರು.
ಇದನ್ನೂ ಓದಿ: Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.