ಮಳೆಗಾಲ ಆರಂಭದಲ್ಲೇ ಮೆಸ್ಕಾಂಗೆ 32.10 ಲ.ರೂ.ನಷ್ಟ
Team Udayavani, Jun 17, 2019, 5:34 AM IST
ಉಡುಪಿ: ಈ ಬಾರಿಯ ಮಳೆಗಾಲದ ಆರಂಭದಲ್ಲೇ ಮೆಸ್ಕಾಂ ಇಲಾಖೆಗೆ 32.10 ಲ.ರೂ. ನಷ್ಟ ಉಂಟಾಗಿದೆ.
ವಿದ್ಯುತ್ ಕಂಬಗಳ ಮುರಿತ, ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿರುವುದು ಮೊದಲಾದವುಗಳಿಗೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಜೂ.1ರಿಂದ 12ರ ವರೆಗೆ ಗಾಳಿ, ಮಳೆ, ಸಿಡಿಲು, ಮರ ಬಿದ್ದು ಮೆಸ್ಕಾಂನ 276ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದಿವೆ. ಸುಮಾರು 35ರಷ್ಟು ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ. ಸುಮಾರು 8.42ಕಿ.ಮೀ.ನಷ್ಟು ವಿದ್ಯುತ್ ತಂತಿಗಳು ಹಾನಿಗೊಂಡಿವೆ.
ಎಲ್ಲೆಲ್ಲಿ ನಷ್ಟ?
ಮೆಸ್ಕಾಂನ ಉಡುಪಿ ಸಬ್ ಡಿವಿಜನ್‌ನಲ್ಲಿ ಭಾರಿ ಗಾಳಿ ಮಳೆಗೆ ಸುಮಾರು 6 ವಿದ್ಯುತ್ ಕಂಬಗಳು ಮುರಿದಿವೆ. 3 ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿವೆ.
ಮಣಿಪಾಲ ಸಬ್ ಡಿವಿಜನ್‌ಗೆ ಸಂಬಂಧಿಸಿದಂತೆ ಮಣಿಪಾಲ, ಪ್ರಗತಿ ನಗರ, ಹಿರಿಯಡಕ, ಪರ್ಕಳ, ಅಲೆವೂರು ಹಾಗೂ ಮೂಡುಬೆಳ್ಳೆ ಸೆಕ್ಷನ್‌ಗಳಲ್ಲಿ ಸುಮಾರು 50 ಕಂಬಗಳು ಮುರಿದಿದ್ದು, 7 ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟಿವೆ. ಬ್ರಹ್ಮಾವರ ಸಬ್ ಡಿವಿಜನ್ ಪೇತ್ರಿಯಲ್ಲಿ ಒಂದು ವಿದ್ಯುತ್ ಕಂಬಕ್ಕೆ
ಹಾನಿಯಾಗಿದ್ದು, 3 ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ಕಾರ್ಕಳ ಸಬ್ ಡಿವಿಜನ್‌ನಲ್ಲಿ ಒಟ್ಟು 1 ವಿದ್ಯುತ್ ಪರಿವರ್ತಕಗಳು ಹಾಗೂ ಸುಮಾರು 36ಕ್ಕೂ ಅಧಿಕ ವಿದ್ಯುತ್ ಕಂಬಗಳು ಗಾಳಿ, ಮಳೆ, ಸಿಡಿಲು, ಮರ ಬಿದ್ದು ಹಾನಿಗೊಂಡಿವೆ.
ಮುಂಗಾರು ಮಳೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದ್ದ ಮೆಸ್ಕಾಂ ಈಗಾಗಲೇ ತುಂಡಾದ ವಿದ್ಯುತ್ ಕಂಬಗಳು, ಹಾಳಾದ ವಯರ್ ಹಾಗೂ ವಿದ್ಯುತ್ ಪರಿವರ್ತಕಗಗಳನ್ನು ಬದಲಾಯಿಸಲಾಗಿದೆ ಎಂದು ಮೆಸ್ಕಾಂನ ಜಿಲ್ಲಾ ಅಧೀಕ್ಷಕ ಅಭಿಯಂತರ ನರಸಿಂಹ ಪಂಡಿತ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Jharkhand; ಇಂಡಿಯಾ ಒಕ್ಕೂಟದ “ಸಪ್ತ ಗ್ಯಾರಂಟಿ’!: ಮಹಿಳೆಯರಿಗೆ ಮಾಸಿಕ 2,500 ರೂ.
T-Shirt: ಫ್ಲಿಪ್‌ಕಾರ್ಟ್, ಮೀಶೋದಲ್ಲಿ ಲಾರೆನ್ಸ್ ಬಿಷ್ಣೋಯ್ ಟೀಶರ್ಟ್ ಮಾರಾಟ: ಆಕ್ರೋಶ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.