ಆತ್ರಾಡಿ-ಶಿರ್ವ-ಬಜಪೆ ರಾಜ್ಯ ಹೆದ್ದಾರಿ: ಉದ್ಘಾಟನೆಗೆ ಮೊದಲೇ ಬಿರುಕು:
Team Udayavani, Jun 5, 2017, 3:35 PM IST
ಶಿರ್ವ: ಆತ್ರಾಡಿ – ಶಿರ್ವ – ಬಜಪೆ ರಾಜ್ಯ ಹೆದ್ದಾರಿಯ ಶಿರ್ವ ನ್ಯಾರ್ಮ ಬಳಿ ಸುಮಾರು 70 ಲ.ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಸೇತುವೆಯು ಉದ್ಘಾಟನೆಗೆ ಮೊದಲೇ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು ಅಪಾಯದ ಭೀತಿ ಎದುರಾಗಿದೆ.
ಪ್ರಶ್ನಿಸುವಂತಾಗಿದೆ
ಸೇತುವೆಯ ಕಾಮಗಾರಿ ಮುಗಿದು ಸಂಚಾರಕ್ಕೆ ಅನುವು ಮಾಡಿಕೊಟ್ಟ ಕೇವಲ 15 ದಿನಗಳಲ್ಲಿಯೇ ವಾಹನಗಳ ಓಡಾಟಕ್ಕೆ ಸೇತುವೆಯ ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದ್ದು ಕಾಮಗಾರಿಯ ಗುಣಮಟ್ಟ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ನಾಗರಿಕರು ಪ್ರಶ್ನಿಸುವಂತಾಗಿದೆ.
ಎಡೆಬಿಡದೆ ಚಲಿಸುತ್ತಿವೆ
ಶಿರ್ವ ಪರಿಸರದಲ್ಲಿ ಹಲವಾರು ವಿದ್ಯಾಸಂಸ್ಥೆಗಳಿದ್ದು ದಿನವೊಂದಕ್ಕೆ ಸಾವಿರಾರು ಘನ ಹಾಗೂ ಲಘು ವಾಹನಗಳು ಈ ಸೇತುವೆಯಲ್ಲಿ ಎಡೆಬಿಡದೆ ಚಲಿಸುತ್ತಿವೆ. ವಾಹನಗಳೊಂದಿಗೆ ಸಾರ್ವಜನಿಕರು ಮತ್ತು ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯ ಓಡಾಡುತ್ತಿದ್ದಾರೆ. ತಿಂಗಳುಗಳ ವರೆಗೆ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಇದ್ದು ಉದಯವಾಣಿಯ ವರದಿಯಿಂದಾಗಿ ತರಾತುರಿಯಲ್ಲಿ ಸೇತುವೆಯ ಇಕ್ಕೆಲದ ಕಾಮಗಾರಿಯನ್ನು ಮುಗಿಸಲಾಗಿತ್ತು. ಮೊದಲ ಮಳೆಗೇ ಮಣ್ಣು ಸಿಂಕ್ ಆಗಿ ವಾಹನಗಳು ಸೇತುವೆಯ ಮೇಲೆ ಬರುವಾಗ ಜರ್ಕ್ ಹೊಡೆದು ಬಿರುಕು ಬಿಡುವ ಸಾಧ್ಯತೆ ಇದೆ.
ಬ್ರಿಟಿಷರ ಕಾಲದ ಸೇತುವೆ ಇತ್ತು
ಈ ಹಿಂದೆ ಇದೇಜಾಗದಲ್ಲಿ ಬ್ರಿಟಿಷರ ಕಾಲದ ಸೇತುವೆಯೊಂದಿದ್ದು ಹೊಸ ಸೇತುವೆಯ ನಿರ್ಮಿಸುವಾಗ ಅದನ್ನು ಒಡೆದು ಹಾಕಲು ಗುತ್ತಿಗೆದಾರರಿಗೆ ತಿಂಗಳೇ ಬೇಕಾಗಿದೆ ಎಂಬುದನ್ನು ಇಲ್ಲಿ ಸ್ಮರಿಬಹುದು. ಆದರೆ ಹೊಸ ಸೇತುವೆಯ ಕಾಮಗಾರಿ ನಡೆದು ಸಂಚಾರಕ್ಕೆ ಬಿಟ್ಟುಕೊಟ್ಟ ಕೆಲ ದಿನದಲ್ಲಿಯೇ ಬಿರುಕು ಬಿಟ್ಟಿದ್ದು ಕಾಮಗಾರಿಯ ಉತ್ಕೃಷ್ಟತೆಯನ್ನು ಜನ ಪ್ರಶ್ನೆ ಮಾಡುವಂತಾಗಿದೆ.
ಮಣ್ಣು ಕುಸಿಯುವ ಭೀತಿ
ಸೇತುವೆಯ ಇಕ್ಕೆಲದಲ್ಲಿ ಮಣ್ಣು ತುಂಬಿಸಿದ್ದು ತಡೆಗೋಡೆ ನಿರ್ಮಿಸದೇ ಇರುವುದರಿಂದಾಗಿ ಮಳೆಗಾಲದಲ್ಲಿ ಮಣ್ಣು ಕುಸಿಯುವ ಭೀತಿಯೂ ಎದುರಾಗಿದೆ.
ನಿಯಮವನ್ನು ಗಾಳಿಗೆ ತೂರಿ ಕಾಮಗಾರಿ
ರಾಜ್ಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಿಸುವಾಗ ಆದಷ್ಟು ನೇರವಾಗಿ ರಸ್ತೆ ನಿರ್ಮಿಸುವುದು ಕ್ರಮ. ಆದರೆ ಇಲ್ಲಿ ಸರಕಾರಿ ಜಾಗವಿದ್ದರೂ ನಿಯಮವನ್ನು ಗಾಳಿಗೆ ತೂರಿ ಇಲಾಖೆಯವರು/ಗುತ್ತಿಗೆದಾರರು ಓರೆಕೋರೆಯಾಗಿ ಹೆದ್ದಾರಿ ರಸ್ತೆಯನ್ನು ನಿರ್ಮಿಸಿದ್ದಾರೆ. ಅಸಮರ್ಪಕ ರಾಜ್ಯ ಹೆದ್ದಾರಿಯ ಕಾಮಗಾರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಸಾರ್ವಜನಿಕರ ತೆರಿಗೆ ಹಣ ಪೋಲು
ಕಳಪೆ ಕಾಮಗಾರಿಯಿಂದ ಕಾಮಗಾರಿ ಮುಗಿದ ಕೆಲ ದಿನಗಳಲ್ಲಿಯೇ ಸೇತುವೆ ಬಿರುಕು ಬಿಟ್ಟಿರುವುದು ಬೇಸರದ ವಿಷಯ. ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗುತ್ತಿರುವುದು ಖೇದಕರ . ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕಾಮಗಾರಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡರೆ ಉತ್ತಮ. ಎಂದು ಅನಿವಾಸಿ ಭಾರತೀಯ ಉದ್ಯಮಿ ರಿಚರ್ಡ್ ಪೌಲ್ ಫೆರಾವೋ ಶಿರ್ವ ಅವರು ಆರೋಪಿಸಿದ್ದಾರೆ.
– ಸತೀಶ್ಚಂದ್ರ ಶೆಟ್ಟಿ ಶಿರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್‌ಲೈನ್‌ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್‌ಗೆ ಲಕ್ಷಾಂತರ ರೂ. ವಂಚನೆ
Udupi: ಹೂಡೆ ಬೀಚ್‌ನಲ್ಲಿ ಪ್ರವಾಸಿಗರ ಮೇಲೆ ಸ್ಥಳೀಯರಿಂದ ಹಲ್ಲೆ
Hiriydaka: ಒಟಿಪಿ ನೀಡಿ 5 ಲಕ್ಷ ರೂ. ಕಳೆದುಕೊಂಡ ಯುವತಿ
MUST WATCH
ಹೊಸ ಸೇರ್ಪಡೆ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.