ಹೈನುಗಾರರ ಬದುಕಿಗೆ ಹುರುಪು ತುಂಬುವ ಪ್ರಯತ್ನ
ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘ
Team Udayavani, Feb 8, 2020, 4:40 AM IST
ಗ್ರಾಮೀಣ ಅಭಿವೃದ್ಧಿಯಲ್ಲಿ ಹೈನುಗಾರಿಕೆಯದ್ದು ಮಹತ್ತರ ಪಾತ್ರ. ಸ್ಥಳೀಯರಲ್ಲಿ ಈ ಉದ್ಯಮ ಪ್ರಜ್ಞೆ ಮೂಡಿಸಿ ಬೆಳೆಸುವಲ್ಲಿ ಶ್ರಮಿಸಿದ ಸಂಸ್ಥೆಗಳೆಂದರೆ ಹಾಲು ಉತ್ಪಾದಕರ ಸಂಘಗಳು. ಸ್ಥಳೀಯ ಆರ್ಥಿಕತೆಗೂ ಚೇತನ ತುಂಬಿದ ಹೆಗ್ಗಳಿಕೆ ಈ ಸಂಘಟನಾ ಪ್ರಯತ್ನಕ್ಕೆ ಸಲ್ಲಬೇಕು. ಈ ಯಶೋಗಾಥೆಯ ದಾಖಲೀಕರಣವೇ ಕ್ಷೀರ ಕಥನ. ಸುಮಾರು 30 ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಘಗಳ ಅಭಿವೃದ್ಧಿ ಕಥನವಿದು.
ಕಟಪಾಡಿ: ಈ ಸಂಘ ಆರಂಭ ವಾಗಿದ್ದು ಹಾಲು ಉತ್ಪಾದಕರನ್ನು ಸಂಘಟಿ ಸುವ ಸಲುವಾಗಿ. ಈಗ ಸದಸ್ಯರ ಸ್ನೇಹ ಸಂಘ ವಾಗಿ ಬದಲಾಗಿದೆ. ಅದೇ ಇದರ ವಿಶೇಷ. ಕಟಪಾಡಿ ಹಾಲು ಉತ್ಪಾದಕರ ಸಹ ಕಾರಿ ಸಂಘ ಆರಂಭವಾದದ್ದು 1974 ರಲ್ಲಿ. ಡಾ| ಕೆ.ಜೆ. ಕಿಣಿ ಅವರ ನೇತೃತ್ವದಲ್ಲಿ ಅವರದ್ದೇ ಜಾಗದಲ್ಲಿ ಸುಮಾರು 15 ಮಂದಿ ಸದಸ್ಯರೊಂದಿಗೆ ಪ್ರಾರಂಭ ವಾಯಿತು. ಮಣಿಪಾಲದ ಕೆನರಾ ಮಿಲ್ಕ್ ಯೂನಿಯನ್ ಅಡಿ ಕಾರ್ಯಾಚರಿಸುತ್ತಿತ್ತು. ಕೃಷಿ ಕಾಯಕದ ಜತೆ ಹೆಚ್ಚುವರಿ ಆದಾಯ ಗಳಿಸುವ ಮೂಲಕ ಜೀವನ ಮಟ್ಟ ಸುಧಾರಣೆ ಪ್ರಮುಖ ಉದ್ದೇಶವಾಗಿತ್ತು. 1990ರಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟಕ್ಕೆ ಸೇರ್ಪಡೆಗೊಂಡ ಸಂಘ ವನ್ನು ಕೆ. ಭೋಜರಾಜ ಶೆಟ್ಟಿ ಅಧ್ಯಕ್ಷರಾಗಿ ಮುನ್ನಡೆಸಿದರು. 2009 ರಿಂದ ವಿಠuಲ ಜೆ. ಸೇರಿಗಾರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
1000 ಲೀಟರ್ ಗುರಿ
ಪ್ರಸ್ತುತ ಸಂಘವು ತನ್ನದೇ ಕಟ್ಟಡವನ್ನು ಹೊಂದಿದೆ. ನಿತ್ಯವೂ ಸುಮಾರು 740 ಲೀ. ಹಾಲನ್ನು ಸಂಗ್ರಹಿಸುತ್ತಿದ್ದು, ಕಟಪಾಡಿಯಲ್ಲಿ ಹಾಲು ಉತ್ಪಾದಕರ ಸಂಘವು ಪ್ರಸ್ತುತ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಪ್ರಸ್ತುತ ಪ್ರತಿನಿತ್ಯ 740 ಲೀ.ಹಾಲನ್ನು ಸಂಗ್ರಹಿಸುತ್ತಿದ್ದು , 200 ಮಂದಿ ಸದಸ್ಯರನ್ನು ಹೊಂದಿದೆ. ಒಂದು ಸಾವಿರ ಲೀಟರ್ ಹಾಲು ಸಂಗ್ರಹಿಸುವ ಗುರಿ ಹೊಂದಿದೆ. ಸುಮಾರು 40,970 ರೂ. ಪಾಲು ಬಂಡವಾಳ ಹೊಂದಿದ್ದು, ವಾರ್ಷಿಕವಾಗಿ 5.80ಲಕ್ಷ ರೂ.ಗೂ ಆದಾಯ ಹೊಂದಿದೆ. ಈಗ ಅಶೋಕ್‌ರಾವ್ ಅಧ್ಯಕ್ಷರಾಗಿದ್ದು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸುಂದರ ಸೇರಿಗಾರ ಕಾರ್ಯ ನಿರ್ವಹಿಸುತ್ತಿದ್ದಾರೆ.
ನೇರ ಬ್ಯಾಂಕ್ ಖಾತೆಗೆ ಜಮೆ
ಸದಸ್ಯರಿಗೆ ಹಾಲಿನ ದರವನ್ನು ಕಟಪಾಡಿ ಸಿಎ ಬ್ಯಾಂಕ್ ಮೂಲಕ ಪ್ರತಿ 10 ದಿನಗಳಿಗೊಮ್ಮೆ ಅವರ ಖಾತೆಗೆ ಹಣವನ್ನು ಪಾವತಿಸಲಾಗುತ್ತಿದೆ. ಪ್ರತಿ ಸದಸ್ಯರಿಗೂ ಪ್ರೋತ್ಸಾಹ ಧನ ನೀಡಲಾಗುತ್ತದೆ. ಹಾಲು ಪೂರೈಸುವ ಸದಸ್ಯರಿಗೆ ಬೋನಸ್, ಡಿವಿಡೆಂಡ್ ಜತೆ ಅತಿ ಹೆಚ್ಚು ಹಾಲು ಪೂರೈಸಿದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವನ್ನು ನೀಡಿ ಅಭಿನಂದಿಸುತ್ತಿದೆ.
ಪ್ರಶಸ್ತಿ
2001-02ನೇ ಸಾಲಿನ ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡಿದ ಸಂಘ ಎಂಬ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟವು ನೀಡಿ ಗೌರವಿಸಿತ್ತು. ಈ ಬಾರಿ ಕಟಪಾಡಿಯಲ್ಲಿ ನಡೆದ ಜಾನುವಾರು ಮೇಳದಲ್ಲಿ ಭಾಗವಹಿಸಿದ 179 ದನಗಳ ಪೈಕಿ 94 ಸಂಘದ ಸದಸ್ಯರಾಗಿದ್ದವು. ಐದು ಸದಸ್ಯರ ದನಗಳು ಬಹುಮಾನ ಗೆದ್ದವು. ನಿರ್ದೇಶಕ ಡೋಲ್ಫಿ ಪಿರೇರಾ ಅವರ ದನವು ಚಾಂಪಿಯನ್ ಹಸುವಾಗಿ ಪ್ರಶಸ್ತಿಯನ್ನು ಪಡೆದಿತ್ತು.
ಮೂಡಬೆಟ್ಟವಿನ ಶಾಖೆಯನ್ನು ಸ್ವಂತ ಕಟ್ಟಡದಲ್ಲಿ ಕಾರ್ಯಾ ಚರಿಸುವಂತೆ ಗುರಿಯನ್ನು ಇರಿಸಲಾಗಿದೆ. ಒಂದು ಸಾವಿರ ಲೀಟರ್ ಹಾಲು ಸಂಗ್ರಹಿಸುವುದು ನಮ್ಮ ಗುರಿ. ಅದನ್ನು ಈಡೇರಿಸಿಕೊಳ್ಳುವತ್ತ ಕಾಯೋನ್ಮುಖ ರಾಗಿದ್ದೇವೆ. – ಅಶೋಕ್ ರಾವ್, ಅಧ್ಯಕ್ಷ, ಕಟಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ
- ಡೋಲ್ಫಿ ಪಿರೇರಾ,
ಹದಿನೈದು ವರ್ಷಗಳಿಂದ ಹಾಲು ಪೂರೈಸುತ್ತಿದ್ದೇನೆ. ಹೆಚ್ಚು ಹಾಲು ನೀಡುತ್ತಿದ್ದು, ಕೃಷಿಯೊಂದಿಗೆ ಹೈನುಗಾರಿಕೆಯು ಕುಟುಂಬಕ್ಕೆ ಆಧಾರವಾಗಿದೆ.
ನಾಯ್ಕ ತೋಟ, ಕುರ್ಕಾಲು
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ತನ್ನ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸದಸ್ಯರಿಗೆ ಅವಘಡ ಉಂಟಾದ ಸಂದರ್ಭದಲ್ಲಿ ಅವರ ಚಿಕಿತ್ಸೆಗೂ ಸ್ಪಂದಿಸಲಾಗುತ್ತಿದೆ. ಹಾಲು ಪೂರೈಕೆದಾರರ ದನವು ಮರಣ ಹೊಂದಿದಲ್ಲಿ ಅಪಘಾತ ನಿಧಿಯಿಂದ ಪರಿಹಾರ ಮೊತ್ತ ನೀಡುತ್ತಿರುವುದು ವಿಶೇಷ.
ರೈತ ಸಮುದಾಯಕ್ಕೆ ಹೈನುಗಾರಿಕೆಯ ಅಭಿರುಚಿ ಹಚ್ಚಿಸಿ ಉದ್ಯಮಶೀಲರನ್ನಾಗಿ ರೂಪಿಸಲು ಪ್ರಯತ್ನಿಸುತ್ತಿರುವುದು ಕಟಪಾಡಿ ಹಾಲು ಉತ್ಪಾದಕರ ಸಂಘ. ಸದಸ್ಯರ ಹಿತವನ್ನು ರಕ್ಷಿಸಲು ಗಮನ ಕೊಡುತ್ತಿರುವುದು ಇದರ ಮಾನವೀಯ ಮುಖವನ್ನು ಪರಿಚಯಿಸಬಲ್ಲದು.
- ವಿಜಯ ಆಚಾರ್ಯ, ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಹಿಂದೂ, ಸಿಕ್ಖ್ ಅರ್ಚಕರಿಗೆ 18,000 ರೂ.: ನೋಂದಣಿ ಶುರು
Yemen; ಕೇರಳದ ನರ್ಸ್‌ಗೆ ಗಲ್ಲು: ಯೆಮೆನ್ ಅಧ್ಯಕ್ಷ ಸಮ್ಮತಿ
Editorial; ಜಗತ್ತಿನೆಲ್ಲೆಡೆ ಅನುರಣಿಸಲಿ ಶಾಂತಿ, ಸಹಬಾಳ್ವೆಯ ಮಂತ್ರ
Work-life balance; ಹೆಚ್ಚು ಸಮಯ ಕಳೆದರೆ ಪತ್ನಿ ಓಡಿ ಹೋಗಬಹುದು: ಗೌತಮ್ ಅದಾನಿ
KTR ಫಾರ್ಮುಲಾ ರೇಸ್ ಕೇಸ್ ರದ್ದು: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.