ಕಡಿಮೆ ಖರ್ಚಲ್ಲಿ ಅಂತರ್ಜಲ ವೃದ್ಧಿಸುವ ಯತ್ನ
ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ
Team Udayavani, Aug 30, 2019, 5:36 AM IST
ಪಳ್ಳಿ: ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಾಡಿ ಅಶೋಕ ನಗರ ನಿವಾಸಿ ಜಯಲಕ್ಷ್ಮೀ ಅವರು ಉದಯವಾಣಿಯ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತಗೊಂಡು ಮನೆಯ ಮೇಲ್ಛಾವಣಿಯಿಂದ ಮಳೆ ನೀರನ್ನು 500 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್‌ಗೆ ಹಾಯಿಸಿ ನೇರವಾಗಿ ಬಾವಿಗೆ ಸೇರುವಂತೆ ಮಾಡಿದ್ದಾರೆ.
ಸುಮಾರು 5,000 ರೂ. ವೆಚ್ಚದಲ್ಲಿ ಮಳೆಕೊಯ್ಲು ಮಾಡಿರುವ ಇವರು ಅಂತರ್ಜಲ ಹೆಚ್ಚಿಸುವಲ್ಲಿ ಇತರರಿಗೂ ಮಾದರಿಯಾಗಿದ್ದಾರೆ. ಮಳೆ ನೀರನ್ನು ಟ್ಯಾಂಕ್‌ಗೆ ಹಾಯಿಸಿ ಸೋಸುವಿಕೆ ಪ್ರಕ್ರಿಯೆ ಬಳಿಕ ನೇರವಾಗಿ ಬಾವಿಗೆ ಸೇರುವ ವ್ಯವಸ್ಥೆಯನ್ನು ಮಾಡಲಾಗಿದೆ. ಬೇಸಗೆಯಲ್ಲಿ ಬಾವಿಯ ನೀರು ತಳ ಸೇರುತ್ತಿದ್ದು ಈ ನಿಟ್ಟಿನಲ್ಲಿ ಮಳೆ ಕೊಯ್ಲು ನಿರ್ಮಿಸಿ ಪೋಲಾಗುತ್ತಿದ್ದ ಮಳೆ ನೀರನ್ನು ಬಾವಿಗೆ ಇಂಗಿಸಿ ಅಂತರ್ಜಲ ವೃದ್ಧಿಸುವ ಕಾರ್ಯ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಕಡಿಮೆ ಖರ್ಚು
ಬೇಸಗೆಯಲ್ಲಿ ಬಾವಿಯ ನೀರು ತಳ ಸೇರುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ನಿರ್ಮಿಸಿ ಸಮಸ್ಯೆಯ ಪರಿಹಾರಕ್ಕೆ ಯತ್ನಿಸಲಾಗಿದೆ.
-ಜಯಲಕ್ಷ್ಮೀ ಕುಂಟಾಡಿ
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.