ಕಾರ್ಕಳ: ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಜಾತ್ರೆ ಆರಂಭ
Team Udayavani, Jan 28, 2019, 12:50 AM IST
ಕಾರ್ಕಳ: ಸಂತ ಲಾರೆನ್ಸ್ ಬಸಿಲಿಕ, ಅತ್ತೂರು ಜಾತ್ರೆಗೆ ಜ.27ರಂದು ವಿಧ್ಯುಕ್ತವಾಗಿ ಚಾಲನೆ ದೊರೆತಿದೆ. 5 ದಿನಗಳ ಕಾಲ ನಡೆಯುವ ಸಾಂತ್ ಮಾರಿ ಹಬ್ಬಕ್ಕೆ ದೇಶ, ವಿದೇಶದಿಂದ ಜನ ಜಾತ್ರೆಯೇ ಹರಿದು ಬರುತ್ತಿದೆ. 27ರಂದು ಬೆಳಗ್ಗೆ 7.30ಕ್ಕೆ ಬಸಿಲಿಕದ ನಿರ್ದೇಶಕ, ಧರ್ಮಕೇಂದ್ರದ ಪ್ರಧಾನ ಗುರು ವಂ| ಜಾರ್ಜ್ ಡಿ’ಸೋಜಾ ಧ್ವಜಾರೋಹಣಗೈದರು.
ಅನಂತರ ಫಾ| ಚೇತನ್ ಲೋಬೋ ಪರಮ ಪ್ರಸಾದದ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ದೂಪದಕಟ್ಟೆ ತನಕ ಸಾಗಿ ಅಲ್ಲಿ ಫಾ| ಚೇತನ್ ಲೋಬೋ ಪ್ರವಚನ ನೀಡಿದರು.
ಶಾಂತಿ, ಸಮಾಧಾನ, ಸಂತೋಷದ ಹುಡುಕಾಟದಲ್ಲಿ ಅನೇಕರು ಇಂದು ಪರಿತಪಿಸುತ್ತಿದ್ದು, ಅದಕ್ಕಾಗಿ ನಾನಾ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ದೇವರ ಮೇಲಿನ ಅಚಲ ನಂಬಿಕೆ, ಧ್ಯಾನದ ಮೂಲಕ ನೆಮ್ಮದಿಯನ್ನು ಕಾಣಲು ಸಾಧ್ಯ. ಸಂತ ಲಾರೆನ್ಸ್ ಅವರು ಇತರರ ಹಿತದಲ್ಲಿ ದೇವರನ್ನು ಕಂಡವರು. ಹೀಗೆ ಮನೆಯವರ, ನೆರೆಯವರ ಒಳಿತನ್ನು ಬಯಸಿದಲ್ಲಿ ಇಲ್ಲೇ ಸ್ವರ್ಗವನ್ನು ಕಾಣಬಹುದು ಎಂದರು.
ಏಸು ಅರಮನೆಯ ಚಿನ್ನದ ತೊಟ್ಟಿಲಿನಲ್ಲಿ ಹುಟ್ಟಿದವರಲ್ಲ. ಅವರು ಬಟ್ಟೆಯಲ್ಲಿ ಸುತ್ತಿ ಗೋದಲಿಯಲ್ಲಿ ಹುಟ್ಟಿದವರು ಎಂದು ಅವರು ಯೇಸುವಿನ ಸಂದೇಶ ಸಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.