ಜ. 26ರಿಂದ 30ರ ವರೆಗೆ ವಾರ್ಷಿಕ ಮಹೋತ್ಸವ
ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ
Team Udayavani, Jan 21, 2020, 1:46 AM IST
ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ (ಸಾಂತ್‌ಮಾರಿ) ಜ. 26ರಿಂದ 30ರ ವರೆಗೆ ಜರಗಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ ಎಂದು ಬಸಿಲಿಕಾದ ನಿರ್ದೇಶಕ ವಂ| ಜಾರ್ಜ್ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಕ್ತರ ಸುರಕ್ಷೆಯ ದೃಷ್ಟಿಯಿಂದ ಬಸಿಲಿಕಾದ ಒಳಗಡೆ ಮತ್ತು ವಠಾರದಲ್ಲಿ 64 ಸಿಸಿ ಕೆಮರಾ ಅಳವಡಿಸಲಾಗಿದೆ. ಕೆಎಸ್‌ಆರ್‌ಪಿ, ಡಿಎಆರ್, ಸಿವಿಲ್ ಪೊಲೀಸ್, ಸಂಚಾರ ಪೊಲೀಸರು, ಗೃಹರಕ್ಷಕ ದಳ ತಂಡ, ಬಾಂಬ್ ನಿಷ್ಕ್ರಿಯ ದಳ ಬಂದೋಬಸ್ತ್ ನಡೆಸಲಿವೆ.
ಜ. 27ರಂದು ಬೆಳಗ್ಗೆ 10 ಮತ್ತು ಅಪರಾಹ್ನ 3.30ಕ್ಕೆ ಅಸ್ವಸ್ಥರಿಗಾಗಿ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ ಜರಗಲಿದೆ. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿಯಲ್ಲಿ 34 ಮತ್ತು ಕನ್ನಡದಲ್ಲಿ 14 ಹೀಗೆ ಒಟ್ಟು 48 ದಿವ್ಯ ಬಲಿಪೂಜೆಗಳನ್ನು ಅರ್ಪಿಸಲಾಗುವುದು. ಭಕ್ತರಿಗೆ ಸುಲಭ ವೀಕ್ಷಣೆಗಾಗಿ ದೊಡ್ಡ ಗಾತ್ರದ ಎಲ್‌ಇಡಿ ಅಳವಡಿಸಿ 3 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಬಲಿಪೂಜೆ
ಶಿವಮೊಗ್ಗ, ಬೆಳ್ತಂಗಡಿ, ಚಿಕ್ಕಮಗಳೂರು, ಪುತ್ತೂರು, ಮಂಗಳೂರು ಮತ್ತು ಉಡುಪಿ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು ಆಗಮಿಸಿ ದಿವ್ಯ ಬಲಿಪೂಜೆ ಅರ್ಪಿಸುವರು. ಬಸಿಲಿಕಾ ವಠಾರದಲ್ಲಿರುವ ಅಧಿಕೃತ ಸ್ಟಾಲ್‌ನಲ್ಲಿ ಮಾತ್ರ ಮೋಂಬತ್ತಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅನಧಿಕೃತ ಮೋಂಬತ್ತಿ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಭಿಕ್ಷಾಟನೆ ನಿಷಿದ್ಧ
ಜಾತ್ರೆ ಸಮಯದಲ್ಲಿ ಭಿಕ್ಷಾಟನೆಯನ್ನು ಮತ್ತು ಹಬ್ಬದ ಶುಕ್ರವಾರ ಭಿಕ್ಷುಕರಿಗೆ ನೀಡುತ್ತಿದ್ದ ಹಣ ವಿತರಣೆಯನ್ನು ನಿಷೇಧಿಸಲಾಗಿದೆ. ಸಹಾಯಕ ಧರ್ಮಗುರು ರೋಯ್ ಲೋಬೋ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಜಾನ್ ಡಿ’ಸಿಲ್ವಾ, ಕಾರ್ಯದರ್ಶಿ ಲೀನಾ ಡಿ’ಸಿಲ್ವಾ, ಸದಸ್ಯ ಸಂತೋಷ್ ಡಿ’ಸಿಲ್ವಾ, ರೋನಾಲ್ಡ್ ನೋರೋನ್ಹಾ, ವಲೇರಿಯನ್ ಪಾಯಸ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಾರ್ಥನೆಗೆ ಅವಕಾಶ
ಬಸಿಲಿಕಾದ ಬಲ ಬದಿಯಲ್ಲಿ ಅಂದರೆ ಪವಾಡ ಮೂರ್ತಿ ಪ್ರತಿಷ್ಠಾಪಿಸಿದ ಪಕ್ಕದಲ್ಲಿ ಕೆಥೋಲಿಕ್ ಕ್ರೈಸ್ತರಿಗೆ ಪಾಪನಿವೇದನೆಗೆ ವ್ಯವಸ್ಥೆ ಮಾಡಲಾಗಿದೆ. ದೇವಾಲಯದ ಒಳಗೆ ಪ್ರಾರ್ಥನೆಗೆ ಮಾತ್ರ ಅವಕಾಶ. ಹರಕೆಗಳನ್ನು ಸಲ್ಲಿಸಲು ದೇವಾಲಯದ ಎಡಬದಿಯಲ್ಲಿ ಅವಕಾಶವಿದೆ. 5 ಕಡೆಗಳಲ್ಲಿ ಶುದ್ಧ ನೀರು, ತಂಪು ನೀರಿನ ವ್ಯವಸ್ಥೆ ಮಾಡಲಾಗಿದೆ. 40 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯವಿದೆ.
ಪಾರ್ಕಿಂಗ್
ದೂಪದಕಟ್ಟೆ ದ್ವಾರ ಪ್ರವೇಶಿಸುವಲ್ಲಿ ವಾಹನ ಪಾರ್ಕಿಂಗ್‌ಗೆ ವಿಸ್ತಾರವಾದ ಜಾಗವನ್ನು ಗುರುತಿಸಲಾಗಿದೆ. ಕೊಡಂಗೆ, ಸಂತ ಲಾರೆನ್ಸ್ ಹೈಸ್ಕೂಲ್ ಆಟದ ಮೈದಾನ, ಚೇತನಹಳ್ಳಿ-ಗುಂಡ್ಯಡ್ಕ ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕಾರ್ಯಕ್ರಮಗಳು
ಜ. 26ರಂದು ಅಪರಾಹ್ನ 2.30 ಮತ್ತು 4.30ಕ್ಕೆ ಮಕ್ಕಳಿಗಾಗಿ ಬಲಿ ಪೂಜೆ ಮತ್ತು ವಿಶೇಷ ಪ್ರಾರ್ಥನೆ
ನೆರವೇರಲಿದೆ. ರಾತ್ರಿ 10.30ಕ್ಕೆ ಕ್ರಿಸ್ತ ಕಾರುಣ್ಯ ಯಕ್ಷಗಾನ ಬೊಂಬೆಯಾಟ ಪ್ರದರ್ಶನಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.