ಅತ್ತೂರು: ವೈಭವದ ಮಹೋತ್ಸವಕ್ಕೆ ತೆರೆ
Team Udayavani, Feb 1, 2019, 1:00 AM IST
ಕಾರ್ಕಳ: ಕಳೆದ ಐದು ದಿನಗಳಿಂದ ವೈಭವಯುತವಾಗಿ ನಡೆಯುತ್ತಿದ್ದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ಗುರುವಾರ ವಿಧ್ಯುಕ್ತ ವಾಗಿ ಸಂಪನ್ನಗೊಂಡಿತು.
ಮಹೋತ್ಸವದ ಕೊನೆಯ ದಿನವನ್ನು ಮಾರ್ಗದರ್ಶಿ ಮಾತೆಯ ಹಬ್ಬವೆಂದು ಆಚರಿಸಲಾಯಿತು. ಬೆಳಗ್ಗಿನ ಪ್ರಮುಖ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ನೆರವೇರಿ ಸಿದರು. ಬಳಿಕ ಪ್ರವಚನ ನೀಡಿದ ಅವರು, ದೈನಂದಿನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನೆರವೇರಿಸಿ, ನಿರ್ಮಲ ಹೃದಯವಂತಿಕೆಯಿಂದ ದೇವರಿಗೆ ವಿಧೇಯರಾಗಿ ಬಾಳಿದಾಗ ಬದುಕಿನಲ್ಲಿ ಪಾವಿತ್ರ್ಯ ಪಡೆಯಲು ಸಾಧ್ಯ ಎಂದರು.
ಉಡುಪಿ ಜಿÇÉಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಅದಾನಿ ಯುಪಿಸಿಎಲ್‌ನ ಕಿಶೋರ್ ಆಳ್ವ ಅವರು ಕೊನೆಯ ದಿನ ಬಸಿಲಿಕಾಕ್ಕೆ ಭೇಟಿ ನೀಡಿದರು. ಗುರುವಾರ ಹತ್ತು ಬಲಿಪೂಜೆಗಳು ನಡೆದವು. ರಾತ್ರಿ 9.30ರ ವೇಳೆ ಕೊನೆಯ ದಿವ್ಯ ಬಲಿಪೂಜೆ ನೆರವೇರಿತು.
ಮಹೋತ್ಸವವು ಉಡುಪಿ ಧರ್ಮಾಧ್ಯಕ್ಷರ ಮಾರ್ಗದರ್ಶನದಲ್ಲಿ, ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕರಾದ ವಂ| ಜಾರ್ಜ್ ಡಿ’ಸೋಜಾ, ಸಹಾಯಕ ಧರ್ಮಗುರು ವಂ| ಜೆನ್ಸಿಲ್ ಆಳ್ವ ಅವರ ನೇತೃತ್ವದಲ್ಲಿ ಜರಗಿತು. ಆರು ಧರ್ಮಾಧ್ಯಕ್ಷರು ಮತ್ತು ನಾಲ್ಕು ನೂರಕ್ಕೂ ಹೆಚ್ಚು ಧರ್ಮಗುರುಗಳು ಆಧ್ಯಾತ್ಮಿಕ ಸೇವೆ ಸಲ್ಲಿಸಿದರು.
ಈ ಪುಣ್ಯ ಕ್ಷೇತ್ರವನ್ನು ಬಸಿಲಿಕಾವೆಂದು ಘೋಷಿಸಿದ ಅನಂತರ ಇಲ್ಲಿಗಾಗಮಿಸುವ ದೇಶ ವಿದೇಶಗಳ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಈ ಬಾರಿ ಜನಜಾತ್ರೆಯೇ ನೆರೆದಿತ್ತು. ಹರಕೆ ಹೊತ್ತವರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಂತ ಲಾರೆನ್ಸರ ಮುಖಾಂತರ ದೇವರಲ್ಲಿ ಪ್ರಾರ್ಥಿಸಿದರು. ಪಾಪ ನಿವೇದನೆ ಮುಖಾಂತರ ಮನಃಪರಿವರ್ತನೆ ಮಾಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.