“ದೇವರ ಧ್ಯಾನಿಸಿದರೆ ಸದ್ಗುಣ ಫಲ’: ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವ
Team Udayavani, Jan 23, 2023, 5:50 AM IST
ಕಾರ್ಕಳ: ದೇವರ ವಾಕ್ಯವನ್ನು ಆಲಿಸಿ, ಅದನ್ನು ಧ್ಯಾನಿಸಿ, ಜೀವನದಲ್ಲಿ ಪಾಲಿಸಿದಾಗ ಸದ್ಗುಣಗಳ ಫಲವನ್ನು ಪಡೆಯಲು ಸಾಧ್ಯ. ಈ ಮುಖಾಂತರ ನಾವೆಲ್ಲರೂ ದೇವರ ಪ್ರೀತಿಯ ಮಕ್ಕಳಾಗುತ್ತೇವೆ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಹೇಳಿದರು.
ರವಿವಾರ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ವಿಷಯ ನೀವು ನನಗೆ ಸಾಕ್ಷಿಗಳಾಗುವಿರಿ. ದೇವರ ವಾಕ್ಯದ ಪ್ರಯುಕ್ತ ವಿಶೇಷ ಪ್ರಭೋದನೆ ನೀಡಿ ಅವರು ಮಾತನಾಡಿದರು.
ಪುಣ್ಯಕ್ಷೇತ್ರದ ಪ್ರಧಾನ ಧರ್ಮಗುರು ವಂ| ಅಲ್ಬನ್ ಡಿ’ಸೋಜಾ ಅವರು ಬೆಳಗ್ಗೆ ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿ ಮಹೋತ್ಸವಕ್ಕೆ ಚಾಲನೆ ನೀಡಿದರು.
ಶಿವಮೊಗ್ಗ ಧರ್ಮಪ್ರಾಂತದ ಧರ್ಮಗುರು ವಂ| ಸ್ವಾಮಿ ಪಿಯುಸ್ ಡಿ’ಸೋಜಾ ಬಲಿಪೂಜೆ ನೆರವೇರಿಸಿ ಮಕ್ಕಳಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನೂರಾರು ಹೆತ್ತವರು ತಮ್ಮ ತಮ್ಮ ಪುಟಾಣಿ ಮಕ್ಕಳೊಂದಿಗೆ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ದಿನದ ಇತರ ಬಲಿಪೂಜೆಗಳನ್ನು ವಂ| ಲಿಯೊ ಲಸ್ರಾದೊ, ಮಂಗಳೂರು ವಂ| ರೊಕ್ ಡಿ’ಸೋಜಾ, ಸಂತೆಕಟ್ಟೆ, ವಂ| ಆ್ಯಂಡ್ರೂ ಡಿ’ಸೋಜಾ, ಬಜಾಲ್ ಮತ್ತು ಉಡುಪಿ ಶೋಕಮಾತ ಚರ್ಚಿನ ಪ್ರಧಾನ ಧರ್ಮಗುರು ವಂ| ಚಾರ್ಲ್ಸ್ ಮಿನೇಜಸ್ ಇವರು ನೆರವೇರಿಸಿದರು. ದಿನದ ಏಕೈಕ ಕನ್ನಡ ಬಲಿಪೂಜೆಯನ್ನು ವಂ| ಮ್ಯಾಕ್ಸಿಮ್ ಮಿಸ್ಕಿತ್ ನೆರವೇರಿಸಿದರು.
ಈ ಸಂದರ್ಭ ಬೈಬಲ್ ಪವಿತ್ರ ಗ್ರಂಥದ ವಿವರಣೆಯನ್ನು ಒಳಗೊಂಡ ವಂ| ಡೊ. ರೊಕ್ ಡಿ’ಸೋಜಾರವರ ಚೊಚ್ಚಲ ಪುಸ್ತಕ ಬೈಬಲ್ ಸಳಾವಳ್ ಅನ್ನು ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಲೋಕಾರ್ಪಣೆಗೊಳಿಸಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ಇತರ ಗಣ್ಯರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಂತ ಲಾರೆನ್ಸರ ಅನುಗ್ರಹವನ್ನು ಪಡೆದರು.
ದಿನದ ಅಂತಿಮ ಬಲಿಪೂಜೆಯನ್ನು ಸಂಜೆ 8 ಗಂಟೆಗೆ ನೆರವೇರಿಸಿ ಮಹೋತ್ಸವದ ಪ್ರಥಮ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು.
ಬಲಿಪೂಜೆಗಳ ಸಮಯ
ಮಹೋತ್ಸವದ ಮುಂದಿನ ನಾಲ್ಕು ದಿನಗಳಲ್ಲಿ (ಸೋಮವಾರದಿಂದ ಗುರುವಾರ) ಬೆಳಗ್ಗೆ 8, 10, 12 ಹಾಗೂ ಮಧ್ಯಾಹ್ನ 2, 4 ಮತ್ತು 6, 8 ಗಂಟೆಗೆ ಬಲಿಪೂಜೆಗಳು ನೆರವೇರಲಿವೆ. ಜ. 23 ಬೆಳಗ್ಗೆ 10ಕ್ಕೆ ಪುತ್ತೂರು ಸೀರೊ ಮಲಂಕರ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೀವರ್ಗಿàಸ್ ಮಾರ್ ಮಕರಿಯೊಸ್ ಕಲಯಿಲ್ ಇವರು ನೆರವೇರಿಸಲಿದ್ದಾರೆ. 22 ರಿಂದ 26 ರವೆರೆಗೆ ಬಲಿಪೂಜೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.