ರಿಕ್ಷಾನಿಲ್ದಾಣದ ಬಳಿ ತರಕಾರಿ ಬೆಳೆದು ಮಾದರಿಯಾದ ಆಟೋ ಚಾಲಕರು

 ಕಾಲಹರಣದ ಬದಲು ಪರಿಶ್ರಮದ ಕೆಲಸ

Team Udayavani, Feb 16, 2020, 5:23 AM IST

1502SHIRVA1A

ಶಿರ್ವ: ಆಟೋರಿಕ್ಷಾ ಪಾರ್ಕ್‌ ಮಾಡಿ ಬಾಡಿಗೆ ಇಲ್ಲದ ಸಮಯದಲ್ಲಿ ಕಾಲಹರಣ ಮಾಡುವ ಬದಲು ಆ ಸಮಯವನ್ನು ತರಕಾರಿ ಬೆಳೆಯುವ ಮೂಲಕ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು ಪಿಲಾರು ಪ್ರಿನ್ಸ್‌ ಪಾಯಿಂಟ್‌ ರಿಕ್ಷಾ ನಿಲ್ದಾಣದ ಆಟೋ ಚಾಲಕರು ಇತರರಿಗೆ ಮಾದರಿಯಾಗಿದ್ದಾರೆ.

ಕಟಪಾಡಿ-ಶಿರ್ವ-ಬೆಳ್ಮಣ್‌ ಮುಖ್ಯರಸ್ತೆಯ ಶಿರ್ವ ಸಮೀಪದ ಪಿಲಾರು ಪ್ರಿನ್ಸ್‌ ಪಾಯಿಂಟ್‌ ಬಸ್ಸು ನಿಲ್ದಾಣದ ಬಳಿ ರಿಕ್ಷಾ ತಂಗುದಾಣವಿದೆ. ಪೆರ್ನಾಲು, ಕುಂಜಿಗುಡ್ಡೆ,ಪಿಲಾರು,ಸೊರ್ಪು ಕಡೆ ತೆರಳುವ ಪ್ರಯಾಣಿಕರಿಗೆ ಪ್ರಿನ್ಸ್‌ ಪಾಯಿಂಟ್‌ ಪ್ರಮುಖ ಜಂಕ್ಷನ್‌ ಆಗಿದ್ದು,ಶಿರ್ವ- ಬೆಳ್ಮಣ್‌ ಭಾಗದಿಂದ ಬರುವ ಪ್ರಯಾಣಿಕರು ಇಲ್ಲಿಯ ರಿಕ್ಷಾಗಳನ್ನು ಅವಲಂಬಿಸಿದ್ದಾರೆ. ತಂಗುದಾಣದಲ್ಲಿ ಸುಮಾರು 14 ರಿಕ್ಷಾಗಳು ಬಾಡಿಗೆಗೆ ನಿಲ್ಲುತ್ತಿದ್ದು ಎಲ್ಲಾ ಚಾಲಕರು ಯುವಕರಾಗಿದ್ದು ಕೃಷಿ ಹಿನ್ನೆಲೆಯಿಂದಲೇ ಬಂದವರಾಗಿದ್ದಾರೆ. ನಿಲ್ದಾಣದ ಪಕ್ಕ ಅತ್ತಿತ್ತ ಕಣ್ಣು ಹಾಯಿಸಿದರೆ ಗೋಚರಕ್ಕೆ ಬರುವುದು ತರಕಾರಿ ಗಿಡ, ಬಳ್ಳಿಗಳು ಮಾತ್ರ. ಬಾಡಿಗೆಯಿಲ್ಲದ ಸಮಯದಲ್ಲಿ ಮೊಬೈಲ್‌ಲ್ಲಿ ಆಟವಾಡಿ ಕಾಲ ಕಳೆಯುವ ಬದಲಾಗಿ ರಸ್ತೆ ಬದಿ ತರಕಾರಿ ಬೆಳೆಯುತ್ತಿದ್ದಾರೆ.

ತರಕಾರಿ ಬೆಳೆದರು
ಫಲವತ್ತಾದ ಕೃಷಿ ಭೂಮಿಯಿದ್ದರೂ ಹಡಿಲು ಬಿಟ್ಟು ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ರಸ್ತೆ ಬದಿ ತರಕಾರಿ ಬೆಳೆಯುವ ಮೂಲಕ ಯುವಕರು ಇತರರಿಗೆ ಮಾದರಿಯಾಗಿದ್ದಾರೆ. ಬಿಡುವಿನ ವೇಳೆ ಸುಮ್ಮನೆ ಉಳಿತು ಕಾಲಹರಣ ಮಾಡುವ ಬದಲು ಅರಣ್ಯ ಇಲಾಖೆ ನೆಟ್ಟ ಗಿಡಗಳ ಬುಡದಲ್ಲಿ ಹಾಗೂ ರಸ್ತೆಯ ಸಮೀಪ ವಿವಿಧ ಬಗೆಯ ತರಕಾರಿ ಗಿಡ ಬಳ್ಳಿಗಳನ್ನು ಬೆಳೆದು ಉತ್ತಮ ಫಸಲು ತೆಗೆಯುತ್ತಿದ್ದಾರೆ. ನಿಲ್ದಾಣದ ಬಳಿ ತರಕಾರಿ ಕೈ ತೋಟದ ಆಲೋಚನೆ ಮಾಡಿದ ಪಿಲಾರು ಮಿತ್ತಬೆಟ್ಟು ಅಡಿಪುಮನೆ ಸತೀಶ್‌ ಎಂಬವರು ತನ್ನ ಬಿಡುವಿನ ವೇಳೆ ವ್ಯರ್ಥವಾಗಬಾರದು, ಸಮಯವನ್ನು ಸದುಪಯೋಗವಾಗಬೇಕೆಂದು ಹರಿವೆಯನ್ನು ಪ್ರಾಯೋಗಿಕವಾಗಿ ಬೆಳೆಸಿ ಯಶಸ್ವಿಯಾದರು. ಇದೀಗ ರಿಕ್ಷಾನಿಲ್ದಾಣದ ಸುತ್ತ ವಿವಿಧ ಬಗೆಯ ತರಕಾರಿ ಗಿಡಗಳು ಬೆಳೆದು ನಿಂತಿದ್ದು ಉತ್ತಮ ಫಸಲು ನೀಡುತ್ತಿವೆ.

ವಿವಿಧ ಬಗೆಯ ತರಕಾರಿ
ರಸ್ತೆಯ ಬದಿಯ ಅಲ್ಪ ಜಾಗದಲ್ಲಿ ಅಲಸಂಡೆ, ತೊಂಡೆಕಾಯಿ, ಹರಿವೆ, ಬಸಳೆ, ಬೆಂಡೆ ಗಿಡ, ಮೆಕ್ಕೆಜೋಳ, ಟೊಮೆಟೋ ಮತ್ತಿತರ ಗಿಡ ಬಳ್ಳಿಗಳನ್ನು ಬೆಳೆದಿದ್ದಾರೆ.

ರಿಕ್ಷಾ ಚಾಲಕ ಸತೀಶ್‌ ತನ್ನ ಮನೆಯಿಂದ ಗೊಬ್ಬರ, ಸುಡುಮಣ್ಣು ತಂದು ಹಾಕಿ ಬೆಳೆಯನ್ನು ಉತ್ತಮವಾಗಿ ಪೋಷಿಸುತ್ತಿದ್ದು, ಇತರ ರಿಕ್ಷಾ ಚಾಲಕರಾದ ದಿನೇಶ್‌, ಕಲಾವಿದ ಸತೀಶ್‌ ಪಿಲಾರ್‌, ನವೀನ್‌, ವಸಂತ, ಅಣ್ಣು ಅವರೊಂದಿಗೆ ಕೈಜೋಡಿಸುತ್ತಿದ್ದಾರೆ.

ತರಕಾರಿ ಗಿಡಗಳಿಗೆ ನೀರುಣಿಸಲು ಸಮೀಪದ ಬಾರೊಂದರ ಮಾಲೀಕರು ಪೈಪ್‌ನ ಮೂಲಕ ನಿತ್ಯ ನೀರು ನೀಡುತ್ತಿದ್ದು,ಉತ್ತಮವಾಗಿ ತರಕಾರಿ ಬೆಳೆಯಲು ಸಾಧ್ಯವಾಗಿದೆ ಎನ್ನುವುದು ರಿಕ್ಷಾ ಚಾಲಕರ ಮನ ದಾಳದ ಮಾತು.

ಶುಚಿಯಾದ ತಂಗುದಾಣ
ನಿತ್ಯ ತರಕಾರಿಗಳ ಗಿಡಗಳ ಪೋಷಣೆ ಯೊಂದಿಗೆ‌ ತಂಗುದಾಣವನ್ನು ದಿನನಿತ್ಯ ನೀರು ಹಾಕಿ ತೊಳೆದು ಸ್ವತ್ಛಗೊಳಿಸುತ್ತೇವೆ. ಜತೆಗೆ ಉದಯವಾಣಿ ದಿನಪತ್ರಿಕೆಯನ್ನು ಪ್ರಯಾಣಿಕರಿಗೆ ಉಚಿತವಾಗಿ ಓದಲು ಇರಿಸುತ್ತೇವೆ ಎನ್ನುತ್ತಾರೆ ರಿಕ್ಷಾಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಜೇಂದ್ರ ಶೆಟ್ಟರು.

ಕಾರ್ಯ ಶ್ಲಾಘನೀಯ
ನಿಲ್ದಾಣದ ಸಮೀಪ ತರಕಾರಿ ಬೆಳೆದ ರಿಕ್ಷಾ ಚಾಲಕರ ಕಾರ್ಯ ಮೆಚ್ಚುವಂತದ್ದು. ಹಸಿರು ತರಕಾರಿ ಬೆಳೆಸುವ ಉತ್ತಮ ಮಾದರಿ ಕಾರ್ಯವಾಗಿದ್ದು, ಎಲ್ಲಾ ರಿûಾ ಚಾಲಕರಿಗೆ ಪ್ರೇರಣೆಯಾಗಲಿ ಎಂದು ಪೆರ್ನಾಲ್‌ ಶಿಕ್ಷಕರಾದ ಅಲ್ವಿನ್‌ ದಾಂತಿ ಅವರ ಅಭಿಪ್ರಾಯ.

ಉತ್ತಮ ಫ‌ಸಲು
ಬಾಡಿಗೆ ಇಲ್ಲದ ಬಿಡುವಿನ ವೇಳೆಯಲ್ಲಿ ಸಮಯ ವ್ಯರ್ಥವಾಗಬಾರದು ಎನ್ನುವ ನಿಟ್ಟಿನಲ್ಲಿ ಇರುವ ಅಲ್ಪ ಜಾಗದಲ್ಲಿ ತರಕಾರಿಯನ್ನು ಬೆಳೆದಿದ್ದೇವೆ. ನವಿಲು ಮಂಗಗಳ ಕಾಟವಿಲ್ಲದೆ ರಸ್ತೆ ಬದಿಯ ಧೂಳಿನ ಕಣ ಗಿಡಗಳಿಗೆ ಬೀಳುವುದರಿಂದ ಗಿಡಗಳಿಗೆ ರೋಗಬಾಧೆಯಿರದೆ ಉತ್ತಮ ಫಸಲು ಬರುತ್ತಿದೆ.
– ಸತೀಶ್‌, ತರಕಾರಿ ಬೆಳೆದ ಚಾಲಕ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.