![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 24, 2021, 1:14 PM IST
ಉಡುಪಿ: ಜಿಲ್ಲೆಯಲ್ಲಿ ಸದ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಮದುವೆ, ಮೆಹಂದಿ ಸಮಾರಂಭಗಳಲ್ಲಿ ಭಾಗವಹಿಸುವವರಲ್ಲೇ ಹೆಚ್ಚಾಗಿ ಸೋಂಕು ಕಂಡು ಬರುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಮದುವೆಯಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಬೇಡ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ವಿಡಿಯೋ ಮುಖಾಂತರ ಮಾಹಿತಿ ನೀಡಿರುವ ಅವರು, ಸಾಧ್ಯವಾದರೆ ಮದುವೆ ಸಮಾರಂಭಗಳನ್ನು ಮುಂದೂಡಿ. ಮದುವೆ ನೆಪದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಲ್ಲೂ ಸೋಂಕು ಕಂಡುಬಂದಿದೆ. ಮದುವೆಗಳಲ್ಲಿ ಭಾಗವಹಿಸಿ ನಿಮ್ಮ ಹಿರಿಯರನ್ನು ಕಳೆದುಕೊಳ್ಳಬೇಡಿ .ಮೆಹಂದಿ ಕಾರ್ಯಕ್ರಮ ಮಾಡಿದವರ ಮತ್ತು ಭಾಗವಹಿಸಿದವರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದರು.
ಇದನ್ನೂ ಓದಿ:ಕೋವಿಡ್ ಲಸಿಕೆಯಲ್ಲಿ ಅಕ್ರಮ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ: ಬೊಮ್ಮಾಯಿ
ನಾನು ಸಾಕಷ್ಟು ಹೋಂ ಐಸೋಲೇಶನ್ ನಲ್ಲಿರುವ ಜನರನ್ನು ಭೇಟಿಯಾಗಿದ್ದೇನೆ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಓಡಾಡುವ, ಅಂಗಡಿಗಳ ಮುಖಾಂತರವೂ ಸಾಕಷ್ಟು ಜನರಿಗೆ ಸೋಂಕು ತಾಗಿದೆ. ಹಾಗಾಗಿ ಅನಗತ್ಯವಾಗಿ ಓಡಾಡಬೇಡಿ ಎಂದರು.
ಜನರು ಸಹಕಾರ ನೀಡಿದರೆ ಜಿಲ್ಲೆಯಲ್ಲಿ ಇನ್ನು15 ದಿನದಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗುತ್ತದೆ. ಹೀಗಾಗಿ ಮತ್ತೊಂದು ಲಾಕ್ ಡೌನ್ ವಿಸ್ತರಣೆಗೆ ಅವಕಾಶ ಕೊಡಬೇಡಿ ಎಂದು ಡಿಸಿ ಜಗದೀಶ್ ಹೇಳಿದರು.
You seem to have an Ad Blocker on.
To continue reading, please turn it off or whitelist Udayavani.